ಹರಿಯಾಣ: ವಿಶ್ವದ
ಮೊತ್ತ ಮೊದಲ ವಿಶೇಷ ಸುರಂಗ ಮಾರ್ಗ
ಚಂಡೀಗಢ: ದೇಶದ ಅತೀದೊಡ್ಡದಾದ ಮತ್ತು ಭಾರತೀಯ ರೈಲ್ವೆ ಇಲಾಖೆಯ ಕನಸಿನ ಕೂಸಾದ ಸಮರ್ಪಿತ ಸರಕು ಕಾರಿಡಾರ್ (ಡೆಡಿಕೇಟೆಡ್ ಫ್ರೈಟ್ ಕಾರಿಡಾರ್) ಯೋಜನೆಯು ಕೊರೊನಾ ವೈರಸ್ ಕಾಟದ ನಡುವೆಯೂ ಸುಲಲಿತವಾಗಿ ನಡೆಯುತ್ತಿದ್ದು, ಮುಂದಿನ ಹನ್ನೆರಡು ತಿಂಗಳ ಒಳಗಾಗಿ ಸರಕು ಸಾಗಣೆ ರೈಲು ಓಡಾಟಕ್ಕೆ ಸಜ್ಜಾಗಲಿದೆ.
ಈ
ಪಶ್ಚಿಮ ಸಮರ್ಪಿತ ಸರಕು ಕಾರಿಡಾರಿನಲ್ಲಿ (ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್) ಡಬಲ್ ಸ್ಟ್ಯಾಕ್ ಕಂಟೇನರ್‌ಗಳ ಜೊತೆಗೆ ಎಲೆಕ್ಟ್ರಿಕ್ ಗೂಡ್ಸ್ ರೈಲು ಓಡಲಿದೆ ಎಂದು ಅಧಿಕಾರಿಗಳು 2020 ಜುಲೈ 25ರ ಶನಿವಾರ ಇಲ್ಲಿ ತಿಳಿಸಿದರು.
ಹರಿಯಾಣದ
ಸೊಹ್ನಾ ಬಳಿ ಹಬ್ಬಿರುವ ಅರಾವಳಿ ಪರ್ವತ ಶ್ರೇಣಿಗಳ ಮೂಲಕ ಒಂದು ಕಿಲೋ ಮೀಟರ್ ಉದ್ದದ ಸುರಂಗವನ್ನು ಈಗಾಗಲೇ ಕೊರೆಯಲಾಗುತ್ತಿದ್ದು, ಎಂಜಿನಿಯರ್‌ಗಳು ಸುಮಾರು ೨೫೦೦-೫೦೦೦ ದಶಲಕ್ಷ ವರ್ಷಗಳಷ್ಟು ಹಳೆಯದೆಂದು ಭಾವಿಸಲಾಗಿರುವ ಪ್ರೋಟೆರೋಜೋಯಿಕ್ ಬಂಡೆಗಳನ್ನು ಒಡೆದು ವಿಶ್ವದ ಮೊದಲ ಎಲೆಕ್ಟ್ರಿಕ್ ಡಬಲ್ ಸ್ಟಾಕ್ ಕಂಟೇನರ್ ಸುರಂಗವನ್ನು ನಿರ್ಮಿಸುತ್ತಿದ್ದಾರೆ.
ಮುಂದಿನ
ಹನ್ನೆರಡು ತಿಂಗಳ ಒಳಗೆ ಸುರಂಗದ ಕೆಲಸಗಳು ಪೂರ್ಣಗೊಳ್ಳಲಿದ್ದು, ಮೊದಲ ಹಂತದಲ್ಲಿ ಈಸ್ಟರ್ನ್ ಮತ್ತು ವೆಸ್ಟರ್ನ್ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ವಿಶ್ವ
ಪ್ರಸಿದ್ಧ ಅರಾವಳಿ ಬೆಟ್ಟಗಳ ನಡುವೆ ಡಬಲ್ ರೇಕ್ ಸುರಂಗವನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು ಎಂದು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ ಸಿಎಂಡಿ ಎಕೆ ಸಚನ್ ಹೇಳಿದರು.
ಆದಾಗ್ಯೂ,
ಕಠಿಣ ಸವಾಲುಗಳ ಮಧ್ಯೆ ಈ ಸುರಂಗ ನಿರ್ಮಾಣ
ಒಂದು ವರ್ಷದೊಳಗೆ ಪೂರ್ಣಗೊಂಡಿದೆ. ಡಬಲ್ ಸ್ಟ್ಯಾಕ್ ಕಂಟೇನರ್‌ಗಳ ಕಾರ್ಯಾಚರಣೆಗೆ ಸೂಕ್ತವಾದ ವಿಶ್ವದ ಮೊದಲ ಎಲೆಕ್ಟ್ರಿಕ್ ರೈಲು ಸುರಂಗದಿದು ಎಂದು ಅವರು ನುಡಿದರು.
ಸದರಿ
ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಯೋಜನೆ ಪೂರ್ಣಗೊಂಡರೆ, ಈ ಸುರಂಗದ ಮೂಲಕ
ಡಬಲ್ ಸ್ಟ್ಯಾಕ್ ಕಂಟೇನರ್ ಮತ್ತು ೨೫ ಟನ್ ಆಕ್ಸಲ್
ಲೋಡ್ ಹೊಂದಿರುವ ಸರಕು ರೈಲುಗಳು ಗಂಟೆಗೆ ೧೦೦ ಕಿ.ಮೀ ವೇಗದಲ್ಲಿ
ಚಲಿಸಲಿವೆ.
ಹರಿಯಾಣದ
ಮೇವತ್ ಮತ್ತು ಗುರುಗ್ರಾಮ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸುರಂಗವು ಅರಾವಳಿ
ಶ್ರೇಣಿಯ ಮೂಲಕ ಅಪಾಯಕಾರಿ ಇಳಿಜಾರು, ಏರುತಗ್ಗುಗಳನ್ನು ಹಾದುಹೋಗಲಿದೆ. ಡಿ-ಆಕಾರದ ಸುರಂಗ
೧೫೦ ಚದರ ಮೀಟರ್ ಹೈಬ್ರಿಡ್ ವಿಭಾಗೀಯ ಪ್ರದೇಶವನ್ನು ಹೊಂದಿದ್ದು, ಡಬ್ಲ್ಯುಡಿಎಫ್‌ಸಿಯ ಮೇಲೆ ಡಬಲ್ ಸ್ಟ್ಯಾಕ್ ಕಂಟೇನರ್‌ಗಳು ಸುಲಭವಾಗಿ ಚಲಿಸಲು ಡಬಲ್ ಲೈನುಗಳನ್ನು ನೆರವಾಗಲಿವೆ.
ಸುರಂಗದ
ಆಯಾಮಗಳು ನೇರ ಭಾಗಗಳಲ್ಲಿ ೧೦.೫ ಮೀಟರ್
ಎತ್ತರವಿದ್ದು, ೧೫ ಮೀಟರ್ ಅಗಲ
ಇರಲಿವೆ. ಮತ್ತು ೧೨.೫ ಮೀಟರ್
ಎತ್ತರಕ್ಕೆ ಇರುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.
ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ಗಳಲ್ಲಿ ಒಟ್ಟು ೬ ಸುರಂಗಗಳನ್ನು ನಿರ್ಮಿಸಲಾಗುತ್ತಿದ್ದು, ಸರಕು ರೈಲುಗಳ ಚಲನೆ ಎರಡೂ ಕಾರಿಡಾರ್‌ಗಳಲ್ಲಿ ವೇಗವಾಗಿ ಚಲಿಸುವ ಉದ್ದೇಶವಿರುವುದರಿಂದ ಪ್ರಯಾಣಿಕರ ರೈಲುಗಳ ವೇಗವೂ ಹೆಚ್ಚಾಗಲಿವೆ ಎಂದು ಅಧಿಕಾರಿಗಳು ನುಡಿದರು.
No comments:
Post a Comment