ಭಾರತದ
ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ
ಎರಡು
ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ತೆರಿಗೆ ಸಂಗ್ರಹ
ನವದೆಹಲಿ:
ಆರ್ಥಿಕ ಹಿನ್ನಡೆ ಮತ್ತು ಕಾಪೋರೇಟ್ ತೆರಿಗೆ ಕಡಿತದ ಮಧ್ಯೆ, ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಕಾರ್ಪೋರೇಟ್ ಮತ್ತು ಆದಾಯ ತೆರಿಗೆ ಸಂಗ್ರಹ ಪ್ರಸಕ್ತ ವರ್ಷದಲ್ಲಿ ಕುಸಿಯುವ ಸಾಧ್ಯತೆಗಳಿವೆ ಎಂದು ಸುಮಾರು ಅರ್ಧ ಡಜನ್ ತೆರಿಗೆ ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಕ್ಕೆ 2020 ಜನವರಿ
24ರ ಶುಕ್ರವಾರ ತಿಳಿಸಿದರು.
ಪ್ರಧಾನಿ
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮಾರ್ಚ್ ೩೧ರಂದು ಮುಕ್ತಾಯಗೊಳ್ಳುತ್ತಿರುವ ಪ್ರಸಕ್ತ ವರ್ಷದಲ್ಲಿ ಕಳೆದ ಆರ್ಥಿಕ ವರ್ಷಕ್ಕಿಂತ ಶೇಕಡಾ ೧೭ರಷ್ಟು ಹೆಚ್ಚು ಅಂದರೆ ೧೩.೫ ಲಕ್ಷ
ಕೋಟಿ ರೂಪಾಯಿಗಳಷ್ಟು (ಡಾಲರ್ ೧೮೯ ಬಿಲಿಯನ್) ನೇರ ತೆರಿಗೆ ಸಂಗ್ರಹದ ಗುರಿ ಇಟ್ಟಿದೆ.
ಆದಾಗ್ಯೂ,
ಬೇಡಿಕೆಯಲ್ಲಿನ ಭಾರೀ ಕುಸಿತವು ವ್ಯವಹಾರಕ್ಕೆ ಪೆಟ್ಟು ಕೊಟ್ಟಿದ್ದು, ಕಂಪೆನಿಗಳು ಹೂಡಿಕೆ ಮತ್ತು ನೌಕರಿ ಕಡಿತ ಮಾಡುತ್ತಿರುವುದರ ಪರಿಣಾಮವಾಗಿ ತೆರಿಗೆ ಸಂಗ್ರಹಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಸರ್ಕಾರವು ಈ ಹಣಕಾಸು ವರ್ಷಕ್ಕೆ
ಶೇಕಡಾ ೫ರಷ್ಟು ಪ್ರಗತಿಯ ನಿರೀಕ್ಷೆ ಇಟ್ಟುಕೊಂಡಿದ್ದು, ಇದು ಹನ್ನೊಂದು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ತೆರಿಗೆ
ಇಲಾಖೆಯು ಜನವರಿ ೨೩ರ ವೇಳೆಗೆ ಕೇವಲ ೭.೩ ಲಕ್ಷ
ಕೋಟಿ ತೆರಿಗೆ ಸಂಗ್ರಹಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ ೫.೫ ಕ್ಕಿಂತಲೂ
ಕಡಿಮೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಂಪೆನಿಗಳಿಂದ
ಮೊದಲ ಮೂರು ತ್ರೈಮಾಸಿಕಗಳಿಗೆ ಮುಂಗಡ ತೆರಿಗೆಗಳನ್ನು ಸಂಗ್ರಹಿಸಿದ ಬಳಿಕ ಅಂತಿಮ ಮೂರು ತಿಂಗಳುಗಳಲ್ಲಿ ಶೇಕಡಾ ೩೦-೩೫ರಷ್ಟು
ನೇರ ತೆರಿಗೆಗಳನ್ನು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಕಳೆದ ಮೂರು ವರ್ಷಗಳ ಅಂಕಿ ಅಂಶಗಳು ತೋರಿಸಿವೆ.
ಆದರೆ,
ಸುದ್ದಿ ಸಂಸ್ಥೆಯು ಸಂದರ್ಶಿಸಿದ ಎಂಟು ಮಂದಿ ಹಿರಿಯ ತೆರಿಗೆ ಅಧಿಕಾರಿಗಳು, ತಮ್ಮ ಹರಸಾಹಸದ ಬಳಿಕವೂ ಪ್ರಸ್ತುತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ೨೦೧೮-೧೯ರ ಸಾಲಿನಲ್ಲಿ ಸಂಗ್ರಹಿಸಲಾಗಿದ್ದ ೧೧.೫ ಲಕ್ಷ
ಕೋಟಿಯಿಂದ ಕೆಳಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
‘ಗುರಿಯನ್ನು
ಮರೆತುಬಿಡಿ. ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತವನ್ನು ನಾವು ನೋಡುವುದು ಎರಡು ದಶಕಗಳಲ್ಲಿ ಇದೇ ಪ್ರಪ್ರಥಮವಾಗಲಿದೆ’ ಎಂದು
ತೆರಿಗೆ ಅಧಿಕಾರಿಯೊಬ್ಬರು ನುಡಿದರು.
೨೦೧೯ರ
ಸಾಲಿಗಾಗಿ ಪ್ರಸಕ್ತ ವರ್ಷದ ನೇರ
ತೆರಿಗೆ ಸಂಗ್ರಹವು ಶೇಕಡಾ ೧೦ಕ್ಕಿಂತಲೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಸರ್ಕಾರದ
ವಾರ್ಷಿಕ ಆದಾಯದಲ್ಲಿ ಶೇಕಡಾ ೮೦ರಷ್ಟು ಪಾಲು ನೇರ ತೆರಿಗೆಗಳಿಂದ ಬರುತ್ತದೆ. ಮತ್ತು ನೇರ ತೆರಿಗೆ ಸಂಗ್ರಹ ಕುಸಿತವು ಸರ್ಕಾರಕ್ಕೆ ವೆಚ್ಚಗಳಿಗೆ ಬೇಕಾದ ಹಣ ಒದಗಿಸಲು ಸಾಲ
ಪಡೆಯಬೇಕಾದ ಸ್ಥಿತಿಯನ್ನು ತಂದೊಡ್ಡಬಹುದು.
ಏಷಾದ
ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆಗೆ ಒತ್ತು ಕೊಡಲು ಹಾಗೂ ಉತ್ಪಾದಕರನ್ನು ಸೆಳೆಯುವ ಉದ್ದೇಶದಿಂದ ಕಳೆದ ವರ್ಷ ಮಾಡಲಾದ ಅಚ್ಚರಿದಾಯಕ ಕಾರ್ಪೋರೇಟ್ ತೆರಿಗೆ ಕಡಿತವು ತೆರಿಗೆ ಸಂಗ್ರಹ ಕುಸಿತಕ್ಕೆ ಇನ್ನೊಂದು ಕಾರಣ ಎಂದು ತೆರಿಗೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
No comments:
Post a Comment