ಏನಿದು ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್ ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ಡಿಸೆಂಬರ್ 28ರ ಸೋಮವಾರ ದೇಶದಲ್ಲೇ ಮೊದಲ ಬಾರಿಗೆ ಅನಾವರಣಗೊಳಿಸಿದ ಮಹತ್ವಾಕಾಂಕ್ಷೆಯ ’ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್’ (ಎನ್ಸಿಎಂಸಿ) ಆಲೋಚನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸ್ಥಾಪಿಸಿದ ನಂದನ್ ನಿಲೇಕಣಿ ಸಮಿತಿಯು ಮೊತ್ತ ಮೊದಲಿಗೆ ರೂಪಿಸಿತು.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಎಐ) ಮಾಜಿ ಅಧ್ಯಕ್ಷ ನಿಲೇಕಣಿ ನೇತೃತ್ವದ ಐದು ಸದಸ್ಯರ ಸಮಿತಿಯು ದೇಶದಲ್ಲಿ ನಗದು ವಹಿವಾಟಿನ ಪ್ರಮಾಣವನ್ನು ಕಡಿಮೆಗೊಳಿಸಲು ಡಿಜಿಟಲ್ ಮೋಡ್ ಮೂಲಕ ನಾಗರಿಕರಿಗೆ ಸರ್ಕಾರದ ಎಲ್ಲ ಪಾವತಿಗಳನ್ನು ಒಳಗೊಂಡಂತೆ ಹಲವಾರು ಕ್ರಮಗಳನ್ನು ಪ್ರಸ್ತಾಪಿಸಿದೆ. ಇವುಗಳಲ್ಲಿ ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್ ಅಥವಾ ಎನ್ಸಿಎಂಸಿ ಕೂಡಾ ಒಂದು.
ಎನ್ಸಿಎಂಸಿ ಬಗ್ಗೆ ಒಂದಿಷ್ಟು ಮಾಹಿತಿ:
೧. ಕಳೆದ ೧೮ ತಿಂಗಳಲ್ಲಿ ಎಸ್ಬಿಐ, ಯುಕೊ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ೨೩ ಬ್ಯಾಂಕುಗಳು ನೀಡಿರುವ ರುಪೇ ಡೆಬಿಟ್ ಕಾರ್ಡ್ ಹೊಂದಿರುವ ಪ್ರಯಾಣಿಕರನ್ನು ಎನ್ಸಿಎಂಸಿ ಮೆಟ್ರೊ ಪ್ರಯಾಣಕ್ಕಾಗಿ ಸ್ವೈಪ್ ಮಾಡಲು ಇದು ಅನುಮತಿಸುತ್ತದೆ. ಈ ಸೌಲಭ್ಯವು ೨೦೨೨ ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್ವರ್ಕ್ನಲ್ಲಿ ಲಭ್ಯವಾಗಲಿದೆ.
೨. ಎನ್ಸಿಎಂಸಿ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ. ಇದು ಸ್ಮಾರ್ಟ್ ಫೋನ್ಗಳನ್ನು ಇಂಟರ್-ಆಪರೇಬಲ್ ಟ್ರಾನ್ಸ್ಪೋರ್ಟ್ ಕಾರ್ಡ್ ಆಗಿ ಪರಿವರ್ತಿಸುತ್ತದೆ, ಪ್ರಯಾಣಿಕರು ಅಂತಿಮವಾಗಿ ಮೆಟ್ರೋ, ಬಸ್ ಮತ್ತು ಉಪನಗರ ರೈಲ್ವೆ ಸೇವೆಗಳಿಗೆ ಪಾವತಿಸಲು ಇದನ್ನು ಬಳಸಬಹುದು.
೩. ದೆಹಲಿ ಮೆಟ್ರೋದ ಸಂಪೂರ್ಣ ೪೦೦ ಕಿ.ಮೀ ವ್ಯಾಪ್ತಿಯನ್ನು ಎನ್ಸಿಎಂಸಿ ಸೇವೆಗೆ ನಿಗದಿಪಡಿಸಲಾಗಿದೆ.
೪. ಇದು ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್ಸಿ) ವ್ಯವಸ್ಥೆ ಎಂದು ಕರೆಯಲ್ಪಡುವ ಸ್ಮಾರ್ಟ್ಫೋನ್ ಸಹಾಯದಿಂದ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅನುಮತಿ ಕಲ್ಪಿಸುತ್ತದೆ. ಮುಂಬರುವ ದೆಹಲಿ ಮೆಟ್ರೋ ಹಂತ- ೪ ಯೋಜನೆಯಲ್ಲಿ, ಎಎಫ್ಸಿ ವ್ಯವಸ್ಥೆಯು ಎನ್ಸಿಎಂಸಿಯನ್ನು ಸಂಪೂರ್ಣವಾಗಿ ಸ್ವೀಕರಿಸುತ್ತದೆ, ಇದನ್ನು ದೇಶದ ಯಾವುದೇ ನಗರದಲ್ಲೂ ಬಳಸಬಹುದು.
೫. ಮೆಟ್ರೋ ನಿಲ್ದಾಣಗಳಿಗೆ ಎಎಫ್ಸಿ ಕಂಪ್ಲಯಂಟ್ ಇಂಡಿಜೀನಸ್ ಗೇಟ್ಗಳನ್ನು ರೂಪಿಸಲು ಸರ್ಕಾರ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ್ನು ತೊಡಗಿಸಿಕೊಂಡಿದೆ. ಅಂತಿಮವಾಗಿ, ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಎಎಫ್ಸಿ ಗೇಟ್ಗಳನ್ನು ಅಳವಡಿಸಲಾಗುವುದು.
೬. ನಿಲೇಕಣಿ ಸಮಿತಿಯು ಎನ್ಸಿಎಂಸಿಯಲ್ಲಿ ಎರಡು ಉಪಕರಣಗಳನ್ನು ಹೊಂದಿರಬೇಕು ಎಂದು ಸೂಚಿಸಿತ್ತು - ಎಟಿಎಂ ಮತ್ತು ಸ್ಥಳೀಯ ವ್ಯಾಲೆಟಿನಲ್ಲಿ ಬಳಸಬಹುದಾದ ಸಾಮಾನ್ಯ ಡೆಬಿಟ್ ಕಾರ್ಡ್. ಸರ್ವರ್ಗೆ ಹಿಂತಿರುಗುವ ಅಗತ್ಯವಿಲ್ಲದೇ ಅಥವಾ ಹೆಚ್ಚುವರಿ ದೃಢೀಕರಣದ ಅಗತ್ಯವಿಲ್ಲದೇ ಸಂಪರ್ಕರಹಿತ ಪಾವತಿಗಳಿಗೆ ಇದನ್ನು ಬಳಸಬಹುದು.
೭. ಹಣಕಾಸು ಸೇವೆಗಳ ಇಲಾಖೆಯಿಂz ಸೇವೆ ಕಡ್ಡಾಯಗೊಂಡಿರುವ ಬ್ಯಾಂಕುಗಳು, ಸೇವೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಡೆಬಿಟ್ ಕಾರ್ಡ್ಗಳನ್ನು ಎನ್ಸಿಎಂಸಿ ಕಂಪ್ಲಯಂಟ್ (ಎನ್ಸಿಎಂಸಿ ಅನುಸರಣೆ) ಮಾಡಲು ಕೇಳಿಕೊಳ್ಳಲಾಗಿದೆ.
No comments:
Post a Comment