ರೈತ ಚಳವಳಿ: ಸ್ವತಂತ್ರ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಒಲವು
ನವದೆಹಲಿ: ಪ್ರತಿಭಟನೆ ಸಾಂವಿಧಾನಿಕ ಹಕ್ಕು, ಆದರೆ ದೆಹಲಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ನಗರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು 2020 ಡಿಸೆಂಬರ್ 17ರ ಗುರುವಾರ ಹೇಳಿದ ಸುಪ್ರೀಂಕೋರ್ಟ್ ರೈತ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಅಡಿ ಇಡಲು ಸಮಿತಿ ರಚನೆಯ ಚಿಂತನೆ ನಡೆಸಿತು.
ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರತ್ ಎ ಬೋಬ್ಡೆ ಅವರು ಈ ಮಾತು ಹೇಳಿದ್ದಾರೆ.
ಅರ್ಜಿದಾರ ಕಾನೂನು ವಿದ್ಯಾರ್ಥಿಯು ಹೆದ್ದಾರಿ ದರಣಿಯಿಂದ ರಾಷ್ಟ್ರ ರಾಜಧಾನಿಯ ಗಡಿ ಪ್ರದೇಶಗಳಲ್ಲಿನ ಅನಾನುಕೂಲತೆ ಮತ್ತು ಕೋವಿಡ್ -೧೯ರ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರ ರೈತರನ್ನು ತೆರವುಗೊಳಿಸುವಂತೆ ಕೋರಿದ್ದಾರೆ.
"ಆಸ್ತಿಪಾಸ್ತಿಗೆ ಹಾನಿ ಅಥವಾ ಜೀವಕ್ಕೆ ಅಪಾಯವನ್ನುಂಟು ಮಾಡದೇ ಇರುವವರೆಗೆ ಪ್ರತಿಭಟನೆಯು ಸಾಂವಿಧಾನಿಕವಾಗಿರುತ್ತದೆ’ ಎಂದು ಹೇಳಿದ ಪೀಠವು, ’ಸರ್ಕಾರ ಮತ್ತು ರೈತರು ಮಾತನಾಡಬೇಕು. ನಾವು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯ ಬಗ್ಗೆ ಯೋಚಿಸುತ್ತಿದ್ದೇವೆ, ಅವರ ಮುಂದೆ ಉಭಯ ಪಕ್ಷಗಳು ಕೃಷಿ ಕಾನೂನುಗಳ ಮೇಲಿನ ಬಿಕ್ಕಟ್ಟು ಪರಿಹಾರಕ್ಕೆ ಸಲಹೆ ನೀಡಬಹುದು’ ಸಿಜೆಐ ಹೇಳಿದರು.
‘ಸ್ವತಂತ್ರ ಸಮಿತಿಯಲ್ಲಿ ಪಿ ನಾಯಿನಾಥ್, ಭಾರತೀಯ ಕಿಸಾನ್ ಯೂನಿಯನ್ ಮತ್ತು ಇತರರನ್ನು ಸದಸ್ಯರನ್ನಾಗಿ ಮಾಡಬಹುದು. ನೀವು (ರೈತರು) ಹಿಂಸಾಚಾರವನ್ನು ಪ್ರಚೋದಿಸಲು ಸಾಧ್ಯವಿಲ್ಲ ಮತ್ತು ಈ ರೀತಿಯಾಗಿ
ನಗರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ’ ಎಂದು ಸಿಜೆಐ ಬೊಬ್ಡೆ ನುಡಿದರು.
ಸಮಿತಿಯು ತನ್ನ ವರದಿಯನ್ನು ನೀಡಲಿದೆ ಮತ್ತು ಅದನ್ನು ಅನುಸರಿಸಬೇಕು. ಈ ಮಧ್ಯೆ ಪ್ರತಿಭಟನೆ ಮುಂದುವರೆಯಬಹುದು ಎಂದು ಅವರು ಹೇಳಿದರು.
ರೈತರು ತಮ್ಮ ಗ್ರಾಮಗಳಲ್ಲಿ ಸೋಂಕು ಹರಡಲು ಕಾರಣವಾಗುವ ಕೋವಿಡ್ -೧೯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದರು.
‘ಅವರಲ್ಲಿ ಯಾರೂ ಮುಖಗವಸು (ಫೇಸ್ ಮಾಸ್ಕ್) ಧರಿಸುವುದಿಲ್ಲ, ಅವರು ಭಾರೀ ಸಂಖ್ಯೆಯಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಕೋವಿಡ್ -೧೯ ಒಂದು ಆತಂಕಕಾರಿ ವಿಷಯವಾಗಿದೆ. ಅವರು ಹಳ್ಳಿಗಳಿಗೆ ಹಿಂದಿರುಗಿ ಅದನ್ನು ಅಲ್ಲಿ ಹರಡುತ್ತಾರೆ. ರೈತರು ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ’ ಎಂದು ವೇಣುಗೋಪಾಲ್ ಪ್ರತಿಪಾದಿಸಿದರು.
ಬುಧವಾರ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡಿತ್ತು. ಸಿಜೆಐ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ಸರ್ಕಾರ ಮತ್ತು ದೇಶಾದ್ಯಂತದ ರೈತ ಸಂಘಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿಯನ್ನು ನ್ಯಾಯಾಲಯವು ರಚಿಸಬಹುದು ಎಂದು ಸೂಚಿಸಿತು.
ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ ಎಂದು ಕೇಂದ್ರ ಸುಪ್ರೀಂ ಕೋರ್ಟ್ಗೆ ತಿಳಿಸಿತು.
ಕೃಷಿ ಕಾನೂನುಗಳನ್ನು ಸದ್ಯಕ್ಕೆ ತಡೆಹಿಡಿಯಬಹುದೇ ಎಂದು ಸಿಜೆಐ ಇದಕ್ಕೆ ಮುನ್ನ ಭಾರತದ ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿದ್ದರು.
ಮಾತುಕತೆಗಳು ಯಾವುದೇ ಫಲಿತಾಂಶವನ್ನು ನೀಡದ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಈ ಪ್ರಶ್ನೆಯನ್ನು ಕೇಳಿತ್ತು. ನ್ಯಾಯಾಲಯವು ಪ್ರಕರಣವನ್ನು ಆಲಿಸುತ್ತಿರುವಾಗಿ ಕಾನೂನುಗಳನ್ನು ಜಾರಿಗೊಳಿಸಲಾಗುವುದಿಲ್ಲ ಎಂಬ ಬದ್ಧತೆಯನ್ನು ಸರ್ಕಾರವು ನೀಡಬಲ್ಲುದೇ ಎಂದು ಸಿಜೆಐ ಬೋಬ್ಡೆ ನೇತೃತ್ವದ ಪೀಠ ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿತ್ತು.
ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಹಿಡಿದರೆ, ರೈತರು ಮಾತುಕತೆಗೆ ಮುಂದೆ ಬರುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿತು. ’ಇದು ಮಾತುಕತೆಗಳನ್ನು ಸಕ್ರಿಯಗೊಳಿಸುವ ಸಲುವಾಗಿ’ ಎಂದು ನ್ಯಾಯಪೀಠ ಹೇಳಿದಾಗ, ಅಟಾರ್ನಿ ಜನರಲ್ ಅವರು ಸ್ವಲ್ಪ ಕಾಲಾವಕಾಶ ಕೋರಿದ್ದರು.
ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಪೀಠವು ನಡೆಯುತ್ತಿರುವ ಪ್ರತಿಭಟನೆಗಳು, ಭಾರತೀಯ ರೈತರ ಅವಸ್ಥೆ ಇತ್ಯಾದಿಗಳ ಬಗ್ಗೆ ಕೆಲವು ಮಹತ್ವದ ಅವಲೋಕನಗಳನ್ನು ಮಾಡಿತು. ಮತ್ತೊಂದೆಡೆ, ಮೂರು ಕೃಷಿ ಕಾನೂನುಗಳ ವಿರುದ್ಧದ ಆಂದೋಲವನ್ನು ಪ್ರತಿಭಟನಾಕಾರರು ಅಚಲವಾಗಿ ಮುಂದುವರೆಸಿದ್ದರು.
ಗುರುವಾರದ ವಿಚಾರಣೆಯ ಮುಖ್ಯಾಂಶಗಳೂ:
* ಪ್ರತಿಭಟಿಸಲು ರೈತರಿಗೆ ಹಕ್ಕುಗಳಿವೆ, ಆದರೆ ಪ್ರತಿಭಟನೆಯು ಅಹಿಂಸಾತ್ಮಕವಾಗಿರಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
* ರೈತರು ಮತ್ತು ಕೇಂದ್ರದ ನಡುವೆ ಹೆಚ್ಚಿನ ಮಾತುಕತೆಗೆ ಅನುಕೂಲತೆ ಕಲ್ಪಿಸಲು ಸುಪ್ರೀಂ ಕೋರ್ಟ್ ಬಯಸಿದೆ ಎಂದು ಅದು ಹೇಳಿತು.
* ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯನ್ನು ನ್ಯಾಯಾಲಯ ರಚಿಸುವ ಸಾಧ್ಯತೆಯಿದೆ. ರೈತರು ಮತ್ತು ಸರ್ಕಾರದ ಪ್ರಾತಿನಿಧ್ಯಗಳ ಹೊರತಾಗಿ, ಪಿ ಸಾಯಿನಾಥರಂತಹ ತಜ್ಞರು ಸಮಿತಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
* ಏತನ್ಮಧ್ಯೆ,
ಪ್ರತಿಭಟನೆ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿತು.
* ಅಟಾರ್ನಿ
ಜನರಲ್ ಕೆ.ಕೆ.ವೇಣುಗೋಪಾಲ್ ಅವರು ದೆಹಲಿಯ ವಿವಿಧ ಗಡಿಭಾಗಗಳಲ್ಲಿ ದೊಡ್ಡ ಸಭೆ ನಡೆಸುವುದು ಕೋವಿಡ್ -೧೯ ಅಪಾಯಗಳನ್ನು ಹೆಚ್ಚಿಸುತ್ತದೆ. ಅವರಲ್ಲಿ ಯಾರೂ (ಪ್ರತಿಭಟನಾಕಾರರು) ಮುಖಗವಸು ಧರಿಸುವುದಿಲ್ಲ. ಅವರು ಭಾರೀ ಸಂಖ್ಯೆಯಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಕೋವಿಡ್ -೧೯ ಒಂದು ಅಪಾಯ. ಅವರು ಗ್ರಾಮಗಳಿಗೆ ತೆರಳಿ ಅದನ್ನು ಅಲ್ಲಿ ಹರಡುತ್ತಾರೆ. ರೈತರು ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದರು.
* ಕೇಂದ್ರ ಮತ್ತು ರೈತರ ನಡುವೆ ಜನರ ಸಮಿತಿಯೊಂದು ಮಾತುಕತೆಗೆ ಅವಕಾಶವನ್ನು ಕಲ್ಪಿಸುವಂತೆ ಕಾರ್ಯನಿರ್ವಹಿಸಬೇಕು ಎಂಬ ಎಂಬ ಸುಪ್ರೀಂ ಕೋರ್ಟ್ ಸಲಹೆಗೆ ಪಂಜಾಬ್ ಸರ್ಕಾರ ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ ಪಿ ಚಿದಂಬರಂ
ಹೇಳಿದರು. ಸಮಿತಿಯ ಸದಸ್ಯರು ಯಾರು ಎಂದು ರೈತರು ಮತ್ತು ಕೇಂದ್ರ ನಿರ್ಧರಿಸಬೇಕು ಎಂದು ಅವರು ಹೇಳಿದರು.
* ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವುದರಿಂದ ಉಪಯೋಗವಿಲ್ಲ ಎಂದು ಸಿಜೆಐ ಹೇಳಿದರು. ದೆಹಲಿಯನ್ನು ನಿರ್ಬಂಧಿಸಿದ್ದರಿಂದ ನಗರದ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ನಿಮ್ಮ (ರೈತರ) ಉದ್ದೇಶವನ್ನು ಮಾತುಕತೆಯ ಮೂಲಕ ಪೂರೈಸಬಹುದು’ ಎಂದು ಸಿಜೆಐ ಹೇಳಿದರು.
* ರೈತರಿಗೆ
ಸಹಾನುಭೂತಿ: ಸಿಜೆಐ
“ನಾವೂ ಭಾರತೀಯರು, ರೈತರ ದುಃಸ್ಥಿತಿಯ ಬಗ್ಗೆ ನಮಗೆ ಅರಿವು ಇದೆ ಮತ್ತು ಅವರ ಉದ್ದೇಶದ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ. ನೀವು (ರೈತರು) ಪ್ರತಿಭಟನೆ ನಡೆಯುವ ಮಾರ್ಗವನ್ನು ಮಾತ್ರ ಬದಲಾಯಿಸಬೇಕಾಗಿದೆ. ನಿಮ್ಮ ಪ್ರಕರಣವನ್ನು ನೀವು ಸಮರ್ಥಿಸಬಹುದೆಂದು ನಾವು ಖಚಿತಪಡಿಸುತ್ತೇವೆ. ಆದ್ದರಿಂದ ಸಮಿತಿಯನ್ನು ರಚಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ ” ಎಂದು ಸಿಜೆಐ ಹೇಳಿದರು.
* ನ್ಯಾಯಾಲಯವು ಅರ್ಜಿಗಳನ್ನು ಆಲಿಸುತ್ತಿರುವಾಗ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗುವುದಿಲ್ಲ ಮತ್ತು ಮಾತುಕತೆಗಳಿಗೆ ಅನುಕೂಲವಾಗುವಂತೆ ಕಾನೂನುಗಳ ಅಡಿಯಲ್ಲಿ ಯಾವುದೇ ಕಾರ್ಯನಿರ್ವಾಹಕ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರವು ಬದ್ಧವಾಗಬಹುದೇ ಎಂದು ಸಿಜೆಐ ಎಜಿಯನ್ನು ಕೇಳಿತು.
* ಅನುಷ್ಠಾನವನ್ನು ಸ್ಥಗಿತಗೊಳಿಸಿದರೆ ರೈತರು ಮಾತುಕತೆಗೆ ಒಪ್ಪುವುದಿಲ್ಲ ಎಂದು ಎಜಿ ಹೇಳಿದರು. ಸಮಾಲೋಚನೆಗೆ ಅನುಕೂಲವಾಗುವಂತೆ ಈ ಸಲಹೆಯನ್ನು ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿತು. ಎಜಿ ಈ ಬಗ್ಗೆ ಉತ್ತರಿಸಲು ಸ್ವಲ್ಪ ಸಮಯವನ್ನು ಕೋರಿದರು.
* ರೈತರು ಜನಸಮೂಹವಲ್ಲ ಎಂದು ನ್ಯಾಯಪೀಠ ಗಮನಿಸಿತು. "ರೈತರ ದುಃಸ್ಥಿತಿ ಮತ್ತು ವಿಷಯಗಳು ಹೇಗೆ ನಡೆಯುತ್ತಿವೆ ಎಂಬ ಬಗ್ಗೆ ನಾವು ಚಿಂತಿತರಾಗಿದ್ದೇವೆ’ ಎಂದು ಸಿಜೆಐ ಹೇಳಿದರು.
* ಗುರುವಾರ,
ಯಾವುದೇ ತೀರ್ಪು ಹೊರಬಂದಿಲ್ಲ. ಪ್ರತಿಭಟನಾ ನಿರತ ರೈತ ಸಂಘಗಳಿಗೆ ನೋಟಿಸ್ ನೀಡಲು ಆದೇಶ ನೀಡುವುದಾಗಿ ಮತ್ತು ರಜಾಕಾಲೀನ ಪೀಠವನ್ನು ಸಮೀಪಿಸಲು ಅವರಿಗೆ ಸ್ವಾತಂತ್ರ್ಯ ನೀಡುವುದಾಗಿ ನ್ಯಾಯಪೀಠ ಹೇಳಿತು.
No comments:
Post a Comment