Friday, November 22, 2019

ಅಯೋಧ್ಯಾ: ಕಾಂಗ್ರೆಸ್‌ಗೆ ಕುಟುಕಿದ ಅಮಿತ್ ಶಾ

ಅಯೋಧ್ಯಾ: ಕಾಂಗ್ರೆಸ್ಗೆ ಕುಟುಕಿದ ಅಮಿತ್ ಶಾ
ಜಾರ್ಖಂಡ್ ಚುನಾವಣಾ ಸಭೆಯಲ್ಲಿ ತರಾಟೆ
ನವದೆಹಲಿ: ಕಾಂಗ್ರೆಸ್ ವಿರುದ್ಧ ತಮ್ಮ ದಾಳಿಯನ್ನು 2019 ನವೆಂಬರ್ 21ರ ಗುರುವಾರ ತೀವ್ರಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟಿನಲ್ಲಿ ಅಯೋಧ್ಯಾ ವಿವಾದ ಕುರಿತ ತೀರ್ಪು ವಿಳಂಬಗೊಳ್ಳುವಂತೆ ತಡೆದಿತ್ತುಎಂದು ಟೀಕಿಸಿದರು. ಸುಪ್ರೀಂಕೋರ್ಟ್ ಅಂತಿಮವಾಗಿ ಇತ್ತೀಚೆಗೆ ರಾಮಮಂದಿರ ನಿರ್ಮಾಣದ ಪರವಾಗಿ ತನ್ನ ತೀರ್ಪು ನೀಡಿತ್ತು.

ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಅಯೋಧ್ಯೆಯಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಯಸುತ್ತಾನೆ. ಆದರೆ ಕಾಂಗ್ರೆಸ್ ಪಕ್ಷವು ಪ್ರಕರಣ ಮುಂದುವರೆಯಲು ಬಿಡುತ್ತಿರಲಿಲ್ಲಎಂದು ನವೆಂಬರ್ ೩೦ರಿಂದ ಹಂತಗಳ ಚುನಾವಣೆ ನಡೆಯಲಿರುವ ಜಾರ್ಖಂಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಅಮಿತ್ ಶಾ ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ರಾಜಕೀಯ ಸಭೆಯೊಂದರಲ್ಲಿ ಬಿಜೆಪಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಮಾತನಾಡಿದ್ದು ಇದೇ ಮೊದಲು.

ಸರ್ವಾನುಮತದ ತೀರ್ಪು ನೀಡಿದ್ದಕ್ಕಾಗಿ ಶಾ ಅವರು ಸುಪ್ರೀಂಕೋರ್ಟನ್ನು ಶ್ಲಾಘಿಸಿದರು.
ರಾಮಜನ್ಮಭೂಮಿ ನಿವೇಶನದಲ್ಲಿ ರಾಮಮಂದಿರವನ್ನು ನಿರ್ಮಿಸಬೇಕು ಎಂದು ಸುಪ್ರೀಂಕೋರ್ಟ್ ಬಹುಮತದ ತೀರ್ಪು ನೀಡಿದೆ. ಗಗನಚುಂಬಿಯಾದ ಭವ್ಯ ದೇಗುಲವನ್ನು ಅಲ್ಲಿ ನಿರ್ಮಿಸಲಾಗುವುದು’ ಎಂದು ಅಮಿತ್ ಶಾ ಲಾಟೆಹರದಲ್ಲಿ ನಡೆದ ಸಭೆಯಲ್ಲಿ ನುಡಿದರು. ನ್ಯಾಯಾಲಯದ ತೀರ್ಪು ರಾಮಮಂದಿರ ನಿರ್ಮಾಣದ ಹಾದಿಯಲ್ಲಿದ್ದ ಅಡೆತಡೆಗಳನ್ನು ನಿವಾರಿಸಿತು ಎಂದೂ ಅವರು ನುಡಿದರು.

ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಂಗಳಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ಸದರಿ ನಿವೇಶನದಲ್ಲಿ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಿ ತೀರ್ಪು ನೀಡಿತ್ತು. ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ಬಾಬರಿ ಮಸೀದಿಯನ್ನು ಅಕ್ರಮವಾಗಿ ನಾಶಪಡಿಸಿದ್ದಕ್ಕಾಗಿ ಅಯೋಧ್ಯಾ ದೇಗುಲ ನಗರಿಯಲ್ಲೇ ಮಸೀದಿ ನಿರ್ಮಾಣಕ್ಕೆ ಎಕರೆ ಪರ್ಯಾಯ ಭೂಮಿ ನೀಡುವಂತೆಯೂ ಸರ್ಕಾರಕ್ಕೆ ಆದೇಶ ನೀಡಿತ್ತು.

ನಾವು ಕೂಡಾ ವಿಚಾರವನ್ನು ನ್ಯಾಯಾಲಯ ತೀರ್ಮಾನಿಸಬೇಕು ಎಂದು ಬಯಸಿದ್ದೆವು. ಸುಪ್ರೀಂಕೋರ್ಟ್ ತೀರ್ಪು ವಿವಾದಕ್ಕೆ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಅಂತ್ಯವನ್ನು ತಂದುಕೊಟ್ಟಿದೆಎಂದು ಶಾ ಹೇಳಿದರು.

ಬಿಜೆಪಿಯ ರಾಜಕೀಯ ಕಾರ್ಯಸೂಚಿಯಲ್ಲಿ ಹಲವಾರು ವರ್ಷಗಳಿಂದ ಇದ್ದ ಮಂದಿರ ನಿರ್ಮಾಣದ ವಿಷಯವನ್ನು ಮಾತ್ರವೇ ಅಲ್ಲ, ಕಾಶ್ಮೀರ ವಿಷಯವನ್ನೂ ಕಾಂಗ್ರೆಸ್ ವಿರುದ್ಧದ ತಮ್ಮ ದಾಳಿಗೆ  ಬಿಜೆಪಿ ಅಧ್ಯಕ್ಷರು ಬಳಸಿಕೊಂಡರು.

ಕಾಂಗ್ರೆಸ್ ಪಕ್ಷವು ಕಾಶ್ಮೀರ ಸಮಸ್ಯೆಯನ್ನು ಕೂಡಾ ತನ್ನ ವೋಟು ಬ್ಯಾಂಕ್ ರಕ್ಷಣೆಗಾಗಿ ೭೦ ವರ್ಷಗಳಿಂದ ನೆನೆಗುದಿಯಲ್ಲಿ ಇಟ್ಟಿತ್ತು ಎಂದು ಶಾ ಆಪಾದಿಸಿದರು.

ಕಾಶ್ಮೀರ ವಿಷಯಕ್ಕೆ ತಮ್ಮ ಪಕ್ಷವು ನೀಡಿದ ಮಹತ್ವವನ್ನು ಒತ್ತಿ ಹೇಳಿದ ಶಾ, ಮೋದಿ ಸರ್ಕಾರವು ಎರಡನೇ ಅವಧಿಗೆ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಬಳಿಕ ಮೊದಲ ಸಂಸತ್ ಅಧಿವೇಶನದಲ್ಲೇ ಸಂವಿಧಾನದ ೩೭೦ ಮತ್ತು ೩೫ ವಿಧಿಗಳನ್ನು ರದ್ದು ಪಡಿಸಿತು ಎಂದು ಬಿಜೆಪಿ ಅಧ್ಯಕ್ಷ ಹೇಳಿದರು.

ಹಿಂದಿನ ಸರ್ಕಾರಗಳು ಹಲವಾರು ವರ್ಷಗಳವರೆಗೆ ನೆನೆನಗುದಿಯಲ್ಲಿ ಇಟ್ಟಿದ್ದ ಸಮಸ್ಯೆಗಳನ್ನು ಪ್ರಧಾನಿಯವರು ಒಂದಾದ ಬಳಿಕ ಒಂದರಂತೆ ಬಗೆಹರಿಸುತ್ತಿದ್ದಾರೆ ಎಂದು ಶಾ ನುಡಿದರು.

ಮುಖ್ಯಮಂತ್ರಿ ರಘುಬರದಾಸ್ ಅವರಿಗೆ ಎರಡನೇ ಅವಧಿಗಾಗಿ ಪಕ್ಷದ ಉನ್ನತ ಸ್ವರೂಪದ ಚುನಾವಣಾ ಪ್ರಚಾರಕ್ಕ್ನೆ ತಮ್ಮ ಸರಣಿ ಸಭೆಗಳ ಮೂಲಕ ಪಕ್ಷಾಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಿದರು.

ರಾಜ್ಯದ ಮೊತ್ತ ಮೊದಲ ಬುಡಕಟ್ಟು ಜನಾಂಗೇತರ ಮುಖ್ಯಮಂತ್ರಿಯಾದ ರಘುಬರದಾಸ್ ಅವರ ಬಗ್ಗೆ ಹೊಗಳಿಕೆಯ ಸುರಿಮಳೆಯನ್ನೇ ಶಾ ಸುರಿಸಿದರು.

೨೦೦೦ದಲ್ಲಿ ಬಿಹಾರದಿಂದ ಪ್ರತ್ಯೇಕಗೊಂಡ ಜಾರ್ಖಂಡ್ ರಾಜ್ಯದಲ್ಲಿ ಐದು ವರ್ಷಗಳ ಅವಧಿಯನ್ನು ಪೂರೈಸಿದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ರಘುಬರದಾಸ್ ಪಾತ್ರರಾಗಿದ್ದಾರೆ.

ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ನವೆಂಬರ್ ೩೦ರಂದು ನಡೆಯಲಿದ್ದರೆ, ಡಿಸೆಂಬರ್ ೬ರಂದು ಎರಡನೇ ಹಂತದ ಚುನಾವಣೆ, ಡಿಸೆಂಬರ್ ೧೨ರಂದು ಮೂರನೇ ಹಂತದ ಚುನಾವಣೆ,  ಡಿಸೆಂಬರ್ ೧೬ರಂದು ನಾಲ್ಕನೇ ಹಂತದ ಚುನಾವಣೆ ಮತ್ತು ಡಿಸೆಂಬರ್ ೨೦ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ.

ಡಿಸೆಂಬರ್ ೨೩ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕಾಂಗ್ರೆಸ್ ಪಕ್ಷವು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಜೊತೆಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿ ವಿರುದ್ಧ ಸೆಣಸಾಟಕ್ಕೆ ಇಳಿದಿದೆ.

೨೦೧೪ರಲ್ಲಿ ೪೩ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ರಘುಬರದಾಸ್ ನೇತೃತ್ವದಲ್ಲಿ ಸ್ಥಾನಗಳನ್ನು ಗೆದ್ದಿದ್ದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ಯು) ಜೊತೆಗೆ ಸರ್ಕಾರವನ್ನು ರಚಿಸಿತ್ತು.

No comments:

Advertisement