ಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ
ಬೆಂಗಳೂರು
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ
ನಾಲ್ಕನೇ ದಿನವಾದ ಬುಧವಾರ (೧೪ ಅಕ್ಟೋಬರ್ ೨೦೨೬) ತ್ರಿಮೂರ್ತಿಗಳಿಗೆ ವಿವಿಧ ಅಲಂಕಾರ ಮಾಡಲಾಯಿತು.
ಶ್ರೀ ಬಾಲಾಜಿ ಮಹಾಗಣಪತಿ ಹಣ್ಣುಗಳ ಅಲಂಕಾರದಲ್ಲಿ, ಶ್ರೀ ವೆಂಕಟೇಶ್ವರನು ನವಧಾನ್ಯ ಅಲಂಕಾರದಲ್ಲಿ, ಶ್ರೀ ಅಭಯ ಆಂಜನೇಯ ಸ್ವಾಮಿ ತರಕಾರಿ ಅಲಂಕಾರದಲ್ಲಿ ಗಮನ ಸೆಳೆದರು.
ಶ್ರೀ ಮುನಿರಾಜು ಮತ್ತು ಕುಟುಂಬದವರು ಮೂರೂ ದೇವರಿಗೆ ಅಲಂಕಾರ ಸೇವೆಯನ್ನು ಹಾಗೂ ಪ್ರದೀಪ ಶಾಸ್ತ್ರಿ ಮತ್ತು ಕುಟುಂಬದವರು ಪ್ರಸಾದ ಸೇವೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕೆಂಪೇಗೌಡ ಬಡಾವಣೆಯ ಶ್ರೀ ಸತೀಶ ಅವರು ದೇವರಿಗೆ ಹೊಸ ಒಡವೆಗಳನ್ನು ಸಮರ್ಪಿಸಿದರು.
ಇದೇ
ಸಂದರ್ಭದಲ್ಲಿ ಭಕ್ತರಿಂದ ಭಜನೆ, ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.





No comments:
Post a Comment