ತಮಿಳುನಾಡಿನಲ್ಲಿ ಒಂದೇ ದಿನ ೧೧೦ ಕೊರೊನಾ ಪ್ರಕರಣ
ಎಲ್ಲರೂ ದೆಹಲಿಯ ತಬ್ಲಿಘಿಯಿಂದ ಬಂದವರು..!
ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ೧೧೦ ಕೊರೊನಾ ಸೋಂಕು ಸಾಬೀತಾದ ಪ್ರಕರಣಗಳು ಪತ್ತೆಯಾಗಿದ್ದು. ಈ ಎಲ್ಲ ಸೋಂಕಿತರು ದೆಹಲಿಯ
ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬುದು 2020 ಏಪ್ರಿಲ್ 01ರ ಬುಧವಾರ ಖಚಿತವಾಯಿತು.
ಇದರೊಂದಿಗೆ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೨೩೪ಕ್ಕೆ ಏರಿತು.
ಕಳೆದ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲಿಘಿ ಜಮಾತ್
ಧಾರ್ಮಿಕ ಸಮಾವೇಶದಲ್ಲಿ ತಮಿಳುನಾಡಿನಿಂದ ೧೫೦೦ ಜನ ಭಾಗವಹಿಸಿರುವ ಸಾಧ್ಯತೆ ಇದೆ ಎಂದು ತಮಿಳುನಾಡು
ಸರ್ಕಾರ ಆತಂಕ ವ್ಯಕ್ತಪಡಿಸಿತು. ಇದುವರೆಗೂ ೧೫ ಜಿಲ್ಲೆಗಳ
೧೧೦ ಮಂದಿಯಲ್ಲಿ ಕೊರೊನಾ ಖಚಿತವಾಗಿದೆ. ಇನ್ನು, ೬೬೮
ಮಂದಿಯ ವರದಿ ಬರಬೇಕಾಗಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಬೀಲಾ ರಾಜೇಶ್ ಸುದ್ದಿಗೋಷ್ಠಿಯಲ್ಲಿ
ಹೇಳಿದರು.
ಒಂದೇ ದಿನ ೧೧೦ ಹೊಸ ಪ್ರಕರಣಗಳು ಕಂಡು ಬಂದಿರುವುದು ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ್ದು,
ಒಂದೇ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ೨೩೪ಕ್ಕೆ ಏರಿಕೆಯಾಯಿತು. ಇನ್ನು, ೧,೫೦೦ ಜನರಲ್ಲಿ ರಾಜ್ಯಕ್ಕೆ
ಇದುವರೆಗೂ ೧,೩೩೧ ಜನ ವಾಪಸಾಗಿದ್ದಾರೆ ಎಂದು ಸರ್ಕಾರ ಹೇಳಿದ್ದು, ಎಲ್ಲರನ್ನೂ ಗುರುತಿಸಿ ಪರೀಕ್ಷಿಸುವ
ಕಾರ್ಯ ಮುಂದುವರೆದಿದೆ.
ದೆಹಲಿಯ ನಿಜಾಮುದ್ದೀನಿನಲ್ಲಿ ಮಾರ್ಚ್
ಎರಡನೇ ವಾರದಲ್ಲಿ ಜಮಾತ್ ಸಭೆ ನಡೆದಿತ್ತು. ಈ ಸಭೆಯಲ್ಲಿ ವಿವಿಧ ರಾಜ್ಯಗಳ ಹಾಗೂ ದೇಶಗಳ ಸುಮಾರು ಮೂರು
ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎನ್ನಲಾಗಿದೆ. ಕರ್ನಾಟಕದಿಂದಲೂ ೩೪೧ ಮಂದಿ ಜಮಾತ್ ಸಭೆಯಲ್ಲಿ
ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು, ಅವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ವಿಶ್ವಾದ್ಯಂತ ಕೊರೋನಾ ಸೋಂಕು, ಸಾವು
ಕೊರೋನಾದಿಂದ ಸಾವು: ೪೪,೨೦೦
ಚೇತರಿಸಿಕೊಂಡವರು: ೧,೮೫,೧೯೬
ಅತ್ಯಧಿಕ ಸೋಂಕು: ಅಮೆರಿಕ: ೧,೮೯,೬೬೧, ಸಾವು ೪,೦೯೭
ಇಟಲಿ ಸೋಂಕು: ೧,೦೫,೭೯೨, ಸಾವು ೧೨,೪೨೮
ಸ್ಪೇನ್ ಸೋಂಕು: ೧,೦೨,೧೩೬, ಸಾವು ೯೦೫೩
ಚೀನಾ ಸೋಂಕು: ೮೧,೫೫೪, ಸಾವು ೩,೩೧೨
ಭಾರತ ಸೋಂಕು: ೧೬೩೭, ಸಾವು ೩೮
No comments:
Post a Comment