ಹೊಸ ವಿವಾದಿತ
ನಕ್ಷೆಗೆ ನೇಪಾಳದ ಸಂಸತ್ ಅಸ್ತು
ಕಠ್ಮಂಡು: ರಾಷ್ಟ್ರೀಯ ಲಾಂಛನದಲ್ಲಿ ತನ್ನ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳದ ಮೇಲ್ಮನೆಯು 2020 ಜೂನ್ 18ರ ಗುರುವಾರ ಸರ್ವಾನುಮತದ ಒಪ್ಪಿಗೆ ನೀಡಿತು.
ಇದರೊಂದಿಗೆ
ವಿವಾದಾತ್ಮಕ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಸಂಪೂರ್ಣ ಅನುಮೋದನೆ ಲಭಿಸಿದಂತಾಗಿದ್ದು, ಇದು ನೇಪಾಳ ಮತ್ತು ಭಾರತದ ಬಾಂಧವ್ಯಕ್ಕೆ ಗಡಿರೇಖೆಯು ಒಂದು ಶಾಶ್ವತ ಅಡ್ಡಿಯಾಗುವಂತೆ ಮಾಡಿದೆ. ನೇಪಾಳ ಮೇಲ್ಮನೆಯಲ್ಲಿ ಮಸೂದೆ ಪರವಾಗಿ ೫೭ ಮತಗಳು ಬಂದವು.
ವಿರುದ್ಧವಾಗಿ ಯಾವುದೇ ಮತ ಚಲಾವಣೆಯಾಗಲಿಲ್ಲ.
ಕಳೆದ
ವಾರ, ನೇಪಾಳದ ಕೆಳಮನೆಯು ಮಸೂದೆಗೆ ಒಪ್ಪಿಗೆ ನೀಡಿದ್ದು, ಎಲ್ಲ ೨೫೮ ಶಾಸನಕರ್ತರು ಹಾಜರಿದ್ದು ಮತದಾನ ಮಾಡಿದ್ದರು.
ಭಾರತದ
ವಶದಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರ ಪ್ರದೇಶಗಳು ತನಗೆ ಸೇರಿದ್ದು ಎಂಬುದಾಗಿ ನೇಪಾಳ ಇತೀಚೆಗೆ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪ್ರತಿಪಾದಿಸಿದೆ.
ನೇಪಾಳದ
ಕೆಳಮನೆಯಲ್ಲಿ ನಕ್ಷೆಯ ಅಂಗೀಕಾರದ ಬಗ್ಗೆ ಪ್ರತಿಕ್ರಿಯಿಸಿದ ಭಾರತ, ‘ಈ ಕೃತಕ ಹಕ್ಕುಗಳ
ವಿಸ್ತರಣೆಯು ಯಾವುದೇ ಐತಿಹಾಸಿಕ ದಾಖಲೆ ಅಥವಾ ಪುರಾವೆಗಳನ್ನು ಆಧರಿಸಿಲ್ಲ ಮತ್ತು ಇದು ಸಮರ್ಥನೀಯವಲ್ಲ’ ಎಂದು
ಹೇಳಿತು.
‘ಗಡಿ
ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸುವುದು ಪ್ರಸ್ತುತ ಇರುವ ತಿಳುವಳಿಕೆಗೆ ವಿರುದ್ಧ ಮತ್ತು ಅದರ ಉಲ್ಲಂಘನೆಯಾಗಿದೆ’ ಎಂದು
ಅದು ಹೇಳಿತು.
ಕಳೆದ
ತಿಂಗಳು ಹೊಸ ನಕ್ಷೆ ಪ್ರಕಟಿಸಲು ಮುಂದಾಗಿದ್ದ ಪ್ರಧಾನಿ ಕೆ.ಪಿ.ಶರ್ಮ
ಒಲಿ ಸರ್ಕಾರ, ಮಾತುಕತೆಯ ಮೂಲಕ ನೇಪಾಳವು ’ಭಾರತ ಆಕ್ರಮಿಸಿಕೊಂಡ ಭೂಮಿಯನ್ನು ಮರಳಿ ಪಡೆಯುತ್ತದೆ’ ಎಂದು
ಪದೇ ಪದೇ ಹೇಳಿಕೊಂಡಿದೆ.
ಕಳೆದ
ತಿಂಗಳು ನವದೆಹಲಿಯಿಂದ ಚೀನಾದ ಗಡಿಯಲ್ಲಿರುವ ಲಿಪುಲೇಖಕ್ಕೆ ೮೦ ಕಿ.ಮೀ
ರಸ್ತೆ ತೆರೆಯುವುದನ್ನು ವಿರೋಧಿಸಿ ನೇಪಾಳ ಪ್ರತಿಭಟಿಸಿದ ನಂತರ, ಈ ಕ್ರಮವು ನೇಪಾಳ
ಮತ್ತು ಭಾರತದ ನಡುವಿನ ರಾಜತಾಂತ್ರಿಕ ಹಾದಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಇದೆ.
ನೇಪಾಳವು
ಲಿಪುಲೇಖ ಪ್ರದೇಶ
ತನ್ನದು ಎಂದು ಹೇಳಿಕೊಂಡಿದೆ. ಆದರೆ ರಸ್ತೆ ಸಂಪೂರ್ಣವಾಗಿ ತನ್ನ ಭೂಪ್ರದೇಶದಲ್ಲಿದೆ ಎಂದು ಭಾರತ ತಿಳಿಸಿದೆ.
ನೇಪಾಳದ
ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಕಳೆದ ವಾರ ಸಂಸತ್ತಿನಲ್ಲಿ ಲಿಪುಲೇಖಕ್ಕೆ ಹೊಸ ರಸ್ತೆ ನಿರ್ಮಾಣವು ನೇಪಾಳದ ಸಾರ್ವಭೌಮತ್ವವನ್ನು "ದುರ್ಬಲಗೊಳಿಸಿದೆ" ಎಂದು ಹೇಳಿದರು. ನೇಪಾಳದ ಗಡಿ ಕಾಳಿ ನದಿಯ ಮೂಲವಾದ ಲಿಂಪಿಯಧುರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಭಾರತದ ಗಡಿಯನ್ನು ೧೮೧೬ ರ ಸುಗೌಲಿ ಒಪ್ಪಂದದಂತೆ
ನಿರ್ಧರಿಸಲಾಗಿದೆ ಎಂದು ಗಯಾವಲಿ ಹೇಳಿದ್ದರು.
೧೯೯೭
ರಲ್ಲಿ ಕಾಲಾಪಾನಿ ಮತ್ತು ಸುಸ್ತಾದಲ್ಲಿನ ಗಡಿಗಳು ‘ಬಗೆಹರಿಯದವು’ ಎಂದು
ಭಾರತ ಒಪ್ಪಿಕೊಂಡಿದೆ ಎಂದೂ ಅವರು ಪ್ರತಿಪಾದಿಸಿದ್ದರು.
ಗಡಿವಿವಾದದ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಲು ನೇಪಾಳವು ಹಲವಾರು ಪ್ರಯತ್ನಗಳನ್ನು ನಡೆಸಿದ ಬಳಿಕ ಸಂಸತ್ತಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ಈ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗಾಗಿ ನೇಪಾಳ ಕೊನೆಯದಾಗಿ ಔಪಚಾರಿಕವಾಗಿ ಭಾರತವನ್ನು ಮೇ ಆರಂಭದಲ್ಲಿ ಸಂಪರ್ಕಿಸಿತ್ತು ನೇಪಾಳೀ ಸದ್ದಿ ಮೂಲಗಳು ಹೇಳಿವೆ.
No comments:
Post a Comment