ಹಳಿ ಆಧಾರಿತ ಮೊಬೈಲ್ ಲಾಂಚರಿನಿಂದ ಅಗ್ನಿ ಪ್ರೈಮ್ ಕ್ಷಿಪಣಿ ಉಡಾವಣೆ
ಭಾರತವು ಹಳಿ ಆಧಾರಿತ ಸಂಚಾರೀ
ಉಡಾವಣಾ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು
೨೦೨೫ ಸೆಪ್ಟೆಂಬರ್ ೨೫ರ ಗುರುವಾರ ಯಶಸ್ವಿಯಾಗಿ
ಉಡಾವಣೆ ಮಾಡಿತು.
ಮುಂದಿನ ಪೀಳಿಗೆಯ ಈ ಕ್ಷಿಪಣಿಯನ್ನು 2000 ಕಿ.ಮೀ ವರೆಗಿನ ವ್ಯಾಪ್ತಿಗೆ
ತಲುಪುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ವಿಶೇಷವಾಗಿ
ವಿನ್ಯಾಸಗೊಳಿಸಲಾದ ರೈಲುಹಳಿ ಆಧಾರಿತ ಸಂಚಾರಿ ಉಡಾವಣಾ ವ್ಯವಸ್ಥೆಯಿಂದ ನಡೆಸಲಾದ ಈ ಉಡಾವಣೆಯು ಯಾವುದೇ ಪೂರ್ವ ಷರತ್ತುಗಳಿಲ್ಲದೆ ರೈಲು ಹಳಿ ಜಾಲದ ಮೇಲೆ ಚಲಿಸುವ
ಸಾಮರ್ಥ್ಯವನ್ನು ಹೊಂದಿದೆ. ಇದು ದೇಶಾದ್ಯಂತ ಚಲನಶೀಲತೆ ಮತ್ತು ಕಡಿಮೆ ಸಮಯದಲ್ಲಿ ಉಡಾವಣೆ ಮಾಡುವ
ಅವಕಾಶವನ್ನು ಹೆಚ್ಚಿಸುತ್ತದೆ.
ಈ ಯಶಸ್ವಿ
ಪರೀಕ್ಷೆಗಾಗಿ ಡಿಆರ್ಡಿಒ,
ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಮತ್ತು ಸಶಸ್ತ್ರ ಪಡೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ
ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ಚಲಿಸುತ್ತಿರುವ ರೈಲುಹಳಿ ಜಾಲದಿಂದ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರಗಳ ಸಮೂಹಕ್ಕೆ ಭಾರತವನ್ನು ಈ ಯಶಸ್ವಿ ಪರೀಕ್ಷೆಯು ಸೇರಿಸಿದೆ.

No comments:
Post a Comment