Saturday, July 25, 2020

ಮ.ಪ್ರ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕೊರೋನಾ

ಮ.ಪ್ರ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕೊರೋನಾ

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು 2020 ಜುಲೈ 25ರ ಶನಿವಾರ ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ತಾವು ಆಸ್ಪತ್ರೆಗೆ ದಾಖಲಾಗುವುದಾಗಿ ಚೌಹಾಣ್ ಸರಣಿ ಟ್ವೀಟ್‌ಗಳ ಮೂಲಕ ಪ್ರಕಟಿಸಿದರು.

"ನನ್ನ ಪ್ರಿಯ ರಾಜ್ಯದ ಜನರೇ, ನನಗೆ ಕೋವಿಡ್-೧೯ ಲಕ್ಷಣಗಳು ಕಂಡು ಬಂದಿವೆ ಮತ್ತು ಪರೀಕ್ಷೆಯ ನಂತರ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂz ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನನ್ನ ಎಲ್ಲ ಸಹೋದ್ಯೋಗಿಗಳಿಗೆ ಮನವಿ ಮಾಡುತ್ತೇನೆ. ಮತ್ತು ಜೊತೆ ನನ್ನ ಆಪ್ತ ಸಂಪರ್ಕವಿರುವವರೆಲ್ಲರೂ ಸ್ವತಃ ಕ್ವಾರಂಟೈನ್‌ಗೆ ಒಳಗಾಗಬೇಕುಎಂದು ಚೌಹಾಣ್ ಹಿಂದಿಯಲ್ಲಿ ಮಾಡಿರುವ ಟ್ವೀಟಿನಲ್ಲಿ ಸೂಚಿಸಿದರು.

ಕೋವಿಡ್-೧೯ ಸೋಂಕನ್ನು ಸಕಾಲಿಕ ಚಿಕಿತ್ಸೆ ನೀಡಿದರೆ, ವ್ಯಕ್ತಿ ಸಂಪೂರ್ಣ ಗುಣಮುಖನಾಗುತ್ತಾನೆ. ನಾನು ಮಾರ್ಚ್ ೨೫ ರಿಂದ ಪ್ರತಿದಿನ ಸಂಜೆ ಕೊರೋನಾ ಸೋಂಕಿನ ಸ್ಥಿತಿಯನ್ನು ಪರಿಶೀಲಿಸುತ್ತಿದ್ದೇನೆ. ಕೊರೋನಾ ಪರಿಸ್ಥಿತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾಧ್ಯವಾದಷ್ಟು ಸಾಧ್ಯವಾದಷ್ಟು ಪರಿಶೀಲಿಸಲು ಪ್ರಯತ್ನಿಸುತ್ತೇಎಂದು ಅವರು ಹೇಳಿದರು.

ಪರಿಶೀಲನಾ ಸಭೆಯನ್ನು ಈಗ ಗೃಹ ಸಚಿವ ನರೋತ್ತಮ್ ಮಿಶ್ರಾ, ನಗರಾಭಿವೃದ್ಧಿ ಮತ್ತು ಆಡಳಿತ ಸಚಿವ ಭೂಪೇಂದ್ರ ಸಿಂಗ್, ಆರೋಗ್ಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮತ್ತು ಆರೋಗ್ಯ ಸಚಿವ ಡಾ.ಪ್ರಭುರಾಮ್ ಚೌಧರಿ ಅವರು ತಮ್ಮ ಗೈರುಹಾಜರಿಯಲ್ಲಿ ನಡೆಸುವರು ಎಂದು ಮುಖ್ಯಮಂತ್ರಿ ನುಡಿದರು.

"ಚಿಕಿತ್ಸೆಯ ಸಮಯದಲ್ಲಿ ರಾಜ್ಯದಲ್ಲಿ ಕೋವಿಡ್ -೧೯ ನಿಗ್ರಹಕ್ಕಾಗಿ ಸಹಾಯ ಮಾಡಲು ನಾನು ಸರ್ವ ಯತ್ನವನ್ನೂ ಮಾಡುತ್ತೇನೆ" ಎಂದು ಅವರು ಹೇಳಿದರು.

ತಾವು ಈದಿನ ಕೋವಿಡ್ -೧೯ ಚಿಕಿತ್ಸೆಗೆ ಮೀಸಲಾದ ಚಿರಾಯು ಆಸ್ಪತ್ರೆಗೆ ದಾಖಲಾಗುವುದಾಗಿ ಚೌಹಾಣ್ ಟ್ವೀಟ್ ಮಾಡಿದರು.

ಕೊರೋನಾ ರೋಗಿಯೊಬ್ಬರು ಮನೆಯಲ್ಲಿಯೇ ಕ್ಯಾರೆಂಟೈನ್‌ನಲ್ಲಿ ಇರಬೇಕೆಂದು ಅಥವಾ ಆಸ್ಪತ್ರೆಗೆ ಹೋಗಬಾರದು ಎಂದು ಒತ್ತಾಯಿಸಬಾರದು. ನಾವು ವೈದ್ಯರ ಸೂಚನೆಗಳನ್ನು ಪಾಲಿಸಬೇಕುಎಂದೂ ಮುಖ್ಯಮಂತ್ರಿ ತಮ್ಮ ಟ್ವೀಟಿನಲ್ಲಿ ತಿಳಿಸಿದ್ದಾರೆ.

ಚೌಹಾಣ್ ಅವರ ಸಚಿವ ಸಹೋದ್ಯೋಗಿಯೊಬ್ಬರಿಗೆ ಜುಲೈ ೨೨ರಂದು ಕೋವಿಡ್-೧೯ ಸಾಂಕ್ರಾಮಿಕ ಸೋಂಕಿತ್ತು.

ಉತ್ತರ ಪ್ರದೇಶದ ತಮ್ಮ ಹುಟ್ಟೂರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆಯಲ್ಲಿ ನಿಧನರಾಗಿದ್ದ ಮಧ್ಯಪ್ರದೇಶದ ರಾಜ್ಯಪಾಲ ಲಾಲ್ ಜಿ ಟಂಡನ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಯವರು ಜುಲೈ ೨೧ರಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಮತ್ತು ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸುಹಾಸ್ ಭಗತ್ ಅವರೊಂದಿಗೆ ಸರ್ಕಾರಿ ವಿಮಾನದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ಭೇಟಿ ನೀಡಿದ್ದರು.

ಚೌಹಾಣ್ ಸಂಪುಟದ ಸಚಿವರನ್ನು ಭೋಪಾಲ್‌ನ ಖಾಸಗಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

No comments:

Advertisement