Showing posts sorted by relevance for query ಸ್ವಾತಂತ್ರ್ಯ. Sort by date Show all posts
Showing posts sorted by relevance for query ಸ್ವಾತಂತ್ರ್ಯ. Sort by date Show all posts

Tuesday, January 23, 2024

ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ

ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ 

ವದೆಹಲಿ: ಬಿಹಾರದ ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 2024 ಜನವರಿ 23ರ ಮಂಗಳವಾರ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಮರಣೋತ್ತರವಾಗಿ ಘೋಷಿಸಲಾಯಿತು.

ಕರ್ಪೂರಿ ಠಾಕೂರ್ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ದುಡಿದ ಕಾರಣಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. ಅವರು "ಜನನಾಯಕ" ಎಂದೇ ಖ್ಯಾತರಾಗಿದ್ದರು.

 ಕರ್ಪೂರಿ ಠಾಕೂರ್ ಅವರು ಜನವರಿ 24, 1924 ರಂದು ಬಿಹಾರದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮಾಜದಲ್ಲಿ ಜನಿಸಿದರು. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮಾ ಗಾಂಧಿಯವರು ಕರೆ ನೀಡಿದ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದರು.

ಅವರು 1952 ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅಂದಿನಿಂದ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ಸೋಲಲಿಲ್ಲ.

ಠಾಕೂರ್ ಅವರು ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ 1977 ರಿಂದ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ತಮ್ಮ ಆರಂಭಿಕ ಅಧಿಕಾರಾವಧಿಯಲ್ಲಿ ಜನತಾ ಪಕ್ಷದೊಂದಿಗೆ ಸೇರಿಕೊಂಡರು.

ಕರ್ಪೂರಿ ಠಾಕೂರ್ ಫೆಬ್ರವರಿ 17, 1988 ರಂದು ನಿಧನರಾದರು.

ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ, ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವಾರು ಗಣ್ಯರು ಸ್ವಾಗತಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

1. ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಕಾರಣಿ, ಬರಹಗಾರ, ವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ) - 1954

2. ಸರ್ವಪಲ್ಲಿ ರಾಧಾಕೃಷ್ಣನ್ (ತತ್ತ್ವಶಾಸ್ತ್ರಜ್ಞ, ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) - 1954

3. ಚಂದ್ರಶೇಖರ ವೆಂಕಟ ರಾಮನ್ (ಭೌತಶಾಸ್ತ್ರಜ್ಞ)- 1954

4. ಭಗವಾನ್ ದಾಸ್ (ಸ್ವಾತಂತ್ರ್ಯ ಕಾರ್ಯಕರ್ತ, ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ)- 1955

5. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸಿವಿಲ್ ಇಂಜಿನಿಯರ್, ರಾಜನೀತಿಜ್ಞ, ಮತ್ತು ಮೈಸೂರಿನ ದಿವಾನ್) - 1955

6. ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಕಾರ್ಯಕರ್ತ, ಲೇಖಕ ಮತ್ತು ಭಾರತದ ಮಾಜಿ ಪ್ರಧಾನಿ)- 1955

7. ಗೋವಿಂದ ಲ್ಲಭ್ ಪಂತ್ (ಸ್ವಾತಂತ್ರ್ಯ ಕಾರ್ಯಕರ್ತ) - 1957

8. ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ)- 1958

9. ಬಿಧನ್ ಚಂದ್ರ ರಾಯ್ (ವೈದ್ಯ, ರಾಜಕೀಯ ನಾಯಕ, ಲೋಕೋಪಕಾರಿ, ಶಿಕ್ಷಣತಜ್ಞ ಮತ್ತು ಸಮಾಜ ಸೇವಕ)- 1961

10. ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಕಾರ್ಯಕರ್ತ) - 1961

11. ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಕಾರ್ಯಕರ್ತ, ವಕೀಲ, ರಾಜಕಾರಣಿ, ವಿದ್ವಾಂಸ ಮತ್ತು ಭಾರತದ ಮಾಜಿ ರಾಷ್ಟ್ರಪತಿ)- 1962

12. ಜಾಕಿರ್ ಹುಸೇನ್ (ಸ್ವಾತಂತ್ರ್ಯ ಕಾರ್ಯಕರ್ತ)- 1963

13. ಪಾಂಡುರಂಗ್ ವಾಮನ್ ಕೇನ್ (ಇಂಡಾಲಜಿಸ್ಟ್ ಮತ್ತು ಸಂಸ್ಕೃತ ವಿದ್ವಾಂಸ) -1963

14. ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ಪ್ರಧಾನಿ) - 1966

15. ಇಂದಿರಾ ಗಾಂಧಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1971

16. ವರಾಹಗಿರಿ ವೆಂಕಟ ಗಿರಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1975

17. ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) (ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ) 1976

18. ಮದರ್ ಮೇರಿ ತೆರೇಸಾ ಬೊಜಾಕ್ಸಿಯು (ಮದರ್ ತೆರೇಸಾ) (ಮಿಷನರೀಸ್ ಆಫ್ ಚಾರಿಟಿಯ ಸ್ಥಾಪಕರು) - 1980

19. ವಿನೋಬಾ ಭಾವೆ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ, ಸಮಾಜ ಸುಧಾರಕ) -1983

20. ಖಾನ್ ಅಬ್ದುಲ್ ಗಫಾರ್ ಖಾನ್ (ಸ್ವಾತಂತ್ರ್ಯ ಕಾರ್ಯಕರ್ತ) -1987

21. ಮರುದೂರು ಗೋಪಾಲನ್ ರಾಮಚಂದ್ರನ್ (ಮರಣೋತ್ತರ) (ರಾಜಕಾರಣಿಯಾಗಿ ಮಾರ್ಪಟ್ಟ ನಟ) -1988

22. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ (ಮರಣೋತ್ತರ) (ಸಮಾಜ ಸುಧಾರಕ) -1990

23. ನೆಲ್ಸನ್ ರೋಲಿಹ್ಲಾ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ) - 1990

24. ರಾಜೀವ್ ಗಾಂಧಿ (ಮರಣೋತ್ತರ) (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1991

25. ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) - 1991

26. ಮೊರಾರ್ಜಿ ರಾಂಚೋಡ್ಜಿ ದೇಸಾಯಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಪ್ರಧಾನ ಮಂತ್ರಿ) - 1991

27. ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) -1992

28. ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ (ಕೈಗಾರಿಕೋದ್ಯಮಿ) - 1992

29. ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ) - 1992

30. ಗುಲ್ಜಾರಿ ಲಾಲ್ ನಂದಾ (ಸ್ವಾತಂತ್ರ್ಯ ಕಾರ್ಯಕರ್ತ) - 1997

31. ಅರುಣಾ ಅಸಫ್ ಅಲಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1997

32. ಎ.ಪಿ.ಜೆ. ಅಬ್ದುಲ್ ಕಲಾಂ (ಏರೋಸ್ಪೇಸ್, ರಕ್ಷಣಾ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1997

33. ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಕರ್ನಾಟಿಕ್ ಶಾಸ್ತ್ರೀಯ ಗಾಯಕಿ) -1998

34. ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಕಾರ್ಯಕರ್ತ) - 1998

35. ಜಯಪ್ರಕಾಶ್ ನಾರಾಯಣ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ, ಸಮಾಜ ಸುಧಾರಕ) - 1999

36. ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ) - 1999

37. ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1999

38. ರವಿಶಂಕರ್ (ಸಿತಾರ್ ವಾದಕ) - 1999

39. ಲತಾ ದೀನಾನಾಥ್ ಮಂಗೇಶ್ಕರ್ (ಹಿನ್ನೆಲೆ ಗಾಯಕಿ) - 2001

40. ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ) - 2001

41. ಭೀಮಸೇನ್ ಗುರುರಾಜ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ) - 2009

42. C. N. R. ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ) - 2014

43. ಸಚಿನ್ ರಮೇಶ್ ತೆಂಡೂಲ್ಕರ್ (ಕ್ರಿಕೆಟರ್) - 2014

44. ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) 2015

45. ಮದನ್ ಮೋಹನ್ ಮಾಳವೀಯ (ಮರಣೋತ್ತರ) (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ) - 2015

46. ನಾನಾಜಿ ದೇಶಮುಖ್ (ಮರಣೋತ್ತರ) (ಸಾಮಾಜಿಕ ಕಾರ್ಯಕರ್ತ) - 2019

47. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) (ಹಿನ್ನೆಲೆ ಗಾಯಕ, ಗೀತರಚನೆಕಾರ, ಸಂಗೀತಗಾರ, ಕವಿ ಮತ್ತು ಚಲನಚಿತ್ರ ನಿರ್ಮಾಪಕ) - 2019

48. ಪ್ರಣಬ್ ಮುಖರ್ಜಿ (ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) 2019

49. ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ) - 2024

Wednesday, February 5, 2020

ಗಾಂಧೀಜಿ ಹೆಸರು ಉಲ್ಲೇಖಿಸಿಲ್ಲ: ಅನಂತಕುಮಾರ ಹೆಗಡೆ ಸ್ಪಷ್ಟನೆ

ಗಾಂಧೀಜಿ ಹೆಸರು ಉಲ್ಲೇಖಿಸಿಲ್ಲ:  ಅನಂತಕುಮಾರ ಹೆಗಡೆ ಸ್ಪಷ್ಟನೆ
ಬೆಂಗಳೂರು: ಬೆಂಗಳೂರಿನಲ್ಲಿ ಮಾಡಿದ್ದ ಭಾಷಣದಲ್ಲಿ ತಾವು ಸ್ವಾತಂತ್ರ್ಯ ಹೋರಾಟವನ್ನು ವರ್ಗೀಕರಿಸಿದ್ದುದಾಗಿ  2020 ಫೆಬ್ರುವರಿ 04ರ ಮಂಗಳವಾರ  ಸ್ಪಷ್ಟ ಪಡಿಸಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಅನಂತಕುಮಾರ ಹೆಗಡೆ ಅವರುಭಾಷಣದಲ್ಲಿ ತಾವು ಮಹಾತ್ಮ ಗಾಂಧಿ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲಎಂದು ಹೇಳಿದರು.
ಕೆಲವರು ನಡೆಸಿದ್ದುದು ಬ್ರಿಟಿಷರ ಜೊತೆಗಿನ ಹೊಂದಾಣಿಕೆಯ ಹೋರಾಟ, ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ ಕೊಟ್ಟದ್ದಲ್ಲಎಂಬ ತಮ್ಮ ಹೇಳಿಕೆಯನ್ನು ಗಾಂಧೀಜಿ ಕುರಿತಾದದ್ದು ಎಂಬುದಾಗಿ ವಾದಿಸಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ  ಸುದ್ದಿ ಸಂಸ್ಥೆ ಒಂದರ ಜೊತೆ ಮಾತನಾಡುತ್ತಾ ಸಂಸತ್ ಸದಸ್ಯ ಹೆಗಡೆ ಸ್ಪಷ್ಟನೆ ನೀಡಿದರು.
ನನ್ನ ಭಾಷಣದಲ್ಲಿ ನಾನು ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖಿಸಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವರ್ಗೀಕರಣ ಮಾಡಿದ್ದೆಎಂದು ಹೆಗಡೆ ಹೇಳಿದರು.

ನಾನು ಅಂದು ಏನು ಮಾತನಾಡಿದ್ದೆ ಎಂಬುದು ಎಲ್ಲೆಡೆ ಲಭ್ಯವಿದೆ. ನನ್ನ ವೆಬ್ ಸೈಟಿನಲ್ಲಿಯೂ ಇದೆ. ಅಂದಿನ ಭಾಷಣದಲ್ಲಿ ನಾನು ಗಾಂಧೀಜಿ ಅವರನ್ನಾಗಲಿ, ನೆಹರೂ ಅವರನ್ನಾಗಲಿ ಟೀಕಿಸಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆಎಂದು ಅನಂತಕುಮಾರ ಹೇಳಿದರು.
ನನ್ನ ಹೇಳಿಕೆ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ವಿಶ್ಲೇಷಣೆಗಳೆಲ್ಲವೂ ಸುಳ್ಳು. ಈಗ ಚರ್ಚೆಯಾಗುತ್ತಿರುವಂತೆ ನಾನು ಏನನ್ನೂ ಹೇಳಿಲ್ಲ. ಇದು ಅನಗತ್ಯ ವಿವಾದಎಂದು ಅವರು ನುಡಿದರು.

ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘವು ಫೆಬ್ರುವರಿ ೧ರ ಶನಿವಾರ ಬೆಂಗಳೂರಿನಲ್ಲಿ ಸಂಘಟಿಸಿದ್ದಮತ್ತೆ ಮತ್ತೆ ಸಾವರ್ಕರ್ಕಾರ್ಯಕ್ರಮದಲ್ಲಿ ಅನಂತ ಕುಮಾರ ಹೆಗಡೆ ಮಾತನಾಡಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ-ಬುಕ್ಕರಂತಹ ನೂರಾರು ಮಂದಿಯನ್ನು ಮುಂದೆ ತಂದರು. ಮತ್ತೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರ ಬಳಿಯೇ ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು.
ಒಳಗಡೆ
(ಜೈಲಿನಲ್ಲಿ) ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು. ಇತಿಹಾಸದ ಪ್ರಕಾರ ಬ್ರಿಟಿಷರು ಉಪವಾಸಕ್ಕೆ ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂಬುದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟುತ್ತದೆಎಂದು ಅನಂತಕುಮಾರ ಹೇಳಿದ್ದರು.

ಅನಂತಕುಮಾರ ಅವರ ಹೇಳಿಕೆಯು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದ ಗಾಂಧೀಜಿ ಅವರ ಹೋರಾಟವನ್ನು ಪ್ರಶ್ನಿಸುವಂತಿದೆ ಎಂಬ ಟೀಕೆ ರಾಜಕೀಯ, ಸಾಮಾಜಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು.

ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಬಿಜೆಪಿಯ ಕೇಂದ್ರ ಶಿಸ್ತುಪಾಲನಾ ಸಮಿತಿಯು ಅನಂತಕುಮಾರ ಹೆಗಡೆ ಅವರಿಗೆ ಬಗ್ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಿದೆ ಎಂದು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದರು.

ಅನಂತ ಕುಮಾರ ಹೆಗಡೆ ಅವರಿಗೆ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳದಂತೆಯೂ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು.

Tuesday, February 4, 2020

ಗಾಂಧಿ ಕುರಿತು ಟೀಕೆ: ಅನಂತಕುಮಾರ ಹೆಗಡೆಗೆ ಶೋಕಾಸ್ ನೋಟಿಸ್

ಗಾಂಧಿ ಕುರಿತು ಟೀಕೆ: ಅನಂತಕುಮಾರ ಹೆಗಡೆಗೆ
ಶೋಕಾಸ್ ನೋಟಿಸ್
ಭೇಷರತ್ ಕ್ಷಮೆಯಾಚಿಸಲು ಸೂಚನೆ, ಸಂಸದೀಯ ಮಂಡಳಿ ಸಭೆಗೆ ಕೊಕ್
ನವದೆಹಲಿ: ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ಟೀಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಹೆಗಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು 2020 ಫೆಬ್ರುವರಿ 03ರ ಸೋಮವಾರ ದೃಢ ಪಡಿಸಿದರು.

ರಾಷ್ಟ್ರಪಿತನ ಬಗ್ಗೆ ಅನಂತಕುಮಾರ ಹೆಗಡೆ ಅವರು ಮಾಡಿರುವ ಟೀಕೆಗೆಳ ಬಗ್ಗೆ ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವವು , ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ತೀವ್ರ  ಅಸಮಾಧಾನಗೊಂಡಿದ್ದಾರೆ. ಮತ್ತು ಸಂಸದೀಯ ಮಂಡಳಿ ಸಭೆಗೆ ಹಾಜರಾಗದಂತೆ ಅವರಿಗೆ ವರಿಷ್ಠರು ಸೂಚಿಸಿದ್ದಾರೆ  ಎಂದು ಸುದ್ದಿ ಸಂಸ್ಥೆಯು ಅಪರಿಚಿತ ಮೂಲಗಳನ್ನು ಉಲ್ಲೇಖಿಸಿ ಹೇಳಿತು.

ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಪರಿಚಿತರಾಗಿರುವ ಮಾಜಿ ಕೇಂದ್ರ ಸಚಿವರು ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನುನಾಟಕಎಂಬುದಾಗಿ ಬಣ್ಣಿಸಿದ್ದರು ಮತ್ತುಇಂತಹ ವ್ಯಕ್ತಿಗಳನ್ನುಭಾರತದಲ್ಲಿಮಹಾತ್ಮಎಂಬುದಾಗಿ ಕರೆಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಉತ್ರರ ಕನ್ನಡದಿಂದ ಆರು ಬಾರಿ ಲೋಕಸಭಾ ಸದಸ್ಯರಾಗಿರುವ ಅನಂತಕುಮಾರ ಹೆಗಡೆ ಅವರು ಬೆಂಗಳೂರಿನಲ್ಲಿ ಶನಿವಾರ ಸಮಾರಂಭ ಒಂದರಲ್ಲಿ ಭಾಷಣ ಮಾಡುತ್ತಾಇಡೀ ಸ್ವಾತಂತ್ರ್ಯ ಚಳವಳಿಯೇ ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದ ಜೊತೆಗೆ ನಡೆದಿತ್ತುಎಂದು ಹೇಳಿದ್ದರು.

ತಥಾಕಥಿತ ನಾಯಕರಾರನ್ನೂ ಪೊಲೀಸರು ಒಮ್ಮೆ ಕೂಡಾ ಥಳಿಸಿಲ್ಲ. ಅವರ ಸ್ವಾತಂತ್ರ್ಯ ಚಳವಳಿಯು ಒಂದು ದೊಡ್ಡ ನಾಟಕ. ಅದನ್ನು ನಾಯಕರು ಬ್ರಿಟಿಷರ ಒಪ್ಪಿಗೆಯೊಂದಿಗೇ ನಡೆಸಿದ್ದರು. ಅದು ನೈಜ ಹೋರಾಟವಲ್ಲ. ಅದೊಂದು ಹೊಂದಾಣಿಕೆಯ ಸ್ವಾತಂತ್ರ್ಯ ಹೋರಾಟವಾಗಿತ್ತುಎಂದು ಹೆಗಡೆ ಹೇಳಿದುದಾಗಿ ವರದಿಗಳು ತಿಳಿಸಿದ್ದವು.

ಮಹಾತ್ಮ ಗಾಂಧಿಯವರ ಉಪವಾಸ ಮುಷ್ಕರ ಮತ್ತು ಸತ್ಯಾಗ್ರಹ ಕೂಡಾ ಒಂದು ನಾಟಕವಾಗಿತ್ತು ಎಂದೂ ಹಿರಿಯ ಬಿಜೆಪಿ ನಾಯಕ ಹೇಳಿದ್ದರು.

ಭಾರತವು ಆಮರಣ ನಿರಶನ ಮತ್ತು ಸತ್ಯಾಗ್ರಹದ ಕಾರಣ ಸ್ವಾತಂತ್ರ್ಯ ಪಡೆಯಿತು ಎಂದು ಕಾಂಗ್ರೆಸ್ಸನ್ನು ಬೆಂಬಲಿಸುವ ಜನರು ಹೇಳುತ್ತಿರುತ್ತಾರೆ. ಇದು ಸತ್ಯವಲ್ಲ. ಬ್ರಿಟಿಷರು ಭಾರತ ತ್ಯಜಿಸಿದ್ದು ಸತ್ಯಾಗ್ರಹದ ಕಾರಣದಿಂದಲ್ಲಎಂದು ಹೆಗಡೆ ಹೇಳಿದುದಾಗಿ ವರದಿಗಳು ತಿಳಿಸಿದ್ದವು.

ಬ್ರಿಟಿಷರು ಭ್ರಮನಿರಸನಗೊಂಡು ಸ್ವಾತಂತ್ರ್ಯ ನೀಡಿದ್ದರು. ನನಗೆ ಇತಿಹಾಸವನ್ನು ಓದುವಾಗ ರಕ್ತ ಕುದಿಯುತ್ತದೆ. ಇಂತಹ ವ್ಯಕ್ತಿಗಳು ನಮ್ಮ ರಾಷ್ಟ್ರದಲ್ಲಿ ಮಹಾತ್ಮರಾಗುತ್ತಾರೆಎಂದು ಹೆಗಡೆ ಅವರನ್ನು ಉಲ್ಲೇಖಿಸಿದ ವರದಿಗಳು ಹೇಳಿದ್ದವು.

ಅನಂತ ಕುಮಾರ ಹೆಗಡೆ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ’ರಾಷ್ಟ್ರಕ್ಕೆ ಬ್ರಿಟಿಷರ ಚಮಚಾಗಳು ಮತ್ತು ಗೂಢಚಾರಿಗಳ ಪಡೆಗಳಿಂದ ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲಎಂದು ಎದಿರೇಟು ನೀಡಿತ್ತು.

ವಿಶೇಷವಾಗಿ ಮಹಾತ್ಮ ಗಾಂಧೀಜಿಯವರ ಕಲ್ಪನೆಗಳನ್ನು ಮರುಪ್ಯಾಕೇಜ್ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿರುವ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ನಾಯಕರಾಗಿರುವ ಹೆಗಡೆ ಅವರ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ ಎಂದು ಕಾದಿದ್ದೇನೆಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದರು.

ಇನ್ನೊಬ್ಬ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರುಬಿಜೆಪಿಯನ್ನುನಾಥೂರಾಂ ಗೋಡ್ಸೆ ಪಾರ್ಟಿಎಂಬುದಾಗಿ ಮರುನಾಮಕರಣ ಮಾಡಲು ಇದು ಸಕಾಲಎಂದು ಟ್ವೀಟ್ ಮಾಡಿದರು.
ಬ್ರಿಟಿಷರ ಚಮಚಾಗಳು ಮತ್ತು ಗೂಢಚಾರಿಗಳ ಕೇಡರಿನಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ಮಹಾತ್ಮ ಗಾಂಧಿಯವರಿಗಿಲ್ಲಎಂದು ಜೈವೀರ್ ಶೆರ್ಗಿಲ್ ಹೇಳಿದರು.

Monday, August 15, 2022

ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಅನುರಣನ

 ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಅನುರಣನ

ಬೆಂಗಳೂರು: ದೇಶದಾದ್ಯಂತ ೨೦೨೨ರ ಆಗಸ್ಟ್‌ ೧೫ರ ದಿನವಾದ ಸೋಮವಾರ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು. ಸ್ವತಂತ್ರ್ಯದ ೧೦೦ನೇ ವರ್ಷದ ವೇಳೆಗೆ ಭಾರತ ಸಾಧಿಸಬೇಕಾದ ಸಾಧನೆಗಾಗಿ ಮುಂದಿನ ೨೫ ವರ್ಷಗಳ ಮಾರ್ಗಸೂಚಿಯನ್ನು ನವದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ಭಾರತದ ಪ್ರಗತಿಗಾಗಿ ೫ ಪ್ರತಿಜ್ಞೆ, ಮಹಿಳೆಯರನ್ನು ಗೌರವಿಸುವುದಕ್ಕಾಗಿ ಸ್ಪಷ್ಟ ಕರೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಸ್ವೀಕರಿಸದಂತೆ ಸಾರ್ವಜನಿಕರಿಗೆ ಕರೆ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣದತ್ತ ಗಮನ ಹರಿಸುವಂತೆ ತಮ್ಮ ೮೩ ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಕರೆಕೊಟ್ಟರು.

ಪ್ರಧಾನಿ ಕರೆಯಂತೆ ಆಗಸ್ಟ್‌ ೧೩ರಿಂದಲೇ ಮನೆ ಮನೆಗಳಲ್ಲೂ ತ್ರಿವರ್ಣಧ್ವಜ ಹಾರಿಸುವುದರೊಂದಿಗೆ ಅಮೃತ ಮಹೋತ್ಸವ ಸಂಭ್ರಮ ಆರಂಭವಾದರೆ, ಸೋಮವಾರ ಧ್ವಜ ಸಂಚಲನ, ಧ್ವಜಾರೋಹಣ, ಸಾರ್ವಜನಿಕ ಸಮಾರಂಭ, ಮೆರವಣಿಗೆಗಳು, ಜಯಘೋಷಗಳೊಂದಿಗೆ ಅಮೃತ ಮಹೋತ್ಸವ ಸಂಭ್ರಮ ಕಳೆಕಟ್ಟಿತು. ಕಾಂಗ್ರೆಸ್‌ ಪಕ್ಷದ ವತಿಯಿಂದ ಸಂಘಟಿಸಲಾದ ಸ್ವಾತಂತ್ರ್ಯ ನಡಿಗೆಗೂ ಜನಸ್ಪಂದನೆ ವ್ಯಕ್ತವಾಯಿತು.


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ  ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಾತಂತ್ರ ಸಂಭ್ರಮಾಚರಣೆ ನಡೆಯಿತು. ಹಿರಿಯ ಶಿಕ್ಷಕಿ ಲಕ್ಷ್ಮಮ್ಮ ಧ್ವಜಾರೋಹಣ ನೆರವೇರಿಸಿದರು. ಜಿ.ಕೆ. ನಾಯ್ಡು ಶಾಲೆಯ ಮಕ್ಕಳು ಧ್ವಜಸಂಚಲನ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಶ್ರೀ ಬಾಲಾಜಿ ಕೃಪಾ ಬಡಾವಣೆಯ ಸ್ವಾತಂತ್ರ್ಯ ಅಮೃತೋತ್ಸವ ಸಂಭ್ರಮದ ವಿಡಿಯೋವನ್ನು ಮೇಲೆ ನೋಡಿರಿ.

ವಿಶ್ವದಾದ್ಯಂತ ಪ್ರಮುಖ ಕಟ್ಟಡಗಳು ಭಾರತೀಯ ಧ್ವಜದ ಮೂರು ಬಣ್ಣಗಳ ಬೆಳಕಿನ ಅಲಂಕಾರಗಳಲ್ಲಿ ಕಂಗೊಳಿಸಿದವು. (ಕೆಳಗಿನ ವಿಡಿಯೋ ನೋಡಿ)


Friday, August 14, 2020

ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

 ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

ನವದೆಹಲಿ: ಜಗತ್ತನ್ನು ಬಾಧಿಸಿರುವ ಕೊರೋನಾ ಸಂಕಷ್ಟವನ್ನು ಎದುರಿಸಲು ಅರ್ಥ (ಹಣಕಾಸು) ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಅತ್ಯಂತ ಮುಖ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಆಗಸ್ಟ್ 14ರ ಶುಕ್ರವಾರ ಹೇಳಿದರು.

೭೪ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರಕೃತಿಯು ಮಾನವರಿಗೆ ಆಧೀನವಾಗಿದೆ ಎಂಬ ಮಿಥ್ಯೆಯನ್ನು ಕಣ್ಣಿಗೆ ಕಾಣದ ವೈರಸ್ ಒಡೆದಿದೆ. ಪ್ರಕೃತಿಯೊಂದಿಗೆ ಸೌಹಾರ್ದವನ್ನು ಆಧರಿಸಿದ ಬದುಕಿನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಸಮರ್ಪಕ ದಾರಿಯಲ್ಲಿ ಸಾಗಲು ಮನುಷ್ಯರಿಗೆ ಈಗಲೂ ಅವಕಾಶವಿದೆ ಎಂಬುದು ನನ್ನ ನಂಬಿಕೆ ಎಂದು ನುಡಿದರು.

೨೦೨೦ನೇ ವರ್ಷದಲ್ಲಿ ನಾವೆಲ್ಲರೂ ಅತ್ಯಂತ ಮಹತ್ವದ ಪಾಠಗಳನ್ನು ಕಲಿತಿದ್ದೇವೆ. ಹವಾಮಾನ ಬದಲಾವಣೆಯಂತೆಯೇ, ವಿಶ್ವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹಣೆಬರಹವೂ ಪರಸ್ಪರ ಜೋಡಿಕೊಂಡಿದೆ ಎಂಬ ಪ್ರಜ್ಞೆಯನ್ನು ಸಾಂಕ್ರಾಮಿಕವು ಮೂಡಿಸಿದೆ. ಆದ್ದರಿಂದ ಹಣಕಾಸು ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಮುಖ್ಯ ಎಂದು ನನ್ನ ನಂಬಿಕೆ ಎಂದು ಅವರು ಹೇಳಿದರು.

ಕೊರೋನಾವೈರಸ್ ವಿರುದ್ಧದ ಹೋರಾಟದ ವೇಳೆಯಲ್ಲಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸುವ ಅಗತ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ. ಹಾಲಿ ಬಿಕ್ಕಟ್ಟು, ಪ್ರತಿಯೊಬ್ಬನ ಹಿತಾಸಕ್ತಿ, ಮುಖ್ಯವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಮರ್ಪಕ ಸುಧಾರಣೆಗಳನ್ನು ತರುವ ಅವಕಾಶವನ್ನು ಒದಗಿಸಿದೆ ಎಂದು ಕೋವಿಂದ್ ನುಡಿದರು.

ವರ್ಷದ ಸ್ವಾತಂತ್ರ್ಯ ದಿನವು ಕೋವಿಡ್-೧೯ ಉಂಟುಮಾಡಿರುವ ಹಿಂದೆಂದೂ ಕಾಣದ ಬಿಕ್ಕಟ್ಟಿನ ಮಧ್ಯೆ ಬಂದಿದೆ. ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಸೇರುವುದನ್ನು ನಿವಾರಿಸಲು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಮಾರ್ಗಸೂಚಿ ಹೊರಡಿಸಿದೆ ಎಂದು ಅವರು ಹೇಳಿದರು.

೭೪ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಒಳಗೆ ಮತ್ತು ಹೊರಗಿರುವ ಭಾರತದ ಎಲ್ಲ ಜನರನ್ನು ಅಭಿನಂದಿಸಲು ನನಗೆ ಅತ್ಯಂತ ಸಂತಸವಾಗುತ್ತದೆ. ಸ್ವತಂತ್ರ ರಾಷ್ಟ್ರದ ಪ್ರಜೆಗಳಾಗಿರುವುದಕ್ಕೆ ಯುವ ಭಾರತವು ವಿಶೇಷವಾಗಿ ಹೆಮ್ಮೆ ಪಡಬೇಕು ಎಂದು ಅವರು ನುಡಿದರು.

ಮಹಾತ್ಮ ಗಾಂಧಿಯವರು ನಮ್ಮ ಸ್ವಾತಂತ್ರ್ಯ ಚಳವಳಿಯ ಮಾರ್ಗದರ್ಶಿ ಬೆಳಕಾಗಿದ್ದರು ಎಂಬುದು ನಮ್ಮ ಅದೃಷ್ಟ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರಿಗೆ ಇದ್ದ ಆಸ್ಥೆ ನಮ್ಮ ಗಣರಾಜ್ಯದ ಮಂತ್ರವಾಗಿದೆ. ಗಾಂಧೀಜಿಯವರನ್ನು ಪುನಃ ಕಂಡುಕೊಳ್ಳುತ್ತಿರುವ ಯುವ ತಲೆಮಾರನ್ನು ನೋಡಲು ನನಗೆ ಸಂತಸವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.

ಅತ್ಯಂತ ಜನ ನಿಬಿಡವಾಗಿರುವ ನಮ್ಮ ವಿಶಾಲವಾದ ದೇಶದಲ್ಲಿ ವಿವಿಧ ಸಂದರ್ಭಗಳ ನಡುವೆ ಸಾಂಕ್ರಾಮಿಕದ ಮುಂದಿಟ್ಟಿರುವ ಸವಾಲು ಎದುರಿಸಲು ಅಸಾಧಾರಣ ಯತ್ನಗಳು ನಮಗೆ ಬಲನೀಡಿವೆ. ರಾಜ್ಯ ಸರ್ಕಾರಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ ನಿರ್ವಹಿಸುತ್ತಿದ್ದರೆ, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೋವಿಂದ್ ನುಡಿದರು.

ಸಾಂಕ್ರಾಮಿಕದ ಬಲವಾದ ಪೆಟ್ಟು ಬಡವರು, ದಿನಗೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಬಿಕ್ಕಟ್ಟಿನ ಯುಗದಲ್ಲಿ ಸಾಂಕ್ರಾಮಿಕವನ್ನು ತಡೆಯುವ ಯತ್ನಗಳ ಜೊತೆಗೇ ಹಲವಾರು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನಾ ಜಾರಿಯ ಮೂಲಕ ಸಾಂಕ್ರಾಮಿಕದ ಪರಿಣಾಮವಾಗಿ ಉದ್ಯೋಗ ಕಳೆದುಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುವ, ಬದುಕು ಅಸ್ತವ್ಯಸ್ತಗೊಂಡಿರುವವರ ನೋವು ತಗ್ಗಿಸಲು ಯತ್ನಿಸುವ ಮೂಲಕ ಕೋಟ್ಯಂತರ ಜನರಿಗೆ ಸರ್ಕಾರವು ಬದುಕು ಕಲ್ಪಿಸಿದೆ ಎಂದು ರಾಷ್ಟ್ರಪತಿ ನುಡಿದರು.


ಯಾವುದೇ ಕುಟುಂಬವೂ ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕಾಗಿ ಅಗತ್ಯವುಳ್ಳ ಜನರಿಗೆ ಉಚಿತ ಧಾನ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳೂ ಸುಮಾರು ೮೦ ಕೋಟಿ ಜನರಿಗೆ ಅಭಿಯಾನದ ಮೂಲಕ ಪಡಿತರ ಖಾತರಿ ನೀಡಲಾಗಿದೆ ಎಂದು ಕೋವಿಂದ್ ವಿವರಿಸಿದರು.

ಸಾಂಕ್ರಾಮಿಕದ ಪರಿಣಾಮವಾಗಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಜಗತ್ತಿನ ಯಾವುದೇ ಮೂಲೆಯಲ್ಲಿರುವ ನಮ್ಮ ಜನರ ನೆರವಿಗಾಗಿ ಸರ್ಕಾರ ವಂದೇ ಭಾರತ ಮಿಷನ್ ಮೂಲಕ ನೆರವಾಗುತ್ತಿದ್ದು ಅಂತಹ ಲಕ್ಷಾಂತರ ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತರಲಾಗಿದೆ ಎಂದು ಅವರು ಹೇಳಿದರು.

ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ದಿಟ್ಟ ಯೋಧರು ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಭಾರತ ಮಾತೆಯ ಮಕ್ಕಳು ರಾಷ್ಟ್ರದ ಗೌರವಕ್ಕಾಗಿ ಬದುಕುತ್ತಿದ್ದಾರೆ ಮತ್ತು ಹುತಾತ್ಮರಾಗುತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಬಲಿದಾಕ್ಕಾಗಿ ಇಡೀ ರಾಷ್ಟ್ರವೇ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಕೃತಜ್ಞತೆಯ ಭಾವನೆ ಹೊಂದಿದ್ದಾರೆ ಎಂದು ಕೋವಿಂದ್ ನುಡಿದರು.

ಭಾರತದ ಸ್ವಾವಲಂಬನೆ ಎಂದರೆ ಸ್ವಾವಲಂಬಿಯಾಗಲು ಸಮರ್ಥವಾಗುವುದು, ವಿಶ್ವದಿಂದ ಬೇರ್ಪಡುವುದು ಅಥವಾ ಅಂತರ ನಿರ್ಮಿಸುವುದು ಎಂದಲ್ಲ. ಜಾಗತಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾರತವು ಪಾಲ್ಗೊಳ್ಳುವುದು ಮತ್ತು ಅಲ್ಲಿ ತನ್ನ ವಿಶಿಷ್ಟ ಗುರುತನ್ನು ಉಳಿಸಿಕೊಳ್ಳುವುದು ಕೂಡಾ ಸ್ವಾವಲಂಬನೆಯ ಅರ್ಥವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

Advertisement