ಇಂಗಾಲದ ಹೊರಸೂಸುವಿಕೆ ಕಡಿತ ಭಾರತದ ಗುರಿ: ಪ್ರಧಾನಿ
ನವದೆಹಲಿ: ದೇಶವು ತನ್ನ ಇಂಗಾಲದ ಹೊರಸೂಸುವಿಕೆಯನ್ನು (ಇಂಗಾಲದ ಹೆಜ್ಜೆ ಗುರುತು) ಶೇಕಡಾ ೩೦-೩೫ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ನವೆಂಬರ್ 21ರ ಶನಿವಾರ ಹೇಳಿದರು.
ಪ್ರಸ್ತುತ ದಶಕದಲ್ಲಿ ನೈಸರ್ಗಿಕ ಅನಿಲ ಸಾಮರ್ಥ್ಯದ ಬಳಕೆಯನ್ನು ನಾಲ್ಕು ಪಟ್ಟು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಮುಂದಿನ ಐದು ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಕೆಲಸವೂ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
‘ಸಾಂಕ್ರಾಮಿಕ ರೋಗದಿಂದಾಗಿ ಇಡೀ ವಿಶ್ವದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿರುವ ಹೊತ್ತಿನಲ್ಲಿ ನೀವು ಉದ್ಯಮವನ್ನು ಪ್ರವೇಶಿಸುತ್ತಿದ್ದೀರಿ. ಈ ಹೊತ್ತಿನಲ್ಲಿ ಭಾರತದ ಇಂಧನ ಕ್ಷೇತ್ರದಲ್ಲಿ ಮತ್ತು ಉದ್ಯಮಶೀಲತೆಯಲ್ಲೂ ಬೆಳವಣಿಗೆಯಾಗುವ ಸಾಧ್ಯತೆಯಿದೆ’ ಎಂದು ಪಂಡಿತ್ ದೀನದಯಾಳು ಪೆಟ್ರೋಲಿಯಂ ವಿಶ್ವವಿದ್ಯಾಲಯದ (ಪಿಡಿಪಿಯು) ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ನುಡಿದರು.
ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳಿಗೆ ತಮ್ಮ ಉದ್ದೇ, ಗುರಿಯ ಬಗ್ಗೆ ನಂಬಿಕೆ ಇಡುವಂತೆ ಪ್ರೋತ್ಸಾಹಿಸಿದರು ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸುವಂತೆ ಕಿವಿಮಾತು ಹೇಳಿದರು.
‘ಯಶಸ್ವೀ ವ್ಯಕ್ತಿಗಳಿಗೆ ಸಮಸ್ಯೆಗಳಿಲ್ಲ ಎಂದಲ್ಲ. ಆದರೆ ಸವಾಲುಗಳನ್ನು ಸ್ವೀಕರಿಸುವವನು, ಅವುಗಳನ್ನು ಎದುರಿಸುವವನು ಮತ್ತು ಅವುಗಳನ್ನು ಸೋಲಿಸುವವನು, ಸಮಸ್ಯೆಗಳನ್ನು ಪರಿಹರಿಸುತ್ತಾನೆ ಮತ್ತು ಯಶಸ್ವಿಯಾಗುತ್ತಾನೆ’ ಎಂದು ಪ್ರಧಾನಿ ಹೇಳಿದರು.
‘ಜವಾಬ್ದಾರಿಯ ಪ್ರಜ್ಞೆ ಇರುವವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹೊರೆಯ ಭಾವನೆ ಇರುವವರು ಯಾವಾಗಲೂ ವಿಫಲರಾಗುತ್ತಾರೆ’ ಎಂದು ಅವರು ನುಡಿದರು.
ಇಂಧನ ಕ್ಷೇತ್ರದಲ್ಲಿ ನವೋದ್ಯಮಗಳನ್ನು (ಸ್ಟಾರ್ಟ್ ಅಪ್) ಬಲಪಡಿಸುವ ಕೆಲಸ ನಡೆಯುತ್ತಿದೆ, ಮತ್ತು ಈ ಉದ್ದೇಶಕ್ಕಾಗಿ ವಿಶೇಷ ನಿಧಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
"ನೀವು ಕಾವು ಕೊಡಲು ಬಯಸುವ ಯಾವುದೇ ಕಲ್ಪನೆ, ಉತ್ಪನ್ನ ಅಥವಾ ಪರಿಕಲ್ಪನೆಯನ್ನು ಹೊಂದಿದ್ದರೆ, ಈ ನಿಧಿ ನಿಮಗೆ ಉತ್ತಮ ಅವಕಾಶ ಮತ್ತು ಸರ್ಕಾರದಿಂದ ಉಡುಗೊರೆಯಾಗಿರುತ್ತದೆ" ಎಂದು ಅವರು ಹೇಳಿದರು.
‘೨೧ ನೇ ಶತಮಾನದ ಯುವಕರು ’ಸ್ವಚ್ಛ ಬಳಪದೊಂದಿಗೆ’ ಮುಂದುರೆಯಬೇಕಾಗಿದೆ. ಕೆಲವು ಜನರ ಮನಸ್ಥಿತಿಯು ಯಾವುದಕ್ಕೂ ಉತ್ತಮವಾಗಿ ಬದಲಾಗುವುದಿಲ್ಲ, ಸಮಸ್ಯಾತ್ಮಕವಾಗಿರುತ್ತದೆ. ಅದನ್ನು ಬದಲಾಯಿಸಬೇಕಾಗಿದೆ. ಶುದ್ಧ ಹೃದಯ ಎಂದರೆ ಸ್ಪಷ್ಟ ಉದ್ದೇಶಗಳು’ ಎಂದು ಅವರು ವಿವರಿಸಿದರು.
ಈ ದಶಕದಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಲಾಗುವುದು. ಆದ್ದರಿಂದ ಈ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಅವಕಾಶಗಳಿವೆ’ ಎಂದು ಪ್ರಧಾನಿ ಉದ್ದಿಮೆದಾರರಿಗೆ ತಿಳಿಸಿದರು.
No comments:
Post a Comment