Monday, June 8, 2020

ಉದ್ಯೋಗ ಖಾತರಿ ಯೋಜನೆ: ರಾಜಸ್ಥಾನ ಪ್ರಥಮ

ಉದ್ಯೋಗ ಖಾತರಿ ಯೋಜನೆ: ರಾಜಸ್ಥಾನ ಪ್ರಥಮ

೫೦ ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ

ಜೈಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್ಮನ್ರೇಗಾ) ಅಡಿಯಲ್ಲಿ ೫೦ ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ತೊಡಗಿಸುವ ಮೂಲಕ ರಾಜಸ್ಥಾನವು ದೇಶದಲ್ಲೇ  ಅಗ್ರ ಸ್ಥಾನದಲ್ಲಿದೆ ಎಂದು ಉಪಮುಖ್ಯಮಂತ್ರಿ ಸಚಿನ್ ಪೈಲಟ್ 2020 ಜೂನ್ 08ರ ಸೋಮವಾರ ಹೇಳಿದರು.

ಕಲ್ಯಾಣ ಯೋಜನೆಯಡಿ ವಿವಿಧ ಕಾಮಗಾರಿಗಳಲ್ಲಿ ತೊಡಗಿಸಲಾಗಿರುವ ೫೦ ಲಕ್ಷ ಜನರಲ್ಲಿ ಸುಮಾರು ೧೩ ಲಕ್ಷ ಮಂದಿ ವಲಸೆ ಕಾರ್ಮಿಕರು ಎಂದು ಪೈಲಟ್ ಹೇಳಿದರು.

ಕೋವಿಡ್ -೧೯ ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಜೀವನೋಪಾಯವನ್ನು ಕಸಿದುಕೊಂಡಿದೆ. ಇಂತಹ ಹೊತ್ತಿನಲ್ಲಿ ರಾಜಸ್ಥಾನದ ಗ್ರಾಮೀಣ ಪ್ರದೇಶದ ಜನರಿಗೆ ಮನ್ರೇಗಾ ನಿರ್ಣಾಯಕ ಆರ್ಥಿಕ ನೆರವು ನೀಡಿದೆ ಎಂದು ಸಚಿವರು ನುಡಿದರು.

ಏಪ್ರಿಲ್ ತಿಂಗಳಲ್ಲಿ ಮನ್ರೇಗಾ ಅಡಿಯಲ್ಲಿ ರಾಜ್ಯದಲ್ಲಿ ಕೇವಲ ೬೨,೦೦೦ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದರು. ಆದರೆ ಇಲಾಖೆಯ ಪ್ರಯತ್ನದಿಂದಾಗಿ, ಜೂನ್ ವೇಳೆಗೆ ಯೋಜನೆಯಡಿ ತೊಡಗಿಸಿಕೊಂಡಿರುವ ಕಾರ್ಮಿಕರ ಸಂಖ್ಯೆ ೫೦.೨೦ ಲಕ್ಷವನ್ನೂ ಮೀರಿದೆ.

.೧೧ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿರುವ ಭಿಲ್ವಾರಾ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲಾಗಿದೆ ಎಂದು ಪಂಚಾಯತಿ ರಾಜ್ ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಪೈಲಟ್ ಹೇಳಿದರು.

ಇದರ ನಂತರ ಡುಂಗರಪುರ ಜಿಲ್ಲೆಯಲ್ಲಿ .೫೫ ಲಕ್ಷ ಕಾರ್ಮಿಕರು, ಬನ್ಸ್ವಾರದಲ್ಲಿ . ಲಕ್ಷ ಕಾರ್ಮಿಕರು  ಮತ್ತು ಅಜ್ಮೀರದಲ್ಲಿ .೬೭ ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಯೋಜನೆಯಡಿ ಉದ್ಯೋಗದಲ್ಲಿರುವ ೧೩ ಲಕ್ಷ ವಲಸಿಗರ ಪೈಕಿ, ೧೧. ಲಕ್ಷ ಮಂದಿ ಈಗಾಗಲೇ ಉದ್ಯೋಗ ಕಾರ್ಡ್‌ಗಳನ್ನು ಹೊಂದಿದ್ದರೆ, .೭೫ ಲಕ್ಷ ವಲಸಿಗರಿಗೆ ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು.

ರಾಷ್ಟ್ರವ್ಯಾಪಿ ದಿಗ್ಬಂಧನದಿಂದಾಗಿ ವಿವಿಧ ರಾಜ್ಯಗಳಿಂದ ರಾಜಸ್ಥಾನಕ್ಕೆ ಮರಳಿದ ಲಕ್ಷಾಂತರ ವಲಸೆ ಕಾರ್ಮಿಕರನ್ನು ಮನ್ರೇಗಾ ಅಡಿಯಲ್ಲಿ ನೇಮಿಸಿಕೊಳ್ಳಲಾಗಿದೆ. ಇದು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಅವರಿಗೆ ಸಹಾಯ ಮಾಡಿದೆಎಂದು ಪೈಲಟ್ ಹೇಳಿದರು.

ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕೋವಿಡ್ -೧೯ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳನ್ನು ಮನ್ರೆಗಾ ಕಾರ್ಯಕ್ಷೇತ್ರಗಳಲ್ಲಿ ಅನುಸರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

No comments:

Advertisement