ಮುಲಾಯಂ ಸಿಂಗ್ ಯಾದವ್ ಆಸ್ಪತ್ರೆಗೆ
ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (೮೦) ಅವರು ಅಸ್ವಸ್ಥರಾಗಿದ್ದು ಅವರನ್ನು ಲಕ್ನೋದ ಮೇಡಂಟ ಆಸ್ಪತ್ರೆಗೆ 2020 ಆಗಸ್ಟ್ 06ರ ಗುರುವಾರ ರಾತ್ರಿ ದಾಖಲಿಸಲಾಗಿದೆ. ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 07ರ ಶುಕ್ರವಾರ ತಿಳಿಸಿದವು.
ಮುಲಾಯಂ ಸಿಂಗ್ ಅವರಿಗೆ ಹೊಟ್ಟೆ ನೋವು ಇತ್ತು ಮತ್ತು ಹೊಟ್ಟೆ ಸಮಸ್ಯೆಯ ಕಾರಣದಿಂದ ಅವರು ಸಮರ್ಪಕವಾಗಿ ಆಹಾರ ತೆಗೆದುಕೊಳ್ಳಲು ಆಗುತ್ತಿರಲಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ರಾಕೇಶ್ ಕಪೂರ್ ಹೇಳಿದರು. ಸಿಂಗ್ ಅವರ ಒಟ್ಟಾರೆ ಆರೋಗ್ಯ ಸ್ಥಿರವಾಗಿದೆ ಎಂದು ಕಪೂರ್ ಹೇಳಿದರು.
ಹಿರಿಯ ರಾಜಕಾರಣಿಯ ಪುತ್ರ ಅಖಿಲೇಶ್ ಯಾದವ್, ಸೊಸೆ ಡಿಂಪಲ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ಹಲವಾರು ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು.
ಇದಕ್ಕೆ ಮುನ್ನ ಮೇ ತಿಂಗಳಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆಗಾಗಿ ಹಿರಿಯ ನಾಯಕನನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
No comments:
Post a Comment