Wednesday, July 8, 2020

ಭಾರತದಲ್ಲಿ ಮುಂದಿನ ವರ್ಷ ದಿನಕ್ಕೆ ೨.೮೭ ಲಕ್ಷ ಕೊರೋನಾ!

ಭಾರತದಲ್ಲಿ ಮುಂದಿನ ವರ್ಷ ದಿನಕ್ಕೆ .೮೭ ಲಕ್ಷ ಕೊರೋನಾ!

ಲಸಿಕೆ / ಔಷಧ ಬಾರದೇ ಇದ್ದರೆ….

ನವದೆಹಲಿ: ಕೋವಿಡ್-೧೯ ಲಸಿಕೆ ಅಥವಾ ಔಷಧದ ಅನುಪಸ್ಥಿತಿಯಲ್ಲಿ ೨೦೨೧ ಚಳಿಗಾಲದ ಅಂತ್ಯದ ವೇಳೆಗೆ ಭಾರತವು ದಿನಕ್ಕೆ ಸುಮಾರು .೮೭ ಲಕ್ಷ ಕೊರೋನಾ ಪ್ರಕರಣಗಳನ್ನು ದಾಖಲಿಸಬಹುದು ಎಂದು ಮೆಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಮಾದರಿ ಅಧ್ಯಯನವೊಂದರಲ್ಲಿ  2020 ಜುಲೈ 8ರ ಬುಧವಾರ ಬಹಿರಂಗ ಪಡಿಸಿದರು.

ವಿಶ್ವಾಸಾರ್ಹ ಪರೀಕ್ಷಾ ದತ್ತಾಂಶ ಹೊಂದಿರುವ ೮೪ ದೇಶಗಳ .೭೫ ಬಿಲಿಯನ್ (ಶತಕೋಟಿ) ಸೋಂಕಿತರ ಅಂಕಿಸಂಖ್ಯೆ ಮಾಹಿತಿ (ಡೇಟಾ) ಆಧರಿಸಿ ಸಂಶೋಧಕರು ಕ್ರಿಯಾತ್ಮಕ ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಪ್ರಿಪ್ರಿಂಟ್ ಪೇಪರ್ನಲ್ಲಿ, ಎಂಐಟಿ ಪ್ರಾಧ್ಯಾಪಕರಾದ ಹಾಝಿರ್ ರಹಮಂದಾದ್ ಮತ್ತು ಜಾನ್ ಸ್ಟರ್ಮನ್, ಹಾಗೂ  ಪಿಎಚ್ಡಿ ಅಭ್ಯರ್ಥಿ ತ್ಸೆ ಯಾಂಗ್ ಲಿಮ್ ಅವರು, ೨೦೨೧ ಚಳಿಗಾಲದ ಕೊನೆಯಲ್ಲಿ ದೈನಂದಿನ ಸೋಂಕಿನ ಪ್ರಮಾಣವನ್ನು ಯೋಜಿಸುವ ಮೂಲಕ ಅತಿಬಾಧಿತ ಮೊದಲ ಹತ್ತು ರಾಷ್ಟ್ರU ಸೋಂಕಿನ ಪ್ರಮಾಣವನ್ನು ಅಂದಾಜು ಮಾಡಿದ್ದಾರೆ. ಅದರಂತೆ ಭಾರತದಲ್ಲಿ ದಿನಕ್ಕೆ .೮೭ ಲಕ್ಷ ಸೋಂಕುಗಳು ದಾಖಲಾಗಿದ್ದು, ಭಾರತದ ನಂತರದ ಸ್ಥಾನಗಳಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ಇಂಗ್ಲೆಂಡ್, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ನಿಲ್ಲಲಿವೆ.

ಆದಾಗ್ಯೂ, ಇದು ಪರೀಕ್ಷೆ, ನಡವಳಿಕೆ ಮತ್ತು ನೀತಿ ಪ್ರತಿಕ್ರಿಯೆಗಳಿಗೆ ಅನುಗುಣವಾಗಿರುತ್ತವೆ ಮತ್ತು ಇದನ್ನು  ಸಂಭಾವ್ಯ ಅಪಾಯದ ಸೂಚಕಗಳಾಗಿ ಪರಿಗಣಿಸಬೇಕು, ಭವಿಷ್ಯದ ಪ್ರಕರಣಗಳ ನಿಖರವಾದ ಮುನ್ಸೂಚಯಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.

ಅಪಾಯದ ಗ್ರಹಿಕೆಗೆ ಪ್ರತಿಕ್ರಿಯೆಯಾಗಿ ಹೆಚ್ಚು ಕಠಿಣವಾದ ಪರೀಕ್ಷೆ ಮತ್ತು ಸಂಪರ್ಕಗಳನ್ನು ಕಡಿಮೆ ಮಾಡುವುದರಿಂದ ಭವಿಷ್ಯದ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ, ಆದರೆ ಸಡಿಲವಾದ ಪ್ರತಿಕ್ರಿಯೆ ಮತ್ತು ಅಪಾಯಗಳ ನಿರ್ಲಕ್ಷ್ಯದಿಂದ ಅಗಾಧವಾಗಿ ಸೋಂಕು ಪ್ರಕರಣಗಳು ಹೆಚ್ಚಬಹುದು ಎಂದು ಸಂಶೋಧಕರು ನುಡಿದರು.

"ಲಸಿಕೆ ಮತ್ತು ಚಿಕಿತ್ಸೆಯ ಲಭ್ಯತೆಯನ್ನು ಹೊರತುಪಡಿಸಿದ ಸಂದರ್ಭದಲ್ಲಿ  ೨೦೨೧ ವಸಂತ ಋತುವಿನ ವೇಳೆಗೆ ಸೋಂಕಿನ ಪ್ರಮಾಣ ಎಷ್ಟಾಗಬಹುದು ಎಂಬುದಾಗಿ ನಮ್ಮ ಅಧ್ಯಯನ ಹೇಳುತ್ತದೆ ಎಂದು ಅವರು ಹೇಳಿದರು.

ಸಂಶೋಧಕರು ಮೂರು ಸನ್ನಿವೇಶಗಳ ಅಡಿಯಲ್ಲಿ ಪ್ರಕ್ಷೇಪಣಗಳನ್ನು ಪರಿಗಣಿಸಿದ್ದಾರೆ: . ಪ್ರಸ್ತುತ ದೇಶ-ನಿರ್ದಿಷ್ಟ ಪರೀಕ್ಷಾ ಪ್ರಮಾಣ ಮತ್ತು ಪ್ರತಿಕ್ರಿಯೆ ಕ್ರಮಗಳ ಮುಂದುವರಿಕೆ. . ದಿನಕ್ಕೆ ಶೇಕಡಾ . ರಷ್ಟು ವರ್ಧಿತ ಪರೀಕ್ಷೆಯನ್ನು ಜುಲೈ , ಮತ್ತು ೩ರಂದು ಅಳವಡಿಸಿಕೊಂಡರೆ, ಗ್ರಹಿಸಿದ ಅಪಾಯಕ್ಕೆ ಸಂಪರ್ಕ ಪ್ರಮಾಣವನ್ನು ಕ್ಕೆ ಹೊಂದಿಸಲಾಗಿದೆ. ಇದು ಈಗಿನ ಪ್ರಮಾಣದಲ್ಲೇ ಪರೀಕ್ಷೆಗಳನ್ನು ನಡೆಸುತ್ತಿದ್ದರೆ ಸಂಭವನೀಯ ಸೊಂಕುಗಳ ಪ್ರಮಾಣವನ್ನು ಹೇಳುತ್ತದೆ.

ಮೊದಲ ಎರಡು ಸನ್ನಿವೇಶಗಳು ೨೦೨೦ ಶರತ್ಕಾಲದಲ್ಲಿ ಹೊಸ ಪ್ರಕರಣಗಳ ಒಂದು ದೊಡ್ಡ ಹೊರೆಯನ್ನು ತೋರಿಸುತ್ತವೆ, ಕೆಲವು ದೇಶಗಳಲ್ಲಿ ಕೇಂದ್ರೀಕೃತವಾಗಿರುವ ನೂರಾರು ಮಿಲಿಯನ್ ಪ್ರಕರಣಗಳು ಸಾಕಷ್ಟು ಅಪಾಯಗಳ ಮುನ್ಸೂಚನೆ ನೀಡುತ್ತವೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ. ಮುಖ್ಯವಾಗಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಸೋಂಕಿನ ಪ್ರಮಾಣ ವಿಪರೀತವಾಗಿ ಏರಬಹುದು ಎಂದು ಅಧ್ಯಯನ ಹೇಳಿದೆ.

"ನಮ್ಮ ಮಾದರಿಯು ಕೋವಿಡ್ -೧೯ ಪ್ರಗತಿ ಮತ್ತು ಹರಡುವಿಕೆಯನ್ನು ಅನುಕರಿಸುತ್ತದೆ, ಇದರಲ್ಲಿ ಜನರು ಹೇಗೆ ಸಂವಹನ ನಡೆಸುತ್ತಾರೆ, ಎಷ್ಟು ಮಂದಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ, ಎಷ್ಟು ಮಂದಿ ಪರೀಕ್ಷೆಗೆ ಒಳಗಾಗುತ್ತಾರೆ, ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಾರೆ, ಎಷ್ಟು ಮಂದಿ ಸಾಯುತ್ತಾರೆ - ಮತ್ತು ಜನರು ತಮ್ಮ ನಡವಳಿಕೆಯನ್ನು ಹೇಗೆ ಬದಲಾಯಿಸುತ್ತಾರೆಎಂಬುದರ ಅಂದಾಜು ಸಿಗುತ್ತದೆ ಎಂದು ರಹಮಂದಾದ್ ಹೇಳಿದರು.

"ನಂತರದ ಮಾದರಿಯ ನಿಯತಾಂಕಗಳನ್ನು ಅಂದಾಜು ಮಾಡಲು ನಾವು ವ್ಯಾಪಕವಾದ ಡೇಟಾವನ್ನು ಬಳಸುತ್ತೇವೆ. ಅಂದರೆ ಯಾವ ಭಾಗದ ಸೋಂಕುಗಳು ಲಕ್ಷಣರಹಿತವಾಗಿವೆ ಮತ್ತು ವೈರಸ್ ಎಷ್ಟು ಸಾಂಕ್ರಾಮಿಕವಾಗಿದೆ ಎಂಬುದನ್ನು ನೈಜ ಜಗತ್ತಿನ ದತ್ತಾಂಶಕ್ಕೆ ಉತ್ತಮ ಹೊಂದಾಣಿಕೆಯನ್ನು ನೀಡಲು ಬಳಸುತ್ತೇವೆಎಂದು ಅವರು ನುಡಿದರು.

ಮಾದರಿಯು ಹಲವಾರು ಪ್ರಮುಖ ಒಳನೋಟಗಳನ್ನು ಬಹಿರಂಗಪಡಿಸಿದೆ. ಅತ್ಯಂತ ಮೂಲಭೂತವಾಗಿ, ಸಾಂಕ್ರಾಮಿಕದ ಪ್ರಮಾಣವು ವ್ಯಾಪಕವಾಗಿ ಕಡಿಮೆ ವರದಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪರಿಗಣಿಸಲಾದ ೮೪ ರಾಷ್ಟ್ರಗಳಲ್ಲಿನ ಅಧಿಕೃತ ವರದಿಗಳಿಗಿಂತ ಕ್ರಮವಾಗಿ ಜೂನ್ ೧೮ ರವರೆಗಿನ ಪ್ರಕರಣಗಳು ಮತ್ತು ಸಾವುಗಳು ೧೧. ಮತ್ತು .೪೮ ಪಟ್ಟು ಹೆಚ್ಚಾಗಿದೆ ಎಂದು ಅವರು ಅಂದಾಜು ಮಾಡಿದ್ದಾರೆ.

ಇಷ್ಟೊಂದು ಪ್ರಮಾಣದ ಹೊರತಾಗಿಯೂ, ಯಾವುದೇ ದೇಶವು ಗುಂಪು ಪ್ರತಿರಕ್ಷೆಯನ್ನು ಒದಗಿಸುವ ಸಮೀಪದಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.

"ಅಧಿಕೃತ ಪ್ರಕರಣಗಳು ಅಧಿಕೃತ ವರದಿಗಳು ಸೂಚಿಸುವುದಕ್ಕಿಂತ ಹೆಚ್ಚಿನದಾಗಿದೆ, ಹೀಗಾಗಿ ಹೆಚ್ಚಿನ ಜನರು ಸೋಂಕಿಗೆ ಒಳಗಾಗುತ್ತಾರೆ. ಗುಂಪು ರೋಗನಿರೋಧಕ ಶಕ್ತಿಗಾಗಿ ಕಾಯುವುದು ಪ್ರಸ್ತುತ ಸಾಂಕ್ರಾಮಿಕ ರೋಗದಿಂದ ಹೊರಬರುವ ಕಾರ್ಯಸಾಧ್ಯವಾದ ಮಾರ್ಗವಲ್ಲಎಂದು ರಹಮಂದಾದ್ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ,೧೯,೯೯,೯೩೮, ಸಾವು ,೪೭,೬೮೨

ಚೇತರಿಸಿಕೊಂಡವರು- ೬೯,೪೫,೮೫೩

ಅಮೆರಿಕ ಸೋಂಕಿತರು ೩೦,೯೮,೯೫೯, ಸಾವು ,೩೪,೦೩೦

ಸ್ಪೇನ್ ಸೋಂಕಿತರು ,೯೯,೨೧೦, ಸಾವು ೨೮,೩೯೨

ಇಟಲಿ ಸೋಂಕಿತರು ,೪೧,೯೫೬, ಸಾವು ೩೪,೮೯೯

ಜರ್ಮನಿ ಸೋಂಕಿತರು ,೯೮,೫೧೨, ಸಾವು ,೧೦೫

ಚೀನಾ ಸೋಂಕಿತರು ೮೩,೫೭೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೮೬,೩೪೯, ಸಾವು ೪೪,೩೯೧

ಭಾರತ ಸೋಂಕಿತರು ,೫೩,೩೫೪, ಸಾವು ೨೦,೮೦೩

ಅಮೆರಿಕದಲ್ಲಿ ೫೮, ಇರಾನಿನಲ್ಲಿ ೧೫೩, ಬ್ರೆಜಿಲ್ನಲ್ಲಿ , ಇಂಡೋನೇಷ್ಯ ೫೦, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೭೩, ಪಾಕಿಸ್ತಾನದಲ್ಲಿ ೮೩, ಮೆಕ್ಸಿಕೋದಲ್ಲಿ ೮೯೫, ಭಾರತದಲ್ಲಿ ೧೫೦, ಒಟ್ಟಾರೆ ವಿಶ್ವಾದ್ಯಂತ ,೦೨೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೬೪,೧೭೧ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement