ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಂಎಸ್ ಧೋನಿ ನಿವೃತ್ತಿ
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು 2020 ಆಗಸ್ಟ್ 15ರ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಧೋನಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ತಮ್ಮ ನಿವೃತ್ತಿಯನ್ನು ದೃಢ ಪಡಿಸಿದರು.
"ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ೧೯೨೯ ಗಂಟೆಯಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ’ ಎಂದು ದೋನಿ ಅವರು ಪೋಸ್ಟ್ ಮಾಡಿದ್ದಾರೆ.
೨೦೦೭ ರ ಟಿ ೨೦ ವಿಶ್ವಕಪ್, ೫೦ ಓವರ್‌ಗಳ ವಿಶ್ವಕಪ್ ೨೦೧೧ ಮತ್ತು ೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಧೋನಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವೀ ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ನಾಯಕನಾಗಿ ನಿವೃತ್ತರಾದರು.
೨೦೧೯ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅವರು ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು, ಅಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ೨೦೧೫ರ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಧೋನಿ ಮುಂದಿನ ಐದು ವರ್ಷಗಳ ಕಾಲ ಏಕದಿನ ಮತ್ತು ಟಿ ೨೦ ಪಂದ್ಯಗಳನ್ನು ಆಡುತ್ತಾ, ಭಾರತವನ್ನು ೨೦೧೫ ರ ವಿಶ್ವಕಪ್ ಮತ್ತು ಭಾರತದಲ್ಲಿ ೨೦೧೬ರ ವಿಶ್ವ ಟಿ ೨೦ ಸೆಮಿಫೈನಲ್‌ಗೆ ಮುನ್ನಡೆಸಿದ್ದರು.
No comments:
Post a Comment