ಥಾಯ್ಲೆಂಡ್‌ನಲ್ಲಿ ಪ್ರವಾಸಿಗರ 'ಬ್ರಹ್ಮಾಸ್ತ್ರ' ದರ್ಶನ!
ನೀವು ಬ್ಯಾಂಕಾಕ್‌ನ
ಸುಂದರ ಚಾವೊ ಫ್ರಾಯಾ ನದಿಯಲ್ಲಿ ಆರಾಮವಾಗಿ ವಿಹಾರ ಮಾಡುತ್ತಿದ್ದೀರಿ. ಸುತ್ತಲೂ ರಾತ್ರಿಯ
ದೀಪಾಲಂಕಾರ,
ತಂಪಾದ ಗಾಳಿ... ಇದ್ದಕ್ಕಿದ್ದಂತೆ, "ಏಯ್! ಎಲ್ಲರೂ ತಲೆ ತಗ್ಗಿಸಿ!" ಎಂಬ ಕೂಗು. ಏನಾಯ್ತು ಅಂತ ನೋಡಿದ್ರೆ, ಸೇತುವೆಯ
ಕೆಳಗೆ ಢಿಕ್ಕಿ ಹೊಡೆಯುವಷ್ಟು ಕಡಿಮೆ ಅಂತರದಲ್ಲಿ ನಿಮ್ಮ
ಬೋಟ್ ಸಾಗುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗಿ ಸೇತುವೆಗೂ ದೋಣಿಗೂ ನಡುವಿನ ಅಂತರ ಕಮ್ಮಿ ಆಗಿದೆ!
ಸೇತುವೆಗೆ ತಲೆ ತಗಲದಿರಲೆಂದು
ಎಲ್ಲರೂ ಒಟ್ಟಿಗೆ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ
ಅಸ್ತ್ರಗಳಿಂದ ತಪ್ಪಿಸಿಕೊಳ್ಳೋ ಸೀನ್‌ನಂತೆ ತಲೆ ಬಗ್ಗಿಸಿ ಕುಳಿತರು.!
ಬ್ಯಾಂಕಾಕ್‌ನ
ನದಿಯಲ್ಲಿ ವಿಹಾರ ಮಾಡುವಾಗ ಭಾರಿ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯಕಾರಿಯಾಗಿ ಸೇತುವೆಯ ಹತ್ತಿರಕ್ಕೆ ದೋಣಿಯು ಬಂದಾಗಿನ
ದೃಶ್ಯ ಇದು. ಸೇತುವೆ ಡಿಕ್ಕಿ
ಹೊಡೆಯುವುದನ್ನು ತಪ್ಪಿಸಲು ಪ್ರಯಾಣಿಕರು ತಲೆಬಗ್ಗಿಸಬೇಕಾಯಿತು.
ವಿಡಿಯೋದಲ್ಲಿ ಕಾಣುವ ಈ ದೃಶ್ಯ,
ನಗು ತರುವ ವಿಷಯವಾದರೂ, ಹವಾಮಾನ
ಬದಲಾವಣೆ ಹೇಗೆ ಟೂರಿಸ್ಟ್‌ಗಳ ಮಜವನ್ನು ಅರ್ಧಕ್ಕೆ ನಿಲ್ಲಿಸಬಹುದು ಅನ್ನೋದಕ್ಕೆ ಇದು ಒಂದು
ಚಿಕ್ಕ ಉದಾಹರಣೆ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:
ಚಾವೊ
ಫ್ರಾಯಾ: ನದಿನಾ ಅಥವಾ ಜಲಪಾತನಾ?
ಚಾವೊ ಫ್ರಾಯಾ ನದಿ
ಸಾಮಾನ್ಯವಾಗಿ ನಿಶ್ಶಬ್ಧವಾಗಿ ಹರಿಯುವ ಸೌಂದರ್ಯದ ತಾಣ. ಆದರೆ ಇತ್ತೀಚೆಗೆ ಸುರಿದ ಭಾರಿ
ಮಳೆಯಿಂದಾಗಿ,
ಅದರ ಸಾಮಾನ್ಯ ಸ್ವರೂಪವೇ ಬದಲಾಗಿದೆ. ನದಿಯ ನೀರಿನ ಮಟ್ಟ ಎಷ್ಟರ
ಮಟ್ಟಿಗೆ ಏರಿದೆ ಎಂದರೆ,
ಅಲ್ಲಿ ಓಡಾಡುವ ಬೋಟ್‌ಗಳು, ಫೆರಿಗಳಿಗೆ ರಸ್ತೆ ಕಾಣದೆ, ದಾರಿ
ತಪ್ಪಿದಂತಾಗಿದೆ. ಇದರಿಂದ ಕೇವಲ ಬೋಟ್‌ಗಳಷ್ಟೇ ಅಲ್ಲ, ನದಿ ದಡದಲ್ಲಿರುವ ಕಟ್ಟಡಗಳಿಗೂ
ಅಪಾಯ ಎದುರಾಗಬಹುದು.
ಮಳೆ:
ವರದಾನವಾ,
ಶಾಪವಾ?
ಬ್ಯಾಂಕಾಕ್‌ನಲ್ಲಿ ಈ
ವರ್ಷ 1,800 ಮಿ.ಮೀ. ಗಿಂತಲೂ ಹೆಚ್ಚು ಮಳೆ ಬರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು
ಸಾಮಾನ್ಯಕ್ಕಿಂತ ಜಾಸ್ತಿ. ಒಂದು ಕಡೆ ಇದು ನಗರದ ನೀರಿನ ಅಗತ್ಯವನ್ನು ಪೂರೈಸಿದರೆ, ಇನ್ನೊಂದು
ಕಡೆ ನಗರವನ್ನು ಮುಳುಗಿಸುವ ಆತಂಕವೂ ಇದೆ. ಹಾಗಾಗಿಯೇ, ಬ್ಯಾಂಕಾಕ್‌ನ ಡ್ರೈನೇಜ್
ಸಿಸ್ಟಮ್‌ಗಳನ್ನು ಸುಧಾರಿಸಬೇಕು ಮತ್ತು ನದಿಯಲ್ಲಿ ಓಡಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು
ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಬಾರಿ ಬೋಟ್‌ನಲ್ಲಿ
ತಲೆ ಬಗ್ಗಿಸಿದ್ದಕ್ಕೆ ಬಚಾವ್ ಆದ್ರು, ಮುಂದಿನ ಬಾರಿ? ನೋಡಬೇಕು!.


No comments:
Post a Comment