Tuesday, June 9, 2020

ಅಸ್ಸಾಮಿನ ಬಾಗ್ಜನ್ ತೈಲ ಬಾವಿಯಲ್ಲಿ ಭಾರಿ ಬೆಂಕಿ

ಅಸ್ಸಾಮಿನ ಬಾಗ್ಜನ್ ತೈಲ ಬಾವಿಯಲ್ಲಿ ಭಾರಿ ಬೆಂಕಿ

ಗುವಾಹಟಿ: ಅಸ್ಸಾಮಿನ ಮೇಲ್ಭಾಗದ ತೀನ್ಸುಕಿಯಾ ಜಿಲ್ಲೆಯಲ್ಲಿನ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್)  ನೈಸರ್ಗಿಕ ಅನಿಲ ಬಾವಿಯಲ್ಲಿ  ಅನಿಲ ಹೊರಹೊಮ್ಮಲಾರಂಭಿಸಿದ ೧೩ ದಿನಗಳ ಬಳಿಕ 2020 ಜೂನ್ 09ರ ಮಂಗಳವಾರ ಭಾರೀ ಬೆಂಕಿ ಕಾಣಿಸಿಕೊಂಡಿತು.

ಬಾಗ್ಜಾನ್ನಲ್ಲಿರುವ ಅನಿಲ ಬಾವಿಯಿಂದ ದೊಡ್ಡ ಪ್ರಮಾಣದ ಹೊಗೆ ಹೊರಹೊಮ್ಮುತ್ತಿದೆ. ಹಲವಾರು ಕಿಲೋಮೀಟರ್ ದೂರದಲ್ಲಿರುವ ಡಿಬ್ರು ಸೈಖೋವಾ ರಾಷ್ಟ್ರೀಯ ಉದ್ಯಾನವನ ಮತ್ತು ಪರಿಸರ-ಸೂಕ್ಷ್ಮ ಮಾಗುರಿ ಮೊಟ್ಟಾಪುಂಗ್ ಮೈದಾನ ಪ್ರದೇಶಕ್ಕೆ ಹತ್ತಿರದ ಸ್ಥಳದಿಂzಲೇ ಆಗಸವನ್ನು ವ್ಯಾಪಿಸುತ್ತಿರುವ ಹೊಗೆ ಮತ್ತು ಬೆಂಕಿ ಕಾಣಿಸುತ್ತಿದೆ.

ಮಧ್ಯಾಹ್ನ .೪೦ ಗಂಟೆಯ ವೇಳೆಗೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರನೆ ಕಂಡುಬಂದಿರುವ ಬೆಂಕಿಗೆ  ಕಾರಣ ಇನ್ನೂ ಪತ್ತೆಯಾಗಿಲ್ಲಎಂದು ಒಐಎಲ್ ಹಿರಿಯ ವ್ಯವಸ್ಥಾಪಕ (ಕಾರ್ಪೊರೇಟ್ ಸಂವಹನ) ಜಯಂತ ಬೋರ್ಮುಡೊಯ್ ತಿಳಿಸಿದರು..

ಘಟನೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ (ಒಎನ್ಜಿಸಿ) ಫೈರ್ಮ್ಯಾನ್ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿ, ಬೇರೆ ಯಾರಿಗೂ ಗಾಯಗಳಾಗಿಲ್ಲಎಂದು ಒಐಎಲ್ ಹಿರಿಯ ವ್ಯವಸ್ಥಾಪಕ ಬೋರ್ಮುಡೊಯ್ ಹೇಳಿದರು.

ಸಿಂಗಾಪುರ ಮೂಲದ  ಎಚ್ಚರಿಕೆ ವಿಪತ್ತು ನಿಯಂತ್ರಣ ಸಂಸ್ಥೆಯ ಮೂವರು ತಜ್ಞರು ಬಾವಿಗೆ ಬಿರಡೆ ಹಾಕಲು ಯತ್ನಿಸುವ ಸಲುವಾಗಿ ಸ್ಥಳಕ್ಕೆ ತಲುಪಿದ ಒಂದು ದಿನದ ನಂತರ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

"ಬೆಂಕಿ ಕಾಣಿಸಿಕೊಂಡಾಗ ತಜ್ಞರು ಸ್ಥಳದಲ್ಲ್ಲಿ ಇರಲಿಲ್ಲ. ಅವರು ದುಲಿಯಾಜನ್ನಲ್ಲಿರುವ ಒಐಎಲ್ ಕಚೇರಿಯಲ್ಲಿ ಭೆಯಲ್ಲಿ ಪಾಲ್ಗೊಂಡಿದ್ದರು

ಬಾವಿಯಿಂದ . ಕಿಲೋಮೀಟರ್ ತ್ರಿಜ್ಯದ ಆಚೆಗೆ ಈಗಾಗಲೇ ಸ್ಥಳಾಂತರಗೊಂಡಿರುವ ಪ್ರದೇಶದ ನಿವಾಸಿಗಳಿಗೆ ತತ್ ಕ್ಷಣದ ಬೆದರಿಕೆ ಇಲ್ಲಎಂದು ಬೊರ್ಮುಡೊಯ್ ಹೇಳಿದರು.

,೭೨೯ ಮೀಟರ್ ಆಳದಲ್ಲಿ ಹೊಸ ತೈಲ ಮತ್ತು ಅನಿಲವನ್ನು ಹೊಂದಿರುವ ನಿಕ್ಷೇಪದಿಂದ ಅನಿಲವನ್ನು ಉತ್ಪಾದಿಸುವ ಕೆಲಸ ನಡೆಯುತ್ತಿರುವಾಗ ಮೇ ೨೭ ರಂದು ಬಾಗ್ಜನ್ ಬಾವಿಯಿಂದ ದಿಢೀರನೆ ಅನಿಲ ಹೊರಹೊಮ್ಮಲಾರಂಭಿಸಿತ್ತು.

ಒತ್ತಡ ನಿಯಂತ್ರಣ ವ್ಯವಸ್ಥೆಗಳು ವಿಫಲವಾದಾಗ ಬಾವಿಯಿಂದ ಕಚ್ಚಾ ತೈಲ ಅಥವಾ ಅನಿಲ ಅನಿಯಂತ್ರಿತವಾಗಿ ಹೊರಕ್ಕೆ ಬರಲಾರಂಭಿಸುತ್ತದೆ.

ಬಾವಿ ಬಳಿ ವಾಸಿಸುತ್ತಿದ್ದ ಸುಮಾರು ಸಾವಿರ ಜನರನ್ನು ಮೇ ೨೭ ಘಟನೆಯ ನಂತರ ನಾಲ್ಕು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ

ವಿಡಿಯೋದಲ್ಲಿ ಸುದ್ದಿ ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ


No comments:

Advertisement