ಮಂಗಳನ
ಅಂಗಳದಲ್ಲಿದೆ ಕೀಟ, ಸರೀಸೃಪಗಳ ಜೀವಜಾಲ..!
ವಿಜ್ಞಾನಿಗಳಿಂದ
ಫೋಟೊ ದಾಖಲೆ ಸಹಿತ ಪ್ರತಿಪಾದನೆ
ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಜೀವಿಗಳ ವಾಸ್ತವ್ಯ ಪತ್ತೆಗಾಗಿ ಹಲವು ವರ್ಷಗಳಿಂದ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಿರುವುದರ ಮಧ್ಯೆ, ಅಮೆರಿಕದ ಓಹಿಯೊ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ಮಂಗಳನ ಅಂಗಳದಲ್ಲಿ ಕೀಟದ ರೀತಿಯ ಜೀವಿಗಳು ಇದ್ದವು ಮತ್ತು ಈಗಲೂ ಇವೆ ಎಂಬುದಾಗಿ ಫೋಟೋ ದಾಖಲೆಗಳ ಸಾಕ್ಷ್ಯವನ್ನು ಮುಂದಿಟ್ಟು ಪ್ರತಿಪಾದಿಸಿದರು.
ಕೆಂಪು
ಗ್ರಹದ ಮೇಲೆ ಓಡಾಟ ನಡೆಸಿರುವ ರೋವರ್ಗಳು ತೆಗೆದಿರುವ ಚಿತ್ರಗಳನ್ನು ಆಧಾರವಾಗಿಟ್ಟು ಅಧ್ಯಯನ ನಡೆಸಿರುವ ಪ್ರೊ.ಎಮಿರಿಟಸ್ ವಿಲಿಯಮ್ ರೊಮೊಸರ್, ದುಂಬಿ ಹಾಗೂ ಹಲ್ಲಿಗಳ ಅವಶೇಷಗಳಂತೆ ಕಾಣುವ ರಚನೆಗಳು ಮಂಗಳ ಗೃಹದಲ್ಲಿ ಇರುವುದನ್ನು ಗುರುತಿಸಿರುವುದಾಗಿ ಪ್ರಕಟಿಸಿದರು.
‘ಮಂಗಳ
ಗ್ರಹದಲ್ಲಿ ಜೀವಿಗಳು ಇದ್ದವು, ಅಷ್ಟೇ ಅಲ್ಲ ಈಗಲೂ ಇವೆ’ ಎಂದು ಸಂಶೋಧಕ ರೊಮೊಸರ್ ಹೇಳಿದರು.
ಮಂಗಳನ
ಅಂಗಳದಲ್ಲಿ ಓಡಾಡಿರುವ, ರೋವರ್ಗಳು ಅದರಲ್ಲೂ ವಿಶೇಷವಾಗಿ ನಾಸಾದ ’ಕ್ಯೂರಿಯಾಸಿಟಿ’ ರೋವರ್
ಅಲ್ಲಿನ ಜೈವಿಕ ಚಟುವಟಿಕೆಗಳ ಮೇಲೆ ನಿಗಾವಹಿಸಿ ತೆಗೆದಿರುವ ಚಿತ್ರಗಳಲ್ಲಿ ಭೂಮಿಯ ಮೇಲಿನ ಜೀವಿಗಳಿಗೆ ಸಾಮ್ಯತೆ ಇರುವಂತೆ ಕಾಣುವ ಕೀಟಗಳು ಹಾಗೂ ಸರೀಸೃಪಗಳ ರಚನೆಗಳು ಸ್ಪಷ್ಟವಾಗಿ ಕಂಡು ಬರುತ್ತಿವೆ ಎಂದು ಅವರು ಹೇಳಿದರು.
ಕೀಟಗಳ
ರೆಕ್ಕೆ, ಕಾಲುಗಳು, ಆಂಟೆನಾ ಒಳಗೊಂಡ ರಚನೆಗಳನ್ನು ಚಿತ್ರಗಳಲ್ಲಿ ಸೂಕ್ಷ್ಮವಾಗಿ ಗಮನಿಸಲಾಗಿದೆ. ಫೋಟೊಗಳನ್ನು ಹಲವು ಹಂತಗಳಲ್ಲಿ ಉತ್ತಮ ಪಡಿಸಿ ಅಧ್ಯಯನ ನಡೆಸಲಾಗಿದ್ದು, ಹೊಳೆಯುವ ಕಣ್ಣುಗಳು ಈಗಲೂ ಜೀವ ಸಂಕುಲದ ಇರುವಿಕೆಯನ್ನು ಸೂಚಿಸುತ್ತಿದೆ ಎಂದು ಸಂಶೋಧಕರು ವಿಶೇಷಣೆ ಮಾಡಿದರು.
ಕೀಟಗಳಂತಹ
ಜೀವಿಗಳು ಮಂಗಳ ಗ್ರಹದಲ್ಲಿ ಇರುವುದಾದರೆ, ಅದಕ್ಕೆ ಅಗತ್ಯವಿರುವ ಆಹಾರ ಮೂಲ, ಅದನ್ನು ಅವಲಂಬಿಸಿರುವ ಜೀವಿಗಳು, ನೀರು ಮತ್ತು ಜೀವಿಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣದ ಇರುವಿಕೆಯನ್ನೂ ಇದು ಸೂಚಿಸುತ್ತದೆ ಎಂದು ರೊಮೋಸರ್ ಅಭಿಪ್ರಾಯ ಪಟ್ಟರು.
ತಮ್ಮ
ಅಧ್ಯಯನದ ವಿವರವನ್ನು ಕೀಟ ಸಂಶೋಧಕ ರೊಮೊಸರ್ ಅವರು ಸೈಂಟ್ ಲೂಯಿಸ್ನಲ್ಲಿ ನಡೆದ ಅಮೆರಿಕದ ಕೀಟಶಾಸ್ತ್ರ ಸಂಸ್ಥೆಯ ಸಮ್ಮೇಳನದಲ್ಲಿ ಬಹಿರಂಗ ಪಡಿಸಿದರು.
ಸಮ್ಮೇಳನದ
ಬಳಿಕ ಓಹಿಯೋ ವಿಶ್ವವಿದ್ಯಾಲಯವು ಅಧ್ಯಯನದ ವಿವರಗಳನ್ನು ಬಹಿರಂಗ ಪಡಿಸಿದ್ದು, ಕೆಂಪುಗ್ರಹದಲ್ಲಿ ಜೀವಿಗಳು ಇವೆಯೇ ಎಂಬುದಾಗಿ ಪತ್ತೆ ಹಚ್ಚಲು ವಿಜ್ಞಾನಿಗಳು ಸತತವಾಗಿ ಶ್ರಮ ವಹಿಸುತ್ತಿರುವ ಈ ಹೊತ್ತಿನಲ್ಲಿ ರೊಮೊಸರ್
ಅವರ ಸಂಶೋಧನೆಯು ಮಂಗಳ ಗ್ರಹದಲ್ಲಿ ಜೀವಿಗಳು ಇರುವುದಕ್ಕೆ ಈಗಾಗಲೇ ಸಾಕ್ಷ್ಯ ಇರುವುದನ್ನು ತೋರಿಸಿದೆ. ಮಂಗಳ ಗ್ರಹದಲ್ಲಿ ಓಡಾಡಿದ ರೋವರ್ಗಳು ಕಳುಹಿಸಿರುವ ಫೊಟೋಗಳಿಗೆ ಧನ್ಯವಾದಗಳು ಎಂದು ಹೇಳಿದೆ.
ಓಹಿಯೋ
ವಿಶ್ವವಿದ್ಯಾಲಯದ ಪ್ರಕಾರ ಡಾ. ರೊಮೊಸರ್ ಅವರು ಮಂಗಳ ಗ್ರಹದಿಂದ ರೋವರ್ಗಳು ಕಳುಹಿಸಿದ ಅಂತರ್ಜಾಲದಲ್ಲಿ ಲಭ್ಯವಿದ್ದ ಫೋಟೋಗಳನ್ನು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ ಮತ್ತು ಕೀಟಗಳಂತಹ ರಚನೆಗಳನ್ನು ಅವುಗಳಲ್ಲಿ ಪತ್ತೆ ಮಾಡಿದ್ದಾರೆ.
ಇವುಗಳ ಕೀಟಗಳು ಹಾಗೂ ಸರೀಸೃಪದಂತಹ ರಚನೆಗಳಿದ್ದು ಪಳೆಯುಳಿಕೆಗಳು ಮತ್ತು ಜೀವಂತ ಕೀಟ, ಸರೀಸೃಪಗಳ ರಚನೆಗಳೂ ಕಂಡು ಬಂದಿವೆ ಎಂದು ಓಹಿಯೋ ವಿಶ್ವ ವಿದ್ಯಾಲಯ ತಿಳಿಸಿದೆ.
ಇವುಗಳ ಕೀಟಗಳು ಹಾಗೂ ಸರೀಸೃಪದಂತಹ ರಚನೆಗಳಿದ್ದು ಪಳೆಯುಳಿಕೆಗಳು ಮತ್ತು ಜೀವಂತ ಕೀಟ, ಸರೀಸೃಪಗಳ ರಚನೆಗಳೂ ಕಂಡು ಬಂದಿವೆ ಎಂದು ಓಹಿಯೋ ವಿಶ್ವ ವಿದ್ಯಾಲಯ ತಿಳಿಸಿದೆ.
ಕೀಟಗಳು,
ಸರೀಸೃಪಗಳ ಅಸ್ತಿತ್ವವು ಮಂಗಳ ಗ್ರಹದಲ್ಲಿ ಸುಸ್ಥಿರ ಜೀವನಕ್ಕೆ ಬೇಕಾದ ಇಂಧನ ಮೂಲ, ಆಹಾರ ಮತ್ತು ನೀರಿನ ಲಭ್ಯತೆಯ ಸುಳಿವು ನೀಡಿದೆ ಎಂದು ಡಾ. ರೊಮೊಸರ್ ಹೇಳಿದ್ದಾರೆ.
No comments:
Post a Comment