Friday, June 12, 2020

ಜಿಎಸ್‌ಟಿಆರ್-೩ ಬಿ ರಿಟರ್ನ್ಸ್ ಸಲ್ಲಿಕೆ: ವಿಳಂಬ ಶುಲ್ಕ ಇಲ್ಲ: ನಿರ್ಮಲಾ

ಜಿಎಸ್ಟಿಆರ್- ಬಿ ರಿಟರ್ನ್ಸ್ ಸಲ್ಲಿಕೆ: ವಿಳಂಬ ಶುಲ್ಕ ಇಲ್ಲ: ನಿರ್ಮಲಾ

ನವದೆಹಲಿ: ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ ಫೈಲಿಂಗ್ ಮತ್ತು ಜುಲೈ ೨೦೧೭ ಮತ್ತು ಜನವರಿ ೨೦೨೦ ನಡುವೆ ರಿಟರ್ನ್ಸ್ ಸಲ್ಲಿಸದ ನೋಂದಾಯಿತ ಘಟಕಗಳಿಗೆ ಯಾವುದೇ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2020 ಜೂನ್ 12ರ ಶುಕ್ರವಾರ ಪ್ರಕಟಿಸಿದರು..

‘ಕೋವಿಡ್ ಅವಧಿಗೆ ಮುಂಚಿನ ಜುಲೈ ೨೦೧೭ ರಿಂದ ಜನವರಿ ೨೦೨೦ರ ವರೆಗಿನ ಅವಧಿಗೆ, ಸಾಕಷ್ಟು ರಿಟರ್ನ್ ಫೈಲಿಂಗ್ ಬಾಕಿ ಉಳಿದಿದೆ. ತೆರಿಗೆ ಬಾಧ್ಯತೆಗಳಿಲ್ಲದ ಆದರೆ ಜುಲೈ ೨೦೧೭ ರಿಂದ ಜನವರಿ ೨೦೨೦ ನಡುವೆ ರಿಟರ್ನ್ಸ್ ಸಲ್ಲಿಸದ ಎಲ್ಲರಿಗೂ ವಿಳಂಬ ಶುಲ್ಕವಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

"ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವವರಿಗೆ, ಜುಲೈ ೨೦೧೭ ರಿಂದ ಜನವರಿ ೨೦೨೦ ರವರೆಗೆ ಜಿಎಸ್ಟಿಆರ್- ಬಿ ರಿಟರ್ನ್ಸ್ ಸಲ್ಲಿಸದಿರುವವರಿಗೆ ಗರಿಷ್ಠ ವಿಳಂಬ ಶುಲ್ಕವನ್ನು ೫೦೦ ರೂಗಳಿಗೆ ಮಿತಿಗೊಳಿಸಲಾಗಿದೆ. ಇದು ಜುಲೈ , ೨೦೨೦ರಿಂದ ಸೆಪ್ಟೆಂಬರ್ ೩೦, ೨೦೨೦ರ ನಡುವಣ ಸಮಯದಲ್ಲಿ ಸಲ್ಲಿಸಿದ ಎಲ್ಲಾ ರಿಟರ್ನ್ಗಳಿಗೂ ಅನ್ವಯಿಸುತ್ತದೆ ಎಂದು ಸೀತಾರಾಮನ್ ಹೇಳಿದರು.

ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರು ಜುಲೈ ೩೦ರ ನಂತರ ಸೆಪ್ಟೆಂಬರ್  ೩೦ರ ಒಳಗೆ ಸಲ್ಲಿಸಿದ ಫೆಬ್ರವರಿ-ಏಪ್ರಿಲ್ ೨೦೨೦ ನಡುವಣ ರಿಟರ್ನ್ಗಳಿಗೆ ಶೇಕಡಾ ೧೮ರ ಬದಲಿಗೆ ಶೇಕಡಾ ರಷ್ಟು ಕಡಿಮೆ ಬಡ್ಡಿದರವನ್ನು ಪಾವತಿಸಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

ಮೇ ತಿಂಗಳಿನಿಂದ ಜುಲೈ ವರೆಗಿನ ರಿಟರ್ನ್ಸ್ನ್ನು ಅವರು ೨೦೨೦ ಸೆಪ್ಟೆಂಬರ್ವರೆಗೆ ಸಲ್ಲಿಸಬಹುದು. ಅವರಿಗೆ  ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ನಿರ್ಮಲಾ ಹೇಳಿದರು.

ಕೊರೋನವೈರಸ್ ಕಾಯಿಲೆ (ಕೋವಿಡ್ -೧೯) ಹರಡುವುದನ್ನು ತಡೆಗಟ್ಟಲು ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಿದ ನಂತರ ಮೊದಲ ಬಾರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾದ ೪೦ ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್ಟಿ ಕೌನ್ಸಿಲ್) ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

No comments:

Advertisement