ವಿಜಯ ನಮ್ಮದು, ಜನ ನಮ್ಮ ಜೊತೆಗಿದ್ದಾರೆ: ತೇಜಸ್ವೀ ಯಾದವ್
ಪಾಟ್ನಾ: ಸಾರ್ವಜನಿಕರು ನಮ್ಮೊಂದಿಗಿದ್ದಾರೆ. ಮಹಾ ಮೈತ್ರಿಗೆ (ಮಹಾ ಘಟಬಂಧನ್) ಜಯವಾಗಿದೆ’ ಎಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಬಳಿಕ 2020 ನವೆಂಬರ್ 12ರ ಗುರುವಾರ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ತೇಜಸ್ವೀ ಯಾದವ್ ಹೇಳಿದರು.
ತಮ್ಮ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಗುರುವಾರ ತೇಜಸ್ವೀ ಯಾದವ್ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ ನುಡಿದರು.
’ಬೇರೊಬ್ಬರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದರೂ ಸಹ,
ಜನರ ಆದೇಶವು ನಮ್ಮ ಪರವಾಗಿದೆ ಎಂದು ನುಡಿದ ಯಾದವ್,
ಮಹಾ ಘಟಬಂಧನ್
(ಮಹಾ ಮೈತ್ರಿ)
ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಬಿಹಾರದ ಜನರಿಗೆ ಧನ್ಯವಾದ ಅರ್ಪಿಸಿದರು.
‘ಜನಾದೇಶವು ಮಹಾ ಘಟಬಂಧನ್ ಪರವಾಗಿದೆ,
ಆದರೆ ಚುನಾವಣಾ ಆಯೋಗದ ಫಲಿತಾಂಶವು ಎನ್ಡಿಎ ಪರವಾಗಿದೆ.
ಇದು ಮೊದಲ ಬಾರಿಗೆ ಸಂಭವಿಸಿಲ್ಲ.
೨೦೧೫ ರಲ್ಲಿ,
ಮಹಾ ಘಟಬಂಧನ್ ರಚನೆಯಾದಾಗ,
ಮತಗಳು ನಮ್ಮ ಪರವಾಗಿದ್ದವು ಆದರೆ ಅಧಿಕಾರ ಪಡೆಯಲು ಬಿಜೆಪಿ ಹಿಂಬಾಗಿಲಿನ ಪ್ರವೇಶವನ್ನು ಮಾಡಿತು’ ಎಂದು ತೇಜಸ್ವೀ ನುಡಿದರು.
ಚುನಾವಣೆಯನ್ನು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಎಂದು ಕರೆದ ಯಾದವ್,
ವಿದ್ಯುನ್ಮಾನ ಮತಯಂತ್ರಗಳನ್ನು
(ಇವಿಎಂ)
ಮೊದಲು ಅಂಚೆ ಮತಪತ್ರಗಳನ್ನು ಎಣಿಸುವ ಸ್ಥಾಪಿತ ನಿಯಮಗಳ ಬಗ್ಗೆ ಗಮನ ಸೆಳೆದರು.
ಎಲ್ಲ ಅಂಚೆ ಮತಪತ್ರಗಳನ್ನು ಎಣಿಸಲಾಗಿಲ್ಲ ಎಂದು ಅವರು ಆರೋಪಿಸಿದರು.
ಚುನಾವಣಾ ಆಯೋಗದ ನಿಯಮಾವಳಿ ಪುಸ್ತಕದಲ್ಲಿನ ಎಣಿಕೆಯ ನಿಯಮಗಳನ್ನು ಓದಿದ ತೇಜಸ್ವೀ ಯಾದವ್,
ಈ ನಿಯಮಗಳಿಗೆ ಅನುಗುಣವಾಗಿ ಮತಗಳ ಎಣಿಕೆಯಾಗಿಲ್ಲ ಎಂದು ಹೇಳಿದರು.
’ನಿತೀಶ ಕುಮಾರ್ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕುಳಿತಿರಬಹುದು ಆದರೆ ನಮ್ಮ ಪಕ್ಷಕ್ಕೆ ಜನರ ಹೃದಯದಲ್ಲಿ ಸ್ಥಾನವಿದೆ’ ಎಂದು ಆರ್ಜೆಡಿ ನಾಯಕ ಹೇಳಿದರು.
ನಿತೀಶ ಕುಮಾರ್ ಅವರು ಕಳೆದ ಅಧಿಕಾರಾವಧಿಯ ನಂತರ ಸಂತತ್ವ ಸ್ವೀಕರಿಸುವ ಪ್ರತಿಜ್ಞೆ ಮಾಡಿದ್ದನ್ನು ನೆನಪಿಸಿದ ತೇಜಸ್ವೀ ಯಾದವ್ ’ನಿಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.
‘ನಿತೀಶ ಕುಮಾರ್ ಅವರ ಹೊಳಪು ಎಲ್ಲಿಗೆ ಹೋಗಿದೆ ಎಂದು ನೋಡಿ.
ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿದೆ.
ಇದು ಬದಲಾವಣೆಯ ಆದೇಶ.
ನಿತೀಶ ಕುಮಾರ್ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕುಳಿತಿದ್ದಾರೆ ಆದರೆ ನಾವು ಜನರ ಹೃದಯದಲ್ಲಿದ್ದೇವೆ’ ಎಂದು ತೇಜಸ್ವೀ ಯಾದವ್ ನುಡಿದರು.
No comments:
Post a Comment