ಗ್ರಾಹಕರ ಸುಖ-ದುಃಖ
My Blog List
Monday, July 6, 2020
ಸಣ್ಣ ಉದ್ದಿಮೆಗಳಿಗೆ ೭೫೦ ದಶಲಕ್ಷ ಡಾಲರ್: ಭಾರತ-ವಿಶ್ವಸಂಸ್ಥೆ ಸಹಿ
ಸಣ್ಣ ಉದ್ದಿಮೆಗಳಿಗೆ ೭೫೦ ದಶಲಕ್ಷ ಡಾಲರ್
ನೆರವು ಒಪ್ಪಂದಕ್ಕೆ ಭಾರತ-ವಿಶ್ವಸಂಸ್ಥೆ ಸಹಿ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕದ ಪರಿಣಾಮವಾಗಿ ಸಂಕಷ್ಟದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಹಣಕಾಸು ಹರಿವನ್ನು ಹೆಚ್ಚಿಸುವ ಸಲುವಾಗಿ ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ೭೫೦ ದಶಲಕ್ಷ ಡಾಲರ್ ಮೊತ್ತದ ನೆರವು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಹಣಕಾಸು ಸಚಿವಾಲಯವು 2020 ಜುಲೈ 6ರ ಸೋಮವಾರ ಪ್ರಕಟಿಸಿತು.
ಎಂಎಸ್‌ಎಂಇ ತುರ್ತು ನೆರವು ಕಾರ್‍ಯಕ್ರಮಕ್ಕಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಕಾರ್‍ಯಕ್ರಮದ ಅಡಿಯಲ್ಲಿ ಕೊರೋನಾವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಕಂಗೆಟ್ಟಿರುವ ಎಂಎಸ್‌ಎಂಇಗಳಿಗೆ ಹಣಕಾಸು ನೆರವನ್ನು ಹೆಚ್ಚಿಸಲಾಗುವುದು.
ವಿಶ್ವ ಬ್ಯಾಂಕಿನ ಎಂಎಸ್‌ಎಂಇ ನೆರವು ಕಾರ್‍ಯಕ್ರಮವು ಸುಮಾರು ೧೫ ಲಕ್ಷ (೧.೫ ಮಿಲಿಯನ್) ಸುಸ್ಥಿರ ಎಂಎಸ್‌ಎಂಇಗಳಿಗೆ ತತ್‌ಕ್ಷಣವೇ ದ್ರವ್ಯತೆ ಮತ್ತು ಸಾಲದ ಅಗತ್ಯಗಳನ್ನು ಪೂರೈಸಲಿದೆ ಮತ್ತು ಕೊರೋನಾ ವೈರಸ್ ಸಂಕಷ್ಟದ ಹಾಲಿ ಆಘಾತದಿಂದ ಚೇತರಿಸುವಂತೆ ಮಾಡಿ ಲಕ್ಷಾಂತರ ಉದ್ಯೋಗಗಳ ಸಂರಕ್ಷಣೆ ಮಾಡಲಿದೆ. ವಿಶಾಲ ತಳಹದಿಯ ಸುಧಾರಣೆಯ ನಿಟ್ಟಿನಲ್ಲಿ ಇದು ಮೊದಲ ಕ್ರಮವಾಗಿದೆ ಎಂದು ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿತು.
ಭಾರತ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಅಡಿಷನಲ್ ಕಾರ್‍ಯಕದರ್ಶಿ ಸಮೀರ್ ಕುಮಾರ್ ಖಾರೆ ಮತ್ತು ವಿಶ್ವಬ್ಯಾಂಕ್ ಪರವಾಗಿ ಅದರ ರಾಷ್ಟ್ರೀಯ ನಿರ್ದೇಶಕ ಜುನೈದ್ ಅಹ್ಮದ್ ಸಹಿ ಹಾಕಿದರು.
Subscribe to:
Post Comments (Atom)
No comments:
Post a Comment