Wednesday, November 11, 2020

ದೆಹಲಿಯಲ್ಲಿ ಎನ್‌ಡಿಎ ಸಂಭ್ರಮ, ದೇಶದ ಜನತೆಗೆ ಪ್ರಧಾನಿ ಧನ್ಯವಾದ

 ದೆಹಲಿಯಲ್ಲಿ ಎನ್‌ಡಿಎ ಸಂಭ್ರಮ, ದೇಶದ ಜನತೆಗೆ ಪ್ರಧಾನಿ ಧನ್ಯವಾದ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯವನ್ನು ಕಾರ್ಯಕರ್ತರು ಆಚರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 11ರ ಬುಧವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡದ್ದಕ್ಕಾಗಿ ದೇಶದ ಜನತೆಗೆ ಧನ್ಯವಾದ ಅರ್ಪಿಸಿದರು.

"ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಏಕೆಂದರೆ ಅವರು ರಾಜ್ಯಗಳಾದ್ಯಂತ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲುವಂತೆ ಮಾಡಿದರು ಎಂಬುದಕ್ಕಾಗಿ ಮಾತ್ರವಲ್ಲ, ನಾವೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೇವೆ ಎಂಬುದಕ್ಕಾಗಿಎಂದು ಪ್ರಧಾನಿ ಹೇಳಿದರು.

ಕೆಲವೇ ಸ್ಥಾನಗಳು ಮತ್ತು ರಾಜ್ಯಗಳಲ್ಲಿ ಚುನಾವಣೆಗಳು ನಡೆದಿದ್ದರೂ, ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೆ, ಎಲ್ಲರ ಕಣ್ಣುಗಳು ಟಿವಿಗಳು, ಟ್ವಿಟರ್ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಮೇಲೆ ಕೇಂದ್ರೀಕೃತವಾಗಿತ್ತು. ಮೌನಿ ಮತದಾರರು ಬಿಜೆಪಿ ಕೈ ಹಿಡಿದರು ಎಂದು ಮೋದಿ ಹೇಳಿದರು. 

ಚುನಾವಣೆಗಳಿಗೆ ದೊಡ್ಡ ಯಶಸ್ಸು ತಂದುಕೊಟ್ಟದ್ದಕ್ಕಾಗಿ ಇಡೀ ದೇಶವನ್ನು ನಾನು ಅಭಿನಂದಿಸುತ್ತೇನೆ, ಆದರೆ ಪ್ರಜಾಪ್ರಭುತ್ವವನ್ನು ಆಚರಿಸಿದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆಎಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.

ಎನ್‌ಡಿಎಗೆ ನೀಡಿದ ಬಹುಮತಕ್ಕಾಗಿ ಸಾರ್ವಜನಿಕರಿಗೆ ನಮಸ್ಕರಿಸುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆಎಂದು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ ಕುಮಾರ್ ಹೇಳಿದರು.

ಬಿಹಾರದ ಜನರುವಿಕಾಸ್ ರಾಜ್ಗೆ ಮತ ಚಲಾಯಿಸಿದರು ಮತ್ತುಗುಂಡಾ ರಾಜ್ಅನ್ನು ತಿರಸ್ಕರಿಸಿದರುಎಂದು ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಆತ್ಮನಿರ್ಭರ ಭಾರತದಲ್ಲಿ ಬಿಹಾರದ ಜನರು ಆತ್ಮನಿರ್ಭರ ಬಿಹಾರವನ್ನು ನೋಡಿದರು. ಇದಕ್ಕಾಗಿ ಬಿಹಾರದ ಜನರು ಮತ ಚಲಾಯಿಸಿದ್ದಾರೆಎಂದು ನಡ್ಡಾ ಹೇಳಿದರು.

ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಇದು ದೊಡ್ಡ ಚುನಾವಣೆಯಾಗಿದೆ. ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬ ಬಗ್ಗೆ ನಾವೇ ಕಳವಳದಲ್ಲಿ ಇದ್ದೆವು. ಜನರು ನಮ್ಮೊಂದಿಗೆ ಬರುತ್ತಾರೆಯೇ ಎಂಬುದು ನಮಗೆ ಖಚಿತವಾಗಿರಲಿಲ್ಲ. ಆದರೆ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಣಿಪುರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲರೂ ಹೊರಬಂದು ನಮಗೆ ಮತ ಹಾಕಿದರು ಎಂದು ಬಿಜೆಪಿ ಅಧ್ಯಕ್ಷರು ನುಡಿದರು.

೨೦೧೯ ಲೋಕಸಭಾ ಚುನಾವಣಾ ಪರಾಭವದ ನಂತರ ೧೫ ವರ್ಷಗಳ ನಿತೀಶ ಕುಮಾರ್ ಅಧಿಕಾರವನ್ನು ವಿರೋಧಿಸಿದ ಆರ್‌ಜೆಡಿ ಉತ್ಸಾಹದೊಂದಿಗೆ ಫೀನಿಕ್ಸ್‌ನಂತೆ ಮೇಲೆದ್ದು ನೀಡಿದ ಹೋರಾಟದ ನಡುವೆಯೂ, ನಿತೀಶ ಕುಮಾರ್ ನೇತೃತ್ವದ ಎನ್‌ಡಿಎ ಅತ್ಯಲ್ಪ ಅಂತರದ ಬಹುಮತದೊಂದಿಗೆ ಮತ್ತೆ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ.

ಆಡಳಿತಾರೂಢ ಪ್ರಜಾತಾಂತ್ರಿಕ ಮೈತ್ರಿಕೂಟವು ೨೪೩ ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ೧೨೬ ಸ್ಥಾನಗಳನ್ನು ಗೆದ್ದುಕೊಂಡಿತು, ಪ್ರತಿಪಕ್ಷ ಮಹಾ ಘಟಬಂಧನ್ ೧೧೦ ಸ್ಥಾನಗಳನ್ನು ಗಳಿಸಿತು. ಇದರೋಂದಿಗೆ ನಿತೀಶ ಕುಮಾರ್ ಅವರಿಗೆ ಸತತ ನಾಲ್ಕನೇ ಅವಧಿಗೆ ಅಧಿಕಾರದಲ್ಲಿ ಮುಂದುವರೆಯಲು ದಾರಿ ಸುಗಮಗೊಂಡಿತು.

ಆದರೆ ಜೆಡಿಯು ಸಂಖ್ಯಾ ಬಲದಲ್ಲಿ ದುರ್ಬಲಗೊಂಡಿತು. ಜೆಡಿಯು ಸ್ಥಾನಗಳು ೨೦೧೫ ರಲ್ಲಿ ಇದ್ದು ೭೧ ರಿಂದ ೪೩ ಕ್ಕೆ ಇಳಿಯಿತು.

೨೦೧೫ರಲ್ಲಿ ನಿತೀಶ ಕುಮಾರ್ ಆಗ ಮಹಾ ಘಟಬಂಧನ್‌ನ ಪಾಲುದಾರರಾಗಿದ್ದರು, ಇದರಲ್ಲಿ ಲಾಲು ಪ್ರಸಾದ್ ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿದ್ದವು.

ಬಾರಿ ಸೋಲಿನ ಹೊರತಾಗಿಯೂ, ಆರ್‌ಜೆಡಿ ಲಾಲು ಪ್ರಸಾದ್ ಯಾದವ್ ಉತ್ತರಾಧಿಕಾರಿ, ಕಿರಿಯ ಪುತ್ರ  ತೇಜಸ್ವಿ ಯಾದವ್ ನೇತೃತ್ವದಲ್ಲಿ ೭೫ ಸ್ಥಾನಗಳನ್ನು ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಬಿಜೆಪಿ, ೭೪ ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಂಖ್ಯೆಯಲ್ಲಿ ಕುಸಿತದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಜೆ ಪಿ ನಡ್ಡಾ ಸೇರಿದಂತೆ ಬಿಜೆಪಿ ಮುಖ್ಯಸ್ಥರು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಕುಮಾರ್ ಅವರೇ ಸರ್ಕಾರದ ನೇತೃತ್ವ ವಹಿಸುವರು ಎಂದು ಘೋಷಿಸಿದ್ದಾರೆ.

No comments:

Advertisement