Friday, July 24, 2020

ದೇಶದಲ್ಲಿ ಕೊರೋನಾ ಪ್ರಕರಣ ೧೨,೮೭,೯೪೫ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಪ್ರಕರಣ ೧೨,೮೭,೯೪೫ಕ್ಕೆ ಏರಿಕೆ

 ನವದೆಹಲಿ: ಭಾರತದಲ್ಲಿ ೪೯,೩೧೦ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ೧೨,೮೭,೯೪೫ಕ್ಕೆ ಏರಿದೆ. ಇದೇ ವೇಳೆಗೆ ಸೋಂಕಿನಿಂದ ಗುಣಮುಖರಾಗಿ ಚೇತರಿಸಿದರೆ ಸಂಖ್ಯೆ ,೧೭,೨೦೮ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು 2020 ಜುಲೈ 24ರ ಶುಕ್ರವಾರ ತಿಳಿಸಿವೆ. ಇದರಿಂದಾಗಿ ಶೇಕಡಾ ೬೩.೪೫ರಷ್ಟು ಜನರು ಚೇತರಿಸಿಕೊಂಡಂತಾಗಿದೆ.

ದೇಶದಲ್ಲಿ ೭೪೦ ಹೊಸ ಸಾವುಗಳೊಂದಿಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೩೦,೬೦೧ ಕ್ಕೆ ಏರಿದೆ ಎಂದು ಶುಕ್ರವಾರ ಬೆಳಗ್ಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳಿವೆ.

ದೇಶದಲ್ಲಿ ಪ್ರಸ್ತುತ ,೪೦,೧೩೫ ಸಕ್ರಿಯ ಕೊರೊನಾವೈರಸ್ ಸೋಂಕಿನ ಪ್ರಕರಣಗಳಿವೆ.

ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೭೪೦ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೯೮, ಕರ್ನಾಟಕದಿಂದ ೯೭, ತಮಿಳುನಾಡಿನಿಂದ ೮೮, ಆಂಧ್ರಪ್ರದೇದಿಂದ ೬೧, ಪಶ್ಚಿಮ ಬಂಗಾಳದಿಂದ ೩೪, ಗುಜರಾತಿನಿಂದ ೨೮, ಉತ್ತರ ಪ್ರದೇಶ ಮತ್ತು ದೆಹಲಿಯಿಂದ ತಲಾ ೨೬, ರಾಜಸ್ಥಾನದಿಂದ ೧೧ ಸಾವುಗಳು ವರದಿಯಾಗಿವೆ. ರಾಜಸ್ಥಾನ, ಮಧ್ಯಪ್ರದೇಶದಿಂದ ೧೦ ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ತೆಲಂಗಾಣದಿಂದ ತಲಾ ಸಾವುಗಳು ದಾಖಲಾಗಿವೆ.

ಪಂಜಾಬಿನಲ್ಲಿ , ಅಸ್ಸಾಂ, ಒಡಿಶಾ ಮತ್ತು ಹರಿಯಾಣದಲ್ಲಿ ತಲಾ , ಕೇರದಲ್ಲಿ , ಉತ್ತರಾಖಂಡ, ಜಾರ್ಖಂಡ್ ಮತ್ತು ಪುದುಚೇರಿಯಲ್ಲಿ ತಲಾ ಸಾವುಗಳು ಸಂಭವಿಸಿವೆ. ಛತ್ತೀಸ್‌ಗಢ, ತ್ರಿಪುರ ಮತ್ತು ಗೋವಾ ತಲಾ ಸಾವು ದಾಖಲಾಗಿವೆ.


No comments:

Advertisement