ದೇಶದ ಸ್ವಾವಲಂಬನೆಗಾಗಿ ರಕ್ಷಣಾ ಉತ್ಪಾದನೆಗೆ
ಒತ್ತು: ಪ್ರಧಾನಿ ಮೋದಿ
ನವದೆಹಲಿ: ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಸಲುವಾಗಿ ದೇಶದಲ್ಲಿ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 27ರ ಗುರುವಾರ ಹೇಳಿದರು.
"ಅನೇಕ ವರ್ಷಗಳಿಂದ, ಭಾರತವು ಅತಿದೊಡ್ಡ ರಕ್ಷಣಾ ಆಮದುದಾರರಲ್ಲಿ ಒಂದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಅದು ರಕ್ಷಣಾ ಉತ್ಪಾದನೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿತ್ತು ಮತ್ತು ೧೦೦ ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಆದರೆ, ದುರದೃಷ್ಟವಶಾತ್, ಈ ವಿಷಯವು ಬಳಿಕ ಅಗತ್ಯವಾದ ಗಮನವನ್ನು ಸೆಳೆಯಲಿಲ್ಲ’ ಎಂದು ಪ್ರಧಾನಿಯವರು ’ಆತ್ಮ ನಿರ್ಭರ ಭಾರತ ರಕ್ಷಣಾ ಉದ್ಯಮ’ ಕುರಿತ ವೆಬಿನಾರ್ ಕಾರ್ಯಕ್ರಮದಲ್ಲಿ ಹೇಳಿದರು.
ಸ್ವಯಂಚಾಲಿತ ಮಾರ್ಗದ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ಶೇಕಡಾ ೭೪ರಷ್ಟು ಎಫ್ಡಿಐಗೆ (ವಿದೇಶಿ ನೇರ ಹೂಡಿಕೆ) ಅನುಮತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪ್ರಧಾನಿ ಹೇಳಿದರು.
"ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು, ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆದಾರರಿಗೆ ದೊಡ್ಡ ಪಾತ್ರವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ" ಎಂದು ಮೋದಿ ಹೇಳಿದರು.
ಭಾರತೀಯ ರಕ್ಷಣಾ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೆಲವು ರಕ್ಷಣಾ ಸಾಧನಗಳಿಗೆ ಆಮದು ನಿರ್ಬಂಧ ಹೇರಲಾಗಿದೆ ಎಂದು ಪ್ರಧಾನಿ ನುಡಿದರು.
"ನಾವು ಇತ್ತೀಚೆಗೆ ಕಾರ್ಮಿಕ ಸುಧಾರಣೆಗಳನ್ನೂ ನೋಡಿದ್ದೇವೆ; ಸುಧಾರಣಾ ಕಸರತ್ತು ಈಗ ನಿಲ್ಲುವುದಿಲ್ಲ’ ಎಂದು
ಮೋದಿ ಹೇಳಿದರು.
"ನಮ್ಮ ಆತ್ಮನಿರ್ಭರ ಭಾರತ’ದ ನಮ್ಮ ಸಂಕಲ್ಪವು ಒಳಮುಖ ನೋಟದ ಉದ್ದೇಶದ್ದಲ್ಲ, ಬದಲಿಗೆ ಭಾರತವನ್ನು ಸಮರ್ಥವನ್ನಾಗಿ ಮಾಡುವ ಮತ್ತು ಜಾಗತಿಕ ಶಾಂತಿ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವಂತಹುದು’ ಎಂದು ಪ್ರಧಾನಿ ನುಡಿದರು.
No comments:
Post a Comment