ಚೀನಾ: ಶೈಥ್ಯೀಕೃತ ಮೀನಿನ ಪೊಟ್ಟಣದಲ್ಲಿ ಸಜೀವ ಕೊರೊನಾವೈರಸ್ ಪತ್ತೆ
ಬೀಜಿಂಗ್: ಆಮದು ಮಾಡಿಕೊಳ್ಳಲಾದ, ಶೈಥ್ಯೀಕೃತ ಮೀನಿನ ಪೊಟ್ಟಣದಲ್ಲಿ ಸಜೀವ ಕೊರೊನಾ ವೈರಸ್ ಪತ್ತೆಯಾಗಿರುವುದನ್ನು ಚೀನಾ ಆರೋಗ್ಯಾಧಿಕಾರಿಗಳು ಖಚಿತಪಡಿಸಿದರು.
ಬಂದರು
ನಗರ ಕಿಂಗ್ಡಾವೋದಲ್ಲಿ ಈ ವೈರಸ್ ಪತ್ತೆಯಾಗಿದೆ. ಶೈಥ್ಯೀಕೃತ ಆಹಾರದ ಪೊಟ್ಟಣದ ಮೇಲ್ಮೈಯಲ್ಲಿ ಜೀವಂತ
ಕೊರೋನಾವೈರಸ್ ಸೋಂಕು ಪತ್ತೆಯಾಗಿರುವುದು ವಿಶ್ವದಲ್ಲೇ ಇದು ಪ್ರಥಮ. ಕೋವಿಡ್-19 ಸೋಂಕು ಕಾಣಿಸಿಕೊಂಡ ನಂತರ ಶೈಥ್ಯೀಕೃತ ಆಹಾರದ ಪೊಟ್ಟಣದ ಮೇಲೆ
ಜೀವಂತ ವೈರಸ್‌ಅನ್ನು ಪತ್ತೆ ಹಚ್ಚಿ, ಪ್ರತ್ಯೇಕಿಸಲಾಯಿತು ಎಂದು ರೋಗಗಳನಿಯಂತ್ರಣ ಮತ್ತು ತಡೆಗಟ್ಟುವಿಕೆ
ಕೇಂದ್ರದ (ಸಿಡಿಸಿ) ಪ್ರಕಟಣೆ ತಿಳಿಸಿದೆ.
ಕಿಂಗ್ಡಾವೋ
ನಗರದಲ್ಲಿ ಇತ್ತೀಚೆಗೆ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದಾದ
ನಂತರ ನಗರದ ೧.೧೦ ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಸೋಂಕಿನ ಮೂಲವನ್ನು ಪತ್ತೆ ಹಚ್ಚಲು
ಅಧಿಕಾರಿಗಳು ಮುಂದಾದರು.
ಆಮದು
ಮಾಡಿಕೊಂಡಿದ್ದ ಮೀನಿನ ಪೊಟ್ಟಣಗಳು ಸೋಂಕಿಗೆ ಒಳಗಾಗಿದ್ದವು ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು ಎಂದು
ಸಿಡಿಸಿ ಪ್ರಕಟಣೆಯನ್ನು ಉಲ್ಲೇಖಿಸಿ ಸರ್ಕಾರೀ ಒಡೆತನದ ಕ್ಷಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿತು.
ಯಾವ
ದೇಶಗಳಿಂದ ಈ ಶೈಥ್ಯೀಕೃತ ಆಹಾರ ಪೊಟ್ಟಣಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂಬ ಬಗ್ಗೆ ಸಿಡಿಸಿ ಮಾಹಿತಿ
ನೀಡಿಲ್ಲ ಎಂದೂ ಸುದ್ದಿಸಂಸ್ಥೆ ಹೇಳಿದೆ.
೬.೭
ಲಕ್ಷ ಶೀತಲೀಕರಿಸಿದ ಆಹಾರ ಪೊಟ್ಟಣಗು ಸೇರಿದಂತೆ ಚೀನಾದ
೨೪ ಪ್ರಾಂತ್ಯಗಳಿಂದ ಒಟ್ಟು ೨೯ ಲಕ್ಷ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಈ
ಪೈಕಿ ಶೀತಲೀಕರಿಸಿದ ಆಹಾರ ಇರುವ ಪೊಟ್ಟಣಗಳಿಂದ ಸಂಗ್ರಹಿಸಿದ್ದ ೨೨ ಮಾದರಿಗಳಲ್ಲಿ ಮಾತ್ರ ಕೊರೊನಾ
ಪಾಸಿಟಿವ್ ದೃಢಪಟ್ಟಿತ್ತು ಎಂದು ಸಿಡಿಸಿ ತಿಳಿಸಿದೆ.
ಜೀವಂತ ಕೊರೋನಾ ವೈರಸ್-ಸೋಂಕಿತ
ವಿಭಾಗಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಸೋಂಕು ಹರಡಬಹುದು ಎಂದು ಈ ಪ್ರಕರಣವು ಸಾಬೀತುಪಡಿಸಿದೆ.
ಆದರೆ, ಈ ಪೊಟ್ಟಣಗಳು ಯಾವ ದೇಶದಿಂದ ಬಂದವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿಲ್ಲ.
No comments:
Post a Comment