ಹೆಗಡೆ ನಗರದಲ್ಲಿ ʼಭಾರತರತ್ನ ವೀರ ಅಭಿಮನ್ಯುʼ
ಬೆಂಗಳೂರು
ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ
ದೇವಸ್ಥಾನದ ಆವರಣದಲ್ಲಿ ೨೦೨೬ ನವೆಂಬರ್ ೧೫ರ ಭಾನುವಾರ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಪ್ರದರ್ಶನವು ಎಲ್ಲರ ಮನ ಗೆದ್ದಿತು.
ದೇವಸ್ಥಾನದ
ಆವರಣಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನವನ್ನು ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸೊಬಗಿನ
ಯಕ್ಷಗಾನವನ್ನು ಪ್ರದರ್ಶಿಸಿದರು. ಯಕ್ಷಗಾನವನ್ನು ಕಲಿಸಿಕೊಡುತ್ತಿರುವ ಯಕ್ಷಗುರು ಉಮೇಶರಾಜ್ ಮಂದಾರ್ತಿ
ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ಸಂಸ್ಥೆಯು ಈ ಕಾರ್ಯಕ್ರಮವನ್ನು ತನ್ನ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ
ಏರ್ಪಡಿಸಿತ್ತು.
ಮುಮ್ಮೇಳದಲ್ಲಿ ಬಾಲಗೋಪಾಲರಾಗಿ ಕನೀರ, ಬ್ರಿತಿ, ಸಮನ್ವಿ, ಆದ್ರಿತ ರೈ, ಕ್ರಿಶ ಪಾಲ್ಗೊಂಡರು.
ಭಾರತ ರತ್ನ ವೀರ ಅಭಿಮನ್ಯು ಪ್ರಸಂಗದಲ್ಲಿ ಕೃಷ್ಣನಾಗಿ ಪುಣ್ಯ, ಅರ್ಜುನನಾಗಿ ಸಾನಿಧ್ಯ, ಒಂದನೇ ಸಂಶಪ್ತಕರಾಗಿ ಅದ್ಮಯ್, ೨ನೇ ಸಂಶಪ್ತಕರಾಗಿ ಉದಯ್, ಧರ್ಮರಾಯನಾಗಿ ಶಿವಾಂಶ್, ಒಂದನೇ ಅಭಿಮನ್ಯುವಾಗಿ ಆದ್ಯ ಕಶ್ಯಪ್, ಎರಡನೇ ಅಭಿಮನ್ಯುವಾಗಿ ಆದ್ಯ ಶ್ರೀವಲ್ಲಿ, ಸುಭದ್ರೆಯಾಗಿ ಡಾ. ಉಮಾದೇವಿ, ದ್ರೋಣನಾಗಿ ಆದ್ಯ ಭಟ್, ಜಯದ್ರಥನಾಗಿ ಶಿವಾಂಶ್, ಕೌರವನಾಗಿ ಅರ್ಚನ ಬಂಗೇರ, ಕರ್ಣನಾಗಿ ಪ್ರಣೀತ ರೈ, ಶಲ್ಯನಾಗಿ ಅಭ್ಯುದಯ್, ದುಶ್ಯಾಸನನಾಗಿ ಆದ್ರಿತ ರೈ, ಕೌರವರ ಸೇನೆಯ ವಿಕರ್ಣನಾಗಿ ಕನೀರ ಬಂಗೇರ, ಲಕ್ಷಣನಾಗಿ ಬ್ರಿತಿ, ದುರ್ಮುಖನಾಗಿ ಲಕ್ಷ್ಯ, ದುರ್ಮರ್ಷಣನಾಗಿ ಅಂಶ್, ದುಸ್ಸಹನಾಗಿ ರಿಶಿಥ್ ಕುಮಾರ್ ಪಾಲ್ಗೊಂಡಿದ್ದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ
ಉಮೇಶ್ ರಾಜ್ ಮಂದಾರ್ತಿ, ಶ್ರೀ ಉದಯಶಂಕರ್ ಭಟ್ ನೆತ್ರಕೆರೆ, ಮದ್ದಳೆಗಾರರಾಗಿ ಶ್ರೀ ವೆಂಕಟೇಶ ಪ್ರಭು, ಶ್ರೀ ರಘು ಶರ್ಮ, ಚೆಂಡೆವಾದಕರಾಗಿ
ಶ್ರೀ ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಪ್ರಸಂಗಕ್ಕೆ ಕಳೆ ನೀಡಿದರು.
ಪ್ರಸಾಧನ ಕಲಾವಿದರಾಗಿ ಶ್ರೀ ರಾಜೇಶ ಆಚಾರ್ಯ, ಶ್ರೀ ಪ್ರಸನ್ನ ಮಯ್ಯ, ಶ್ರೀ ಲಕ್ಷ್ಮಿ ಹೊಂಬಾಡಿ, ಶ್ರೀ ಗುರುರಾಜ್ ಬಿಲ್ಲಾಡಿ, ಶ್ರೀಮತಿ ಉಷಾ ಹರೀಶ್, ಶ್ರೀ ಉದಯ ಕುಮಾರ್ ಇಡೀ ಪ್ರದರ್ಶನದ ಸೊಬಗನ್ನು ಹೆಚ್ಚಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೇಯಾ ಕಶ್ಯಪ್ ಪ್ರಾರ್ಥನೆ ನೆರವೇರಿಸಿದರೆ, ಅನಿಕೇತ್ ತಬಲಾ ಬಾರಿಸಿದರು. ಮುರಳಿ ವೆಂಕಟರಾಮ್ ಅವರ ಭಾವಗೀತೆ, ಶ್ರೇಯಾ ಅವರ ಶಾಸ್ತ್ರೀಯ ಸಂಗೀತ, ಅನಿಕೇತ್ ಅವರ ತಬಲಾವಾದನ, ಶಾಂತಿ ಅವರ ಭಕ್ತಿ ಗೀತೆ, ಕುಮಾರ ಅಶುತೋಷ್ ಅವರ ಪಿಟೀಲು ವಾದನ, ಅರೈನ ಪೂಜಾ, ವೀಹಾ ಶರ್ಮ, ಶ್ರೇಷ್ಠಾ ಶೆಟ್ಟಿ ಅವರ ಭರತನಾಟ್ಯ, ಹರ್ಷ ಆಚಾರ್ಯ ಮತ್ತು ಮೇಘ ಆಚಾರ್ಯ ಅವರ ನೃತ್ಯ ಪ್ರದರ್ಶನ ಪ್ರೇಕ್ಷರನ್ನು ರಂಜಿಸಿದವು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಖ್ಯಾತ ಯಕ್ಷ ಗುರು ಶ್ರೀ ಮಂಜುನಾಥ ಕುಲಾಲ್ ಐರೋಡಿ ಅವರನ್ನು ಅವರ ಕಲಾ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.
ಯಕ್ಷಗಾನ ಕಲಿಕೆಗೆ ಸ್ಥಳಾವಕಾಶ ಮಾಡಿಕೊಟ್ಟ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಕಾನೂನು ಸಲಹೆಗಾರ ಶ್ರೀ ಮುನಿರಾಜು ಮತ್ತು ಮಮತಾ ಮುನಿರಾಜು, ಉಪಾಧ್ಯಕ್ಷ ಶ್ರೀ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕೆ. ಹೆಗಡೆ, ಟ್ರಸ್ಟಿಗಳಾದ ಶ್ರೀ ನೆತ್ರಕೆರೆ ಉದಯಶಂಕರ ಭಟ್, ಶ್ರೀ ಕೆ.ಪಿ. ಸುಗುಣನ್ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಳೆದ ಒಂದು ವರ್ಷದಲ್ಲಿ ಯಕ್ಷಗಾನ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನೂ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯನ್ನು ಚೇತನಾ ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಣೀತಾ ರೈ ನೆರವೇರಿಸಿದರು.
ಮೇಲಿನ ಚಿತ್ರವನ್ನು ಕ್ಲಿಕ್ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಸಹಿತ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು.
ಈ ಸಂದರ್ಭದ ಕೆಲವು ಪುಟ್ಟ ಪುಟ್ಟ ವಿಡಿಯೋಗಳನ್ನು ಇಲ್ಲಿ ವೀಕ್ಷಿಸಬಹುದು.







No comments:
Post a Comment