Saturday, April 11, 2020

ದುಬೈಯಲ್ಲಿ ಭಾರತೀಯ ವೃದ್ಧ ಹೃದಯಾಘಾತಕ್ಕೆ ಬಲಿ

ದುಬೈಯಲ್ಲಿ ಭಾರತೀಯ ವೃದ್ಧ ಹೃದಯಾಘಾತಕ್ಕೆ ಬಲಿ

ದುಬೈ: ಯುಎಇಯಲ್ಲಿ ಇರುವ ಪುತ್ರಿಯ ಭೇಟಿಗೆ ಬಂದಿದ್ದ ಭಾರತದ ನಿವೃತ್ತ ಕಾಲೇಜು ಪ್ರಾಧ್ಯಾಪಕರೊಬ್ಬರು, ಕೊರೊನಾವೈರಸ್ ಸೋಂಕಿನ ಪರಿಣಾಮವಾಗಿ ದೇಶಕ್ಕೆ ಹಿಂತಿರುಗಲು ಸಾಧ್ಯವಾಗದೆ ಇಲ್ಲೇ ಸಿಕ್ಕಿಹಾಕಿಕೊಂಡು ಹೃದಯಾಘಾತಕ್ಕೆ ಒಳಗಾಗಿ 2020 ಏಪ್ರಿಲ್ 11ರ ಶನಿವಾರ ಸಾವನ್ನಪ್ಪಿದರು.

ವಿಮಾನಗಳ ಯಾನ ರದ್ದಾದ ಕಾರಣ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಅವರು ದುಬೈಯಲ್ಲೇ ಉಳಿಯಬೇಕಾಗಿ ಬಂದಿತ್ತು ಎಂದು ಮೃತರ ಕುಟುಂಬ ಸದಸ್ಯರು ತಿಳಿಸಿದರು.

ಕೇರಳದ ೭೦ರ ಹರೆಯದ ಎಂ. ಶ್ರೀಕುಮಾರ್ ಮತ್ತು ಅವರ ಪತ್ನಿ ಶ್ರೀಕುಮಾರಿ ಶಾರ್ಜಾದಲ್ಲಿ ಅದ್ಯಾಪಕಿಯಾಗಿರುವ ಪುತ್ರಿ ಶ್ರೀಜಾ ಮನೆಗೆ ಪ್ರವಾಸ ಬಂದಿದ್ದರು. ಅವರು ಶನಿವಾರ ಸ್ವದೇಶಕ್ಕೆ ವಾಪಸಾಗಬೇಕಾಗಿತ್ತು. ಆದರೆ ವಿಮಾನಯಾನಗಳು ಅಮಾನತುಗೊಂಡ ಪರಿಣಾಮವಾಗಿ ಅವರಿಗೆ ಕೇರಳಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ.

ಕೇರಳದ ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಅಂಕಿಸಂಖ್ಯಾ ಪ್ರಾಧ್ಯಾಪಕರಾಗಿದ್ದ ಶ್ರೀಕುಮಾರ್ ಅವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ಗುರುವಾರ ಅವರಿಗೆ ಎದೆನೋವು ಕಾಣಿಸಿಕೊಂಡಿತು. ತತ್ ಕ್ಷಣವೇ ಶಾರ್ಜಾದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದು ತೀವ್ರ ಸ್ವರೂಪದ ಹೃದಯಾಘಾತವಾಗಿತ್ತು ಮತ್ತು ಶನಿವಾರ ಬೆಳಗ್ಗೆ ಅವರು ಕೊನೆಯುಸಿರು ಎಳೆದರುಎಂದು ಮೃತರ ಬಂಧು ಒಬ್ಬರು ತಿಳಿಸಿದರು.

ದುರದೃಷ್ಟವೆಂದರೆ, ಸಮಯದಲ್ಲಿ ನಮಗೆ ಅವರ ಪಾರ್ಥಿವ ಶರೀರವನ್ನು ಕೂಡಾ ಸ್ವದೇಶಕ್ಕೆ ವಿಮಾನ ಮೂಲಕ ಒಯ್ಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕುಟುಂಬವು ಶಾರ್ಜಾದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ತೀರ್‍ಮಾನಿಸಿತು ಎಂದು ಬಂಧು ಒಬ್ಬರು ಹೇಳಿದರು.


No comments:

Advertisement