ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?
ಇದೊಂದು ಮನ ಕಲಕುವ ಸನ್ನಿವೇಶ
ಮಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು
ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿತ್ತು. ಹಠಾತ್ತನೆ ಕೋತಿಯೊಂದು ಬಂದು ಬಸ್ಸಿನ ಮುಂದೆ ನಿಂತುಕೊಂಡಿತು.
ಚಾಲಕನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಸ್ಸನ್ನು ನಿಲ್ಲಿಸಿದ.
ಶ್.. ಶ್.. ಎಂದು ಬಾಯಿಯಲ್ಲೇ ಸದ್ದು ಮಾಡಿದ.
ಮಂಗ ಕದಲಲಿಲ್ಲ. ನಿಂತಲ್ಲೇ ನಿಂತುಕೊಂಡಿತ್ತು. ಇದೇನೋ ವಿಲಕ್ಷಣ ಪರಿಸ್ಥಿತಿ
ಎಂದು ಬಸ್ಸಿನಲ್ಲಿದ್ದ ಕೆಲವರು ಕೆಳಕ್ಕೆ ಇಳಿದರು. ಆದರೂ ಕೋತಿ ಅಲ್ಲೇ ನಿಂತಿತ್ತು. ತನ್ನದೇ ಮೂಕಭಾಷೆಯಲ್ಲಿ
ಕೈ ಅಲ್ಲಾಡಿಸುತ್ತಿತ್ತು.
ಅದಕ್ಕೆ ಬಹುಶಃ ನೀರು ಬೇಕಾಗಿರಬಹುದು ಎಂದು ಪ್ರಯಾಣಿಕರಲ್ಲಿ ಒಬ್ಬರಿಗೆ ಅನ್ನಿಸಿತು. ಅವರು ತತ್ ಕ್ಷಣವೇ ತನ್ನ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ ತೆಗೆದು ಮಂಗನ ಮುಂದೆ ಹಿಡಿದರು. ಮಂಗ ಬಾಯಿ ತೆರೆದು ಗಟಗಟನೆ ನೀರು ಕುಡಿಯಿತು.
ಅಷ್ಟರಲ್ಲಿ ಇನ್ನಷ್ಟು ಮಂಗಗಳು ಆಸು ಪಾಸಿನಿಂದ ಓಡಿ ಬಂದು ಕೈ ಚಾಚ
ತೊಡಗಿದವು. ಬಸ್ಸಿನಲ್ಲಿದ್ದವರು ತಮ್ಮ ಬ್ಯಾಗುಗಳಿಂದ ನೀರಿನ ಬಾಟಲಿಗಳನ್ನು ತೆಗೆದು ಕೆಳಗಿದ್ದವರ
ಕೈಗಳಿಗೆ ಕೊಟ್ಟರು. ಮಹಿಳೆಯರೂ ಹಿಂದು ಮುಂದು ನೋಡದೆ ತಮ್ಮ ನೀರಿನ ಬಾಟಲಿಗಳನ್ನು ನೀಡಿದರು.
ಮಂಗಗಳ ಹಿಂಡೇ ಬಾಟಲಿಗಳಿಂದ ನೀರು ಕುಡಿದು ಖುಷಿ ಪಟ್ಟವು.
ನೀರು ಸಿಗದೆ ಅದೆಷ್ಟು ದಿನಗಳಿಂದ ಬಾಯಾರಿದ್ದವೋ ಏನೋ. ಮಂಗಗಳಿಗೆ ಅಮೃತ
ಸಿಕ್ಕಂತಾಗಿತ್ತು.
ಈ ಮನ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಲೆ ಕ್ಲಿಕ್ ಮಾಡಿ ವಿಡಿಯೋ
ನೋಡಿ.
ಮರೆಯಬೇಡಿ. ನಿಮ್ಮ ಮನೆ, ಕಚೇರಿಯ ಆಸುಪಾಸಿನಲ್ಲೂ ಪಶು ಪಕ್ಷಿಗಳು ಈ ಬೇಸಗೆಯಲ್ಲಿ ನೀರು ಸಿಗದೆ ಕಂಗಾಲಾಗಿರಬಹುದು. ಅವುಗಳಿಗೆ ಸಿಗುವಂತೆ ನೀರು ಸಿಗುವ ವ್ಯವಸ್ಥೆ ಮಾಡಿ. ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸಿ.

No comments:
Post a Comment