Saturday, April 18, 2020

ಜಮ್ಮು ಕಾಶ್ಮೀರ: ಭಯೋತ್ಪಾದಕ ದಾಳಿ, ೩ ಯೋಧರು ಹುತಾತ್ಮ

ಜಮ್ಮು ಕಾಶ್ಮೀರ: ಭಯೋತ್ಪಾದಕ ದಾಳಿ, ಯೋಧರು ಹುತಾತ್ಮ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೊಪೋರ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಪರಿಣಾಮವಾಗಿ ತಮ್ಮ ವಾಹನದಲ್ಲಿದ್ದ ಮೂವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು 2020 ಏಪ್ರಿಲ್  18ರ ಶನಿವಾರ ಹುತಾತ್ಮರಾದರು. ಕಳೆದ ರಾತ್ರಿಯಿಂದೀಚೆಗೆ ಸಿಆರ್ಪಿಎಫ್ ಮೇಲೆ  ನಡೆದ ಎರಡನೇ ದಾಳಿ ಇದು.

ಸಿಆರ್ಪಿಎಫ್ ೧೭೯ನೇ ಬೆಟಾಲಿಯನ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಿರ್ವಹಿಸುತ್ತಿದ್ದ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಒಂದು ವಾರದ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಅರೆ ಸೇನಾ ಪಡೆಗಳ ಮೇಲೆ ನಡೆದಿರುವ ಮೂರನೇ ದಾಳಿ ಇದು. ಪುಲ್ವಾಮದಲ್ಲಿ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ಶುಕ್ರವಾರ ನಡೆಸಿದ್ದ ಇದೇ ಮಾದರಿಯ ದಾಳಿಯಲ್ಲಿ ಸಿಆರ್ಪಿಎಫ್ ಯೋಧನೊಬ್ಬ ಗಾಯಗೊಂಡಿದ್ದ ಎಂದು ಅವರು ಹೇಳಿದರು.

No comments:

Advertisement