ಅಂಚೆ ಮತಪತ್ರ, ನಾಮಪತ್ರಕ್ಕೆ ಆನ್‌ಲೈನ್
ಚುನಾವಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ
ನವದೆಹಲಿ: ಕೋವಿಡ್ ೧೯ ರೋಗಿಗಳು ಮತ್ತು ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರ ಹಾಗೂ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿರುವ ಹೊಸ ಚುನಾವಣಾ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ 2020 ಆಗಸ್ಟ್ 21ರ ಶುಕ್ರವಾರ ಪ್ರಕಟಿಸಿತು.
ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆ ನಡೆಸಲು ಭಾರತದ ಚುನಾವಣಾ ಆಯೋಗ ಶುಕ್ರವಾರ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತು.
ಹೊಸ ಮಾರ್ಗಸೂಚಿ ಪ್ರಕಾರ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದು ಮತ್ತು ಜನರು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮುಖಗವಸುಗಳನ್ನು (ಮಾಸ್ಕ್) ಧರಿಸಬೇಕಾಗುತ್ತದೆ.
ಸಭೆಯ ಬಳಿಕ ಚುನಾವಣಾ ಆಯೋಗವು ಹೊಸ ಚುನಾವಣಾ ಮಾರ್ಗಸೂಚಿಗಳನ್ನು ಪ್ರಕಟಿಸಿತು. ರಾಜಕೀಯ ಪಕ್ಷಗಳು ಮತ್ತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿUಳು ನೀಡಿದ ಸಲಹೆ, ಸೂಚನೆಗಳನ್ನು ಆಧರಿಸಿ ಹೊಸ ನಿಯಮಗಳನ್ನು ರೂಪಿಸಲಾಗಿದೆ.
"ಅಂಚೆ ಮತದಾನ ಸೌಲಭ್ಯದ ಆಯ್ಕೆಯನ್ನು ’ದಿವ್ಯಾಂಗ ವ್ಯಕ್ತಿಗಳು’, ೮೦ ವರ್ಷಕ್ಕಿಂತ ಮೇಲ್ಪಟ್ಟ ಜನರು, ಅಧಿಸೂಚಿತ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ಜನರು ಮತ್ತು ಕೋವಿಡ್-೧೯ ಪಾಸಿಟಿವ್/ ಬಹುತೇಕ ಸೋಂಕಿಗೆ ಒಳಗಾದವರು ಎಂಬುದಾಗಿ ಗುರುತಿಸಲ್ಪಟ್ಟ ಮತದಾರರಿಗೆ ವಿಸ್ತರಿಸಲಾಗಿದೆ,’ ಎಂದು ಮುಖ್ಯ ಚುನಾವಣಾ ಆಯುಕ್ತರು ನುಡಿದರು.
ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಮುಂಬರುವ ಚುನಾವಣೆಗಳಿಗಾಗಿ ಮಾರ್ಗಸೂಚಿಗಳನ್ನು ಆಯೋಗವು ಸಿದ್ಧಪಡಿಸಿದೆ, ಬಿಹಾರ ಚುನಾವಣೆಯ ವೇಳಾಪಟ್ಟಿಯನ್ನು ಸೆಪ್ಟೆಂಬರ್ ೨೦ರ ಒಳಗೆ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಮತದಾನ ನಡೆಯಲಿದೆ. ಬಿಹಾರzಲ್ಲಿ ಈವರೆಗೆ ೫೭೪ ಸಾವುಗಳು ಸೇರಿದಂತೆ ೧.೧೫ ಲಕ್ಷ ಕೋವಿಡ್ -೧೯ ಪ್ರಕರಣಗಳು ದಾಖಲಾಗಿವೆ.
ನಾಮನಿರ್ದೇಶನ ಸಮಯದಲ್ಲಿ ಅಭ್ಯರ್ಥಿಯ ಜೊತೆಯಲ್ಲಿರುವ ಜನರ ಸಂಖ್ಯೆ ಮತ್ತು ವಾಹನಗಳ ಸಂಖ್ಯೆಯ ಮಾನದಂಡಗಳನ್ನು ಚುನಾವಣಾ ಆಯೋಗ ಪರಿಷ್ಕರಿಸಿದೆ. ನಾಮನಿರ್ದೇಶನ ನಮೂನೆ ಮತ್ತು ಪ್ರಮಾಣಪತ್ರವನ್ನು (ಅಫಿಡವಿಟ್) ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ವ್ಯವಸ್ಥೆ ಮಾಡಿರುವ ಆಯೋಗವು, ಭರ್ತಿ ಮಾಡಿದ ಬಳಿಕ ಅದರ ಮುದ್ರಣವನ್ನು ತೆಗೆದುಕೊಂಡು ಚುನಾವಣಾ ಅಧಿಕಾರಿಗೆ ಸಲ್ಲಿಸಲು ಸಾಧ್ಯವಾಗುವಂತಹ ಐಚ್ಛಿಕ ಸೌಲಭ್ಯವನ್ನು ಸೃಷ್ಟಿಸಿದೆ.
ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಭದ್ರತಾ ಠೇವಣಿಯನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕೊರೋನಾವೈರಸ್ ಧಾರಕ (ಕಂಟೈನ್‌ಮೆಂಟ್) ವಲಯಗಳಲ್ಲಿ ಕಂಟೈನ್‌ಮೆಂಟ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ಮನೆ ಮನೆಗೆ ತೆರಳಿ ಅಭಿಯಾನಕ್ಕೆ ಅಭ್ಯರ್ಥಿ ಸೇರಿದಂತೆ ವ್ಯಕ್ತಿಗಳ ಸಂಖ್ಯೆಯನ್ನು ಚುನಾವಣಾ ಆಯೋಗವು ಸೀಮಿತಗೊಳಿಸಿದೆ. ಕೇಂದ್ರ ಅಥವಾ ರಾಜ್ಯ ಹೊರಡಿಸಿದ ಧಾರಕ ಮಾರ್ಗಸೂಚಿಗಳಿಗೆ ಒಳಪಟ್ಟು ಸೂಕ್ತ ಸೂಚನೆಗಳೊಂದಿಗೆ ಸಾರ್ವಜನಿಕ ಸಭೆ ಮತ್ತು ರಸ್ತೆ ಪ್ರಚಾರಗಳಿಗೆ ಅನುಮತಿ ನೀಡಲಾಗುವುದು.
ಮುಖಗವಸು (ಫೇಸ್ ಮಾಸ್), ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ಗಳು, ಕೈಗವಸುಗಳು, ಫೇಸ್ ಶೀಲ್ಡ್ ಮತ್ತು ಪಿಪಿಇ ಕಿಟ್‌ಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಲಾಗುವುದು. ಮತದಾರರ ನೋಂದಣಿಗೆ ಸಹಿ ಮಾಡಲು ಮತ್ತು ಮತದಾನಕ್ಕಾಗಿ ಇವಿಎಂನ ಗುಂಡಿಯನ್ನು ಒತ್ತುವುದಕ್ಕಾಗಿ ಎಲ್ಲಾ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುವುದು.
No comments:
Post a Comment