Saturday, May 9, 2020

ಅಯೋಧ್ಯೆ ರಾಮಮಂದಿರಕ್ಕೆ ನೀಡುವ ದೇಣಿಗೆಗಳಿಗೆ ಶೇ.೫೦ರಷ್ಟು ತೆರಿಗೆ ವಿನಾಯಿತಿ

ಅಯೋಧ್ಯೆ ರಾಮಮಂದಿರಕ್ಕೆ ನೀಡುವ ದೇಣಿಗೆಗಳಿಗೆ ಶೇ.೫೦ರಷ್ಟು ತೆರಿಗೆ ವಿನಾಯಿತಿ
ನವದೆಹಲಿ:  ಅಸಾಧಾರಣ ನಡೆಯೊಂದರಲ್ಲಿ ಕೇಂದ್ರ ಸರ್ಕಾರವು  2020 ಮೇ 09ರ ಶನಿವಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿತು.

ಕೇಂದ್ರ ನೇರ ತೆರಿಗೆ ಮಂಡಳಿಯು 2020 ಮೇ ೮ರಂದು ಈ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೮೦ ಜಿಯ ಉಪವಾಕ್ಯ (ಬಿ) ಅನ್ವಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಐತಿಹಾಸಿಕ ಮಹತ್ವದ ಹಾಗೂ ಪ್ರಸಿದ್ಧ ಸಾರ್ವಜನಿಕ ಆರಾಧನಾ ಸ್ಥಳವೆಂದು ವರ್ಗೀಕರಿಸಲಾಗಿದೆ. ಇದರಿಂದಾಗಿ ೨೦೨೦-೨೧ರ ವಿತ್ತೀಯ ವರ್ಷದಲ್ಲಿ ಟ್ರಸ್ಟ್ಗೆ ದೇಣಿಗೆ ನೀಡುವವರ ಆದಾಯ ತೆರಿಗೆಯಲ್ಲಿ ಶೇ.೫೦ರವರೆಗೆ ವಿನಾಯಿತಿ ನೀಡಬಹುದಾಗಿದೆ ಎಂದ ಹೇಳಿಕೆ ತಿಳಿಸಿತು..

೧೫ ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಕೇಂದ್ರ ಸರ್ಕಾರವು  ಫೆಬ್ರವರಿ ೫ರಂದು ರಚಿಸಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಮೂರು ತಿಂಗಳ ಬಳಿಕ ಟ್ರಸ್ಟ್ ರಚನೆಯಾಗಿತ್ತು.

No comments:

Advertisement