Tuesday, July 21, 2020

ಕೊರೋನಾ ಪ್ರತಿಕಾಯ ಹೊಂದಿರುವವರು ದೆಹಲಿಯಲ್ಲಿ ಶೇಕಡಾ ೨೩.೪೮

ಕೊರೋನಾ ಪ್ರತಿಕಾಯ ಹೊಂದಿರುವವರು
ದೆಹಲಿಯಲ್ಲಿ ಶೇಕಡಾ ೨೩.೪೮

ನವದೆಹಲಿ: ದೆಹಲಿಯಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ರೋಗ ವಿರೋಧಿ ಐಜಿಜಿ ಪ್ರತಿಕಾಯ ಹೊಂದಿರುವವರ ಸಂಖ್ಯೆ ಶೇಕಡಾ ೨೩.೪೮ ರಷ್ಟಿದೆ ಎಂದು ದೆಹಲಿ ಸಿರೊ-ಸಮೀಕ್ಷೆ 2020 ಜುಲೈ 21ರ ಮಂಗಳವಾರ ವರದಿ ಮಾಡಿತು.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ -ಎನ್ಸಿಡಿಸಿ) ನಡೆಸಿದ ಅಧ್ಯಯನವು ಹೆಚ್ಚಿನ ಸಂಖ್ಯೆಯ ಸೋಂಕಿತ ವ್ಯಕ್ತಿಗಳು ಲಕ್ಷಣರಹಿತರು ಎಂಬುದಾಗಿ ಕೂಡಾ ಸೂಚಿಸಿದೆ. ಸಮೀಕ್ಷೆಯನ್ನು ೨೭ ಜೂನ್ ೨೦೨೦ ರಿಂದ ಜುಲೈ ೧೦ ರವರೆಗಿನ ಅವಧಿಯಲ್ಲಿ ನಡೆಸಲಾಗಿತ್ತು.

ಪ್ರಯೋಗಾಲಯ ಮಾನದಂಡಗಳ ಪ್ರಕಾರ ಒಟ್ಟು ೨೧,೩೮೭ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಇಂತಹ ಪರೀಕ್ಷೆಗಳು ಸಾಮಾನ್ಯ ಜನಸಂಖ್ಯೆಯಲ್ಲಿ ಪ್ರತಿಕಾಯಗಳ ಉಪಸ್ಥಿತಿಯನ್ನು ಗುರುತಿಸಲು ಸಹಾಯ ಮಾಡುತ್ತವೆ.

ಪದೇ ಪದೇ ಸಿರೊ-ಕಣ್ಗಾವಲು ಅಂದರೆ ಪ್ರತಿಕಾಯ ಪರೀಕ್ಷೆಯನ್ನು ನಡೆಸುವುದರಿಂದ ಕಾಲಕಾಲಕ್ಕೆ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿರ್ಣಯಿಸಲು ಪ್ರಮುಖ ಪುರಾವೆಗಳು ಲಭ್ಯವಾಗುತ್ತವೆ.

ದೆಹಲಿ ಸಿರೊ-ಸಮೀಕ್ಷೆಯನ್ನು ಹೇಗೆ ಮಾಡಲಾಯಿತು?

ದೆಹಲಿಯ ಎಲ್ಲಾ ೧೧ ಜಿಲ್ಲೆಗಳಿಗೆ ಸಮೀಕ್ಷಾ ತಂಡಗಳನ್ನು ರಚಿಸಲಾಯಿತು. ಲಿಖಿತ ತಿಳುವಳಿಕೆಯುಳ್ಳ ಒಪ್ಪಿಗೆಯನ್ನು ಪಡೆದ ನಂತರ ಆಯ್ದ ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು ಮತ್ತು ನಂತರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಅನುಮೋದಿಸಿದ ಕೋವಿಡ್ ಕವಚ ಎಲಿಸಾವನ್ನು ಬಳಸಿ, ಅವರ ಸೆರಾವನ್ನು ಐಜಿಜಿ ಪ್ರತಿಕಾಯಗಳು ಮತ್ತು ಸೋಂಕಿಗಾಗಿ ಪರೀಕ್ಷಿಸಲಾಯಿತು.

ಎಲಿಸಾ ಪರೀಕ್ಷೆಯನ್ನು ಬಳಸಿಕೊಂಡು ದೇಶದಲ್ಲಿ ನಡೆಸಿದ ಅತಿದೊಡ್ಡ ಸಿರೊ-ಹರಡುವಿಕೆಯ ಅಧ್ಯಯನಗಳಲ್ಲಿ ಇದು ಒಂದಾಗಿದೆ ಎಂದು ವರದಿ ತಿಳಿಸಿದೆ.

ದೆಹಲಿ ಸಿರೊ-ಸಮೀಕ್ಷೆಯ ಫಲಿತಾಂಶಗಳು

ಗಮನಾರ್ಹವಾಗಿ, ಹೆಚ್ಚಿನ ಸಂಖ್ಯೆಯ ಸೋಂಕಿತ ವ್ಯಕ್ತಿಗಳು ಲಕ್ಷಣರಹಿತರಾಗಿ ಉಳಿದಿದ್ದಾರೆ ಎಂದು ಅಧ್ಯಯನವು ಹೇಳಿದೆ. ಇದು ಕೆಳಗಿನವುಗಳನ್ನು ಸೂಚಿಸುತ್ತದೆ:

. ಸುಮಾರು ಆರು ತಿಂಗಳುಗಳಲ್ಲಿ, ದಟ್ಟ ಜನಸಂಖ್ಯೆಯ ಹಲವಾರು ಪ್ರದೇಶಗಳಿರುವ ದೆಹಲಿಯಲ್ಲಿ ಕೇವಲ ೨೩.೪೮ ರಷ್ಟು ಜನರು ಮಾತ್ರ ಸಾಂಕ್ರಾಮಿಕ ರೋಗದಿಂದ ಬಾಧಿತರಾಗಿದ್ದಾರೆ.

. ಆದಾಗ್ಯೂ, ಜನಸಂಖ್ಯೆಯ ಗಮನಾರ್ಹ ಪ್ರಮಾಣವು ಇನ್ನೂ ದುರ್ಬಲವಾಗಿದೆ. ಆದ್ದರಿಂದ, ಧಾರಕ ಕ್ರಮಗಳು ಒಂದೇ ಕಠಿಣತೆಯೊಂದಿಗೆ ಮುಂದುವರಿಯುವ ಅಗತ್ಯವಿದೆ. ದೈಹಿಕ ಅಂತರ ಪಾಲನೆ, ಮುಖಗವಸು (ಮಾಸ್ಕ್)/ ಹೊದಿಕೆಯ ಬಳಕೆ, ಕೈ ನೈರ್ಮಲ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಏತನ್ಮಧ್ಯೆ, ಭಾರತದಲ್ಲಿ ಒಟ್ಟು ೧೧,೫೫,೧೯೧ ಕೊರೋನವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೆಹಲಿಯಲ್ಲಿ ಇಲ್ಲಿಯವರೆಗೆ ,೨೩,೭೪೭ ಕೋವಿಡ್ -೧೯ ಪ್ರಕರಣಗಳಿದ್ದು, ರಾಜಧಾನಿಯು ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಮೂರನೇ ಸ್ಥಾನದಲ್ಲಿದೆ.

No comments:

Advertisement