ಭಾರತಕ್ಕೆ ಕುಲಭೂಷಣ್ ಜಾಧವ್ ಭೇಟಿ ರಾಜತಾಂತ್ರಿಕ ಅವಕಾಶ
ನವದೆಹಲಿ: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು, ಪಾಕಿಸ್ತಾನವು ಭಾರತಕ್ಕೆ ರಾಜತಾಂತ್ರಿಕ ಅವಕಾಶವನ್ನು ಒದಗಿಸಿದ್ದು, ಇದನ್ನು ಅನುಸರಿಸಿ ಭಾರತೀಯ ಅಧಿಕಾರಿಗಳು 2020 ಜುಲೈ 16ರ ಗುರುವಾರ ಜಾಧವ್ ಅವರನ್ನು ಭೇಟಿ ಮಾಡಿದರು ಎಂದು ಮಾಧ್ಯಮ ವರದಿಗಳು ತಿಳಿಸಿದವು.
ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ೨೦೧೬ರಲ್ಲಿ ಬಂಧಿಸಲ್ಪಟ್ಟಿದ್ದ ಜಾಧವ್, ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ತನ್ನ ಪ್ರಕರಣವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದಾಗಿ ಕಳೆದ ವಾರ ಪಾಕಿಸ್ತಾನ ಹೇಳಿಕೊಂಡಿತ್ತು. ನವದೆಹಲಿ ಇದನ್ನು ನಿರಾಕರಿಸಿತ್ತು ಮತ್ತು ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸದಂತೆ ಜಾಧವ್ ಮೇಲೆ ’ಸ್ಪಷ್ಟ ಒತ್ತಡ’ ವಿಧಿಸಲಾಗಿದೆ ಎಂದು ಹೇಳಿತ್ತು.
ಭಾರತೀಯ ಹೈಕಮಿಷನ್‌ನ ಅಧಿಕಾರಿಗಳು, ವಕೀಲರೊಂದಿಗೆ ಗುರುವಾರ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಬಹುದು ಎಂದು ಪಾಕಿಸ್ತಾನ ತಿಳಿಸಿದೆ.
ಆದಾಗ್ಯೂ, ಅಡೆತಡೆ ರಹಿತವಾಗಿದ್ದರೆ ಮಾತ್ರ ಭಾರತವು ರಾಜತಾಂತ್ರಿಕ ಭೇಟಿಯ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನವು ಮೊದಲು ಇದನ್ನು ಒಪ್ಪಿಕೊಳ್ಳಬೇಕು ಎಂದು ಭಾರತ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಜಾಧವ್ ಅವರಿಗೆ ಕಾನೂನು ಪ್ರಾತಿನಿಧ್ಯದ ಅವಶ್ಯಕತೆಯಿದೆ, ಅದರಲ್ಲೂ ವಿಶೇಷವಾಗಿ, ಜಾಧವ್ ಮೇಲ್ಮನವಿ ಅರ್ಜಿ ಸಲ್ಲಿಕೆಗೆ ನಿರಾಕರಿಸಿದ್ದಾರೆ ಎಂಬುದಾಗಿ ಪಾಕಿಸ್ತಾನವು ಪ್ರತಿಪಾದಿಸುತ್ತಿರುವುದರಿಂದ, ಜಾಧವ್ ಪರವಾಗಿ ಯಾರಾದರೂ ಪ್ರಕರಣವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ. ಆದರೆ ಇದಕ್ಕೆ ಅಡ್ಡಿರಹಿತ ಸಂಪರ್ಕದ ಅಗತ್ಯವಿದೆ ಎಂದು ಭಾರತ ಸ್ಪಷ್ಟ ಪಡಿಸಿದೆ.
ಏತನ್ಮಧ್ಯೆ, ಜಾಧವ್ ಅವರ ಮರಣದಂಡನೆ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಗಡುವು ಹತ್ತಿರವಾಗುತ್ತಿದ್ದಂತೆ, ಪಾಕಿಸ್ತಾನದ ಪ್ರತಿಪಕ್ಷದ ಹಿರಿಯ ಸೆನೆಟರ್ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ರಝಾ ರಬ್ಬಾನಿ ಅವರು ಸೇನಾ ನ್ಯಾಯಾಲಯದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ವಿದೇಶೀ ನಾಗರಿಕನಿಗೆ ಅವಕಾಶ ನೀಡಿ ಹೊರಡಿಸಲಾಗಿರುವ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ಮಂಡಿಸದೇ ಇರುವುದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದರಿ ಸುಗ್ರೀವಾಜ್ಞೆಯ ವಿಷಯವನ್ನು ಸೆನೆಟಿನಲ್ಲಿ ಎತ್ತಿದ ಅವರು ರು, ಸಚಿವರು ಮೇಲ್ಮನೆಯಲ್ಲಿ ಅಔಗಿIಆ-೧೯ (ಹೋರ್ಡಿಂಗ್ ತಡೆಗಟ್ಟುವಿಕೆ) ಸುಗ್ರೀವಾಜ್ಞೆಯನ್ನು ಸುಮಾರು ಮೂರು ತಿಂಗಳ ವಿಳಂಬದ ನಂತರ ಡಾನ್ ಪತ್ರಿಕೆ ಗುರುವಾರ ವರದಿ ಮಾಡಿದೆ.
ಸಚಿವರು ಕೋವಿಡ್-೧೯ (ಕಾಳಸಂತೆ ತಡೆ) ಸುಗ್ರೀವಾಜ್ಞೆಯನ್ನು ಸುಮಾರು ಮೂರು ತಿಂಗಳ ವಿಳಂಬದ ಬಳಿಕ ಮಂಡಿಸಲು ಉದ್ಯುಕ್ತರಾದ ಹೊತ್ತಿನಲ್ಲ ರಬ್ಬಾನಿ ವಿಷಯವನ್ನು ಎತ್ತಿದರು.
ಪಾಕಿಸ್ತಾನವು ಮೇ ೨೦ ರಂದು ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ರಿವ್ಯೂ ಅಂಡ್ ರಿಕನ್ಸಿಡರೇಷನ್ ಆರ್ಡಿನೆನ್ಸ್ ಎಂಬ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತು, ಇದರ ಅಡಿಯಲ್ಲಿ ಮಿಲಿಟರಿ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಸುಗ್ರೀವಾಜ್ಞೆ ಹೊರಡಿಸಿದ ೬೦ ದಿನಗಳ ಒಳಗಾಗಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬಹುದು.
೫೦ ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ ೨೦೧೭ ರ ಏಪ್ರಿಲ್‌ನಲ್ಲಿ "ಗೂಢಚರ್ಯೆ ಮತ್ತು ಭಯೋತ್ಪಾದನೆ" ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
No comments:
Post a Comment