Saturday, November 28, 2020

ಅರಬ್ಬಿ ಸಮುದ್ರದಲ್ಲಿ ಮಿಗ್ ಪತನ: ಇನ್ನೂ ಪತ್ತೆಯಾಗದ ಪೈಲಟ್

 ಅರಬ್ಬಿ ಸಮುದ್ರದಲ್ಲಿ ಮಿಗ್ ಪತನ: ಇನ್ನೂ ಪತ್ತೆಯಾಗದ ಪೈಲಟ್

ನವದೆಹಲಿ: ಎರಡು ದಿನಗಳ ಹಿಂದೆ ಮಿಗ್ -೨೯ ಕೆ ತರಬೇತುದಾರ ವಿಮಾನವು ಅರಬ್ಬಿ ಸಮುದ್ರಕ್ಕ್ಕೆ ಅಪ್ಪಳಿಸಿದ ನಂತರ ಕಣ್ಮರೆಯಾಗಿರುವ ಪೈಲಟ್‌ನನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಭಾರತೀಯ ನೌಕಾಪಡೆಯ ಶೋಧ ಮತ್ತು ರಕ್ಷಣಾ ತಂಡಗಳು  2020  ನವೆಂಬರ್ 28ರ ಶನಿವಾರ ಮುಂದುವರೆಸಿದವು. ಆದರೆ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಮೂಲದ ಅವಳಿ ಆಸನಗಳ ತರಬೇತುದಾರ ಜೆಟ್ ಗುರುವಾರ ಭಾರತದ ಪಶ್ಚಿಮ ಕರಾವಳಿಯಿಂದ ಭಾರತದ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ಡೆಕ್‌ನಿಂದ ಹೊರಟ ನಂತರ ಸಮುದ್ರಕ್ಕೆ ಅಪ್ಪಳಿಸಿತ್ತು. ರಕ್ಷಣಾ ತಂಡಗಳು ಗುರುವಾರ ಪೈಲಟ್‌ಗಳಲ್ಲಿ ಒಬ್ಬರನ್ನು ರಕ್ಷಿಸಲು ಯಶಸ್ವಿಯಾದವು. ಆದರೆ ನೌಕಾಪಡೆಯು ಕಮಾಂಡರ್ ನಿಶಾಂತ್ ಸಿಂಗ್ ಎಂಬುದಾಗಿ ಗುರುತಿಸಿರುವ ಎರಡನೇ ಪೈಲಟ್ ಇನ್ನೂ ಪತ್ತೆಯಾಗಿಲ್ಲ.

ಶೋಧವನ್ನು ತೀವ್ರಗೊಳಿಸಲು ಹೆಚ್ಚುವರಿ ಯುದ್ಧನೌಕೆಗಳು, ವಿಮಾನಗಳು ಮತ್ತು ಹೆಲಿಕಾಪ್ಟರುಗಳನ್ನು ಶನಿವಾರ ಬಳಸಲಾಯಿತು, ಆದರೆ ಇನ್ನೂ ಅದೃಷ್ಟವಿಲ್ಲಎಂದು ಅಧಿಕಾರಿಗಳು ಹೇಳಿದರು.

ಗುರುವಾರದ ಅಪಘಾತವು ಮಿಗ್ -೨೯ ಕೆ ಕಡಲ ಯುದ್ಧ ನೌಕೆಗಳನ್ನು ಒಳಗೊಂಡ ನಾಲ್ಕನೇ ಅಪಘಾತವಾಗಿದೆ.

ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಭಾರತದ ಉನ್ನತ ಲೆಕ್ಕಪರಿಶೋಧಕರು ೨೦೧೬ ರಲ್ಲಿ ಡೆಕ್ ಆಧಾರಿತ ಫೈಟರ್‌ನಲ್ಲಿನ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದರು. ಇವುಗಳಲ್ಲಿ ಎಂಜಿನ್ ತೊಂದರೆ, ಏರ್ ಫ್ರೇಮ್ ತೊಂದರೆಗಳು ಮತ್ತು ಅದರ ಫ್ಲೈ-ಬೈ-ವೈರ್ ವ್ಯವಸ್ಥೆಯಲ್ಲಿನ ನ್ಯೂನತೆಗಳು ಸೇರಿವೆ.

ಏತನ್ಮಧ್ಯೆ, ವರ್ಷದ ಆರಂಭದಲ್ಲಿ ವೈರಲ್ ಆಗಿದ್ದ ಮದುವೆಯಾಗುವ ನಿರ್ಧಾರದ ಬಗ್ಗೆ ನಾಪತ್ತೆಯಾದ ಪೈಲಟ್ ತನ್ನ ಕಮಾಂಡಿಂಗ್ ಅಧಿಕಾರಿಗೆ ಬರೆದ ತಮ್ಮ ಮದುವೆಗೆ ಸಂಬಂಧಿಸಿದ ಹಾಸ್ಯಮಯ ಪತ್ರವು ಅಪಘಾತದ ಸುದ್ದಿಯ ಬಳಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಂಗ್ ಅವರು ತಮ್ಮ ಕಮಾಂಡಿಗ್ ಅಧಿಕಾರಿಗೆ ಬರೆದ ಪತ್ರದಲ್ಲಿ ರೀತಿಯ ಒಕ್ಕಣೆ ಇತ್ತು: ’ ಬಾಂಬ್‌ನ್ನು  ನಿಮ್ಮ ಮೇಲೆ ಇಷ್ಟು ಕಡಿಮೆ ಸೂಚನೆ ನೀಡಿ ಹಾಕುತ್ತಿರುವುದಕ್ಕಾಗಿ ವಿಷಾದಿಸುತ್ತೇನೆ, ಆದರೆ ನೀವು ಒಪ್ಪುವ ಹಾಗೆ, ನಾನು ನನ್ನ ಮೇಲೆ ಪರಮಾಣು ಒಂದನ್ನು ಬಿಡಲು ಉದ್ದೇಶಿಸಿದ್ದೇನೆ. ಮತ್ತು ಎಲ್ಲಾ ವಿಭಜಿತ-ಸೆಕೆಂಡ್ ನಿರ್ಧಾರಗಳಂತೆ ನಾವು ಯುದ್ಧದ ಶಾಖದ ಗಾಳಿಯಲ್ಲಿ ತೇಲಬಯಸಿದ್ದೇವೆ. ನನ್ನ ನಿರ್ಧಾರವನ್ನು ಮರು ಮೌಲ್ಯಮಾಪಕ್ಕೆ ನನಗೆ ಸಮಯದ ಐಷಾರಾಮಿ ಇಲ್ಲ.

ಸೇನಾ ಭಾಷೆಯನ್ನು ಮೇಳೈಸಿ ಹಾಸ್ಯಮಯವಾಗಿ ಮೇ ರಂದು ನಿಪುಣ ನೌಕಾ ವಿಮಾನಯಾನಕಾರ  ಬರೆದ ಪತ್ರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ.

No comments:

Advertisement