ಉತ್ತರಾಖಂಡ: ಭಾರತ-ಚೀನಾ ಗಡಿಯಲ್ಲಿ ೧೦೦ ಮಾದರಿ ಗ್ರಾಮ
ಡೆಹ್ರಾಡೂನ್: ಭಾರತ-ಚೀನಾ ಗಡಿಯ ಸಮೀಪವಿರುವ ಸುಮಾರು ೧೦೦ ಹಳ್ಳಿಗಳಿಂದ ವಲಸೆಯನ್ನು ನಿವಾರಿಸುವ ಮತ್ತು ಅಲ್ಲಿ ಉದ್ಯೋಗ ಸೃಷ್ಟಿಗಾಗಿ ಅವುಗಳನ್ನು ಮಾದರಿ ಗ್ರಾಮಗಳಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾಪವನ್ನು ಉತ್ತರಾಖಂಡ ಸರ್ಕಾರವು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿದೆ.
ಅಂತಾರಾಷ್ಟ್ರೀಯ ಗಡಿ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಈ ಹಳ್ಳಿಗಳನ್ನು ಮಾದರಿ ಗ್ರಾಮಗಳಾಗಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ರಾಜ್ಯ ಕೃಷಿ ಸಚಿವ ಸುಬೋಧ್ ಯುನಿಯಾಲ್ 2020 ಡಿಸೆಂಬರ್ 31ರ ಗುರುವಾರ ಇಲ್ಲಿ ಹೇಳಿದರು.
ಮಾದರಿ ಗ್ರಾಮಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಗಡಿ ಜಿಲ್ಲೆಗಳ ೧೧ ಬ್ಲಾಕುಗಳಿಂದ ಗ ಗ್ರಾಮಗಳನ್ನು ಆಯ್ಕೆ ಮಾಡಿದೆ. ೧೧
ಬ್ಲಾಕ್ಗಳಲ್ಲಿ ನಾಲ್ಕು ಪಿಥೋರಗಢ ಜಿಲ್ಲೆ, ಒಂದು
ಚಮೋಲಿ ಜಿಲ್ಲೆ, ಮೂರು
ಉತ್ತರಕಾಶಿ, ಉದಮ್
ಸಿಂಗ್ ನಗರದಲ್ಲಿ ಒಂದು ಮತ್ತು ಚಂಪಾವತ್ ಜಿಲ್ಲೆಯ ಎರಡು ಬ್ಲಾಕ್ಗಳಿವೆ.
"ನಾವು ಭಾರತ-ಚೀನಾ ಗಡಿಯ ಸಮೀಪ ಸುಮಾರು ೧೦೦ ಹಳ್ಳಿಗಳನ್ನು ಹೊಂದಿದ್ದೇವೆ, ಅವುಗಳನ್ನು
ನಾವು ಮಾದರಿ ಗ್ರಾಮಗಳಾಗಿ ಅಭಿವೃದ್ಧಿಪಡಿಸುತ್ತೇವೆ. ಅಂತಾರಾಷ್ಟ್ರೀಯ
ಗಡಿ ಅಭಿವೃದ್ಧಿ ಕಾರ್ಯಕ್ರಮದಡಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ಗ್ರಾಮಗಳನ್ನು ಇಂಟಿಗ್ರೇಟೆಡ್ ಮಾಡೆಲ್ ಅಗ್ರಿಕಲ್ಚರ್ (ಐಎಂಎ)
ಗ್ರಾಮಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದೇವೆ’
ಎಂದು ಯುನಿಯಾಲ್ ಹೇಳಿದರು.
ಈ ಕಾರ್ಯ ಯೋಜನೆಯಲ್ಲಿ ಗಡಿ ಪ್ರದೇಶಗಳಲ್ಲಿ ಕೃಷಿ, ತೋಟಗಾರಿಕೆಯನ್ನು
ಉತ್ತೇಜಿಸುವ ಮಾರ್ಗಗಳನ್ನು ಅನ್ವೇಷಿಸಲಾಗುವುದು ಎಂದು ಅವರು ಹೇಳಿದರು.
ರೈತರ ಆದಾಯವನ್ನು ಹೆಚ್ಚಿಸಲು ಮೀನುಗಾರಿಕೆ, ಪಶುಸಂಗೋಪನೆ,
ಹೈನುಗಾರಿಕೆ, ಜೇನುಹುಳು
ಕೃಷಿ ಯೋಜನೆ ಮುಂತಾದ ಇತರ ಆಯ್ಕೆಗಳ ಬಗ್ಗೆಯೂ ಈ ಕಾರ್ಯಯೋಜನೆಯು ಗಮನ ಹರಿಸಲಿದೆ.
"ಈ ಪ್ರದೇಶಗಳಲ್ಲಿ ಕೃಷಿ ಅಭಿವೃದ್ಧಿಯ ಉದ್ದೇಶವು ಅಂತರರಾಷ್ಟ್ರೀಯ ಗಡಿ ಪ್ರದೇಶಕ್ಕೆ ಸಮೃದ್ಧಿಯನ್ನು ತರುವ ಮೂಲಕ ವಲಸೆಯನ್ನು ತಡೆಯುವುದು. ಕಾರ್ಯತಂತ್ರದ
ದೃಷ್ಟಿಕೋನದಿಂದ ವಲಸೆಯನ್ನು ತಡೆಗಟ್ಟುವುದು ಸಹ ಮುಖ್ಯವಾಗಿದೆ’
ಎಂದು ಸಚಿವರು ಹೇಳಿದರು.
ಹಳ್ಳಿಗಳ ಒಂದರಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಪ್ರದೇಶUಳಲ್ಲಿ ಪ್ರಸ್ತಾವನೆಯಂತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಮತ್ತು ಗಡಿರೇಖೆಯ ಹಳ್ಳಿಗಳಿಂದ ಸ್ಥಳೀಯರ ವಲಸೆಯನ್ನು ತಡಯುವ ಉದ್ದೇಶವನ್ನು ಒಳಗೊಂಡಿರುವ ಒಂದು ಕ್ರಮವಾಗಿ, ರಾಜ್ಯ
ಸರ್ಕಾರವು ಈ ತಿಂಗಳು ಚಮೋಲಿ ಜಿಲ್ಲೆಯ ನಿಟಿ ವ್ಯಾಲಿ ಪ್ರದೇಶದಿಂದ ಇನ್ನರ್-ಲೈನ್ ಪರವಾನಗಿ ವ್ಯವಸ್ಥೆಯನ್ನು ಕೊನೆಗೊಳಿಸಿತು.
ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ರಾಜ್ಯ
ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರು ಉತ್ತರಕಾಶಿ ಜಿಲ್ಲೆಯ ಗಾರ್ತಂಗ್ ಗಾಲಿ, ಚಮೋಲಿ
ಜಿಲ್ಲೆಯ ಟಿಮ್ಮರ್ಸೇನ್ ಮಹಾದೇವ್ ಮತ್ತು ನಿಟಿ ಕಣಿವೆ ಮತ್ತು ಪಿಥೋರಗಢ ಜಿಲ್ಲೆಯ ಓಂ ಪರ್ವತ್ ಸೇರಿದಂತೆ ಇನ್ನರ್ ಲೈನ್ ಪರವಾನಗಿ ಆಡಳಿತದ ಅಡಿಯಲ್ಲಿ ಕೆಲವು ಪ್ರದೇಶಗಳನ್ನು ಉಲ್ಲೇಖಿಸಿದ್ದಾರೆ. ಇನ್ನರ್-ಲೈನ್ ಪರವಾನಗಿಯ ಅವಶ್ಯಕತೆಯಿಂದಾಗಿ, ಪ್ರವಾಸಿಗರು
ಮತ್ತು ನಾಗರಿಕರು ಆ ಪ್ರದೇಶಗಳಿಗೆ ಪ್ರವೇಶಿಸಲು ಕೆಲವು ನಿರ್ಬಂಧಗಳನ್ನು ವಿಧಿಸಲಾಯಿತು.
"ನಿತಿ ಗ್ರಾಮ ಸೇರಿದಂತೆ ನಿಟಿ ಕಣಿವೆಯ ಪ್ರದೇಶವನ್ನು ಕೇಂದ್ರವು ಇನ್ನರ್ ಲೈನ್ (ಪರ್ಮಿಟ್ ಪ್ರಭುತ್ವ) ದಿಂದ ತೆಗೆದುಹಾಕಿದೆ, ಅಲ್ಲಿ ಪ್ರವಾಸೋದ್ಯಮ ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ " ಎಂದು ಮಹಾರಾಜ್ ಹೇಳಿದರು.
No comments:
Post a Comment