ಶಾಸನ ಗ್ರಂಥಗಳು ಹೇಳುತ್ತಿವೆ:
ಕಾಲಾಪಾನಿ ಭಾರತದ್ದು
ಪಿಥೋರಗಢ (ಉತ್ತರಾಖಂಡ): ಕಾಳಿ ನದಿಯ ಮೂಲ ಕಾಲಾಪಾನಿ ಎನ್ನುವುದಕ್ಕೆ ಸಾಕ್ಷಿಯಾಗಿ ಇರುವ ಶಾಸನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಗ್ರಂಥಗಳನ್ನು ಉತ್ತರಾಖಂಡ ವಿದ್ವಾಂಸರು 2020 ಜೂನ್ 14ರ ಭಾನುವಾರ ಮುಂದಿಟ್ಟಿದ್ದಾರೆ.
ಕಾಲಾಪಾನಿ, ಲಿಪುಲೇಖ, ಲಿಂಪಿಯಧುರ
ಒಳಗೊಂಡ ಪರಿಷ್ಕೃತ ಭೂಪಟಕ್ಕೆ ನೇಪಾಳದ ಸಂಸತ್ತಿನ ಕೆಳಮನೆ 2020 ಜೂನ್ 13ರ ಶನಿವಾರ ಒಪ್ಪಿಗೆ ಸೂಚಿಸಿತ್ತು.
ಆದರೆ ಈ ನಡೆಯನ್ನು ವಿರೋಧಿಸಿದ್ದ ಭಾರತ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಪ್ರತಿಕ್ರಿಯೆ ನೀಡಿತ್ತು.
ಎರಡೂ ದೇಶಗಳಿಗೆ ಗಡಿಯಾಗಿ ಕಾಳಿ ನದಿಯಿದ್ದು, ಇದರ ಮೂಲ ಕಾಲಾಪಾನಿ ಪ್ರದೇಶವಲ್ಲ ಎಂದು ನೇಪಾಳ ವಾದಿಸಿತ್ತು.
ಲಿಂಪಿಯಧುರದಲ್ಲಿ ಹುಟ್ಟುವ ಕುತಿಯಾಂಗ್ತಿ ತೊರೆಯೇ ಕಾಳಿ ನದಿಯ ಮೂಲ ಎಂದು ನೇಪಾಳ ವಾದಿಸುತ್ತಿದೆ.
‘ಮಾನಸ ಖಂಡದಲ್ಲಿರುವ ಶ್ಲೋಕವೊಂದರ ಪ್ರಕಾರ ಕಾಳಿ ನದಿಯ ಮೂಲ ಲಿಪುಲೇಖ್ ಪರ್ವತಶ್ರೇಣಿ. ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಟಿಬೆಟ್ಟಿಗೆ ಭೇಟಿ ನೀಡಿದ್ದ ಬ್ರಿಟಿಷ್ ಪ್ರವಾಸಿಗರು ಹಾಗೂ ಕೈಲಾಸ- ಮಾನಸಸರೋವರದ ಬಗ್ಗೆ ಬರೆದಿರುವ ಭಾರತದ ವಿದ್ವಾಂಸರು ಕಾಳಿ ನದಿಯ ಮೂಲ ಕಾಲಾಪಾನಿ ಎಂದು ಉಲ್ಲೇಖಿಸಿದ್ದಾರೆ’ ಎಂದು ನೇಗಿ ಹೇಳಿದರು.
No comments:
Post a Comment