Friday, February 14, 2020

ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಬ್ರಿಟನ್ನಿನ ನೂತನ ವಿತ್ತ ಸಚಿವ

ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಬ್ರಿಟನ್ನಿನ ನೂತನ ವಿತ್ತ ಸಚಿವ
ಲಂಡನ್: ಬ್ರೆಕ್ಸಿಟ್ ಅನುಷ್ಠಾನಗೊಂಡ ಕೆಲವೇ ವಾರಗಳಲ್ಲಿ ಸಾಜಿದ್ ಜಾವಿದ್ ಅವರು ರಾಜೀನಾಮೆ ಕೊಟ್ಟ ಬಳಿಕ ಇಂಗ್ಲೆಂಡಿನ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್  2020 ಫೆಬ್ರುವರಿ 13ರ ಗುರುವಾರ  ನೇಮಕಗೊಂಡರು.
ಬೊಕ್ಕಸದ ಮುಖ್ಯ ಕಾರ್ಯದರ್ಶಿಯಾಗಿದ್ದ ೩೯ರ ಹರೆಯದ ರಿಶಿ ಸುನಕ್ ಅವರಿಗೆ ಚಾನ್ಸಲರ್ ಆಫ್ ಎಕ್ಸ್ಚೆಕರ್ ಹುದ್ದೆಯು (ಭಾರತದ ವಿತ್ತ ಸಚಿವ ಹುದ್ದೆಗೆ ಸಮ)  ಅತ್ಯಂತ ಪ್ರತಿಷ್ಠಿತ ಬಡ್ತಿಯಾಗಿದೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸರ್ಕಾರದ ವಾರ್ಷಿಕ ಬಜೆಟ್ಗೆ ಒಂದು ತಿಂಗಳು ಮುಂಚಿತವಾಗಿ ಮಾಡಿದ ತಮ್ಮ ಸಂಪುಟ ಪುನಾರಚನೆಯಲ್ಲಿ ಈ ದೊಡ್ಡ ಬದಲಾವಣೆಯನ್ನು ಮಾಡಿದರು.
ರಿಶಿ ಸುನಕ್ ಅವರು ೨೦೧೫ರಲ್ಲಿ ಮೊತ್ತ ಮೊದಲಿಗೆ ಬ್ರಿಟಿಷ್ ಸಂಸತ್ತಿಗೆ ಚುನಾಯಿತರಾಗಿದ್ದರು. ಬೊಕ್ಕಸದ ಮುಖ್ಯ ಕಾರ್ಯದರ್ಶಿಯಾಗಿ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸುನಕ್ ಅವರು ಹಣಕಾಸು ಸಚಿವರಿಗೆ ಎರಡನೇ ಸಹಾಯಕರಾಗಿದ್ದು ಸರ್ಕಾರಿ ವೆಚ್ಚದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ರಾಜಕಾರಣ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ತೆರಳುವ ಮುನ್ನ ಸುನಕ್ ಅವರು ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿಗೆ ಸೇರಿದ್ದರು. ಅಮೆರಿಕದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಅವರು ಪಡೆದಿದ್ದರು.

ಸುನಕ್ ಅವರ ತಂದೆ ಒಬ್ಬ ವೈದ್ಯರಾಗಿದ್ದು, ತಾಯಿ ಕೆಮಿಸ್ಟ್ ಶಾಪ್ ನಡೆಸುತ್ತಿದ್ದಾರೆ. ರಾಜಕೀಯಕ್ಕೆ ಸೇರುವ ಮುನ್ನ ಸುನಕ್ ಅವರು ಗೋಲ್ಡ್ಮ್ಯಾನ್ ಸಚ್ಸ್ ಮತ್ತು ಹೆಜ್ ಫಂಡ್ನಲ್ಲಿ ಕೆಲಸ ಮಾಡಿದ್ದರು.

ಸುನಕ್ ಅವರು ಬಿಲಿಯನ್ ಪೌಂಡ್ ಜಾಗತಿಕ ಹೂಡಿಕಾ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದು ಸಣ್ಣ ಬ್ರಿಟಿಷ್ ವ್ಯವಹಾರದಲ್ಲಿನ ಹೂಡಿಕೆಯಲ್ಲಿ ಅವರು ವಿಶೇಷ ಪರಿಣತಿ ಪಡೆದಿದ್ದಾರೆ.

ಇಂಗ್ಲೆಂಡಿನಲ್ಲಿ
ಬ್ರೆಕ್ಸಿಟ್ ಪರಿಣಾಮವಾಗಿ ಸಣ್ಣ ವ್ಯವಹಾರಗಳು ಚೆನ್ನಾಗಿ ಬೆಳೆಯಬಲ್ಲವು ಎಂಬುದು ಸುನಕ್ ಅವರ ಬಲವಾದ ನಂಬಿಕೆ. ಏಕೆಂದರೆ ಬಹುತೇಕ ಬ್ರಿಟಿಷ್ ವ್ಯವಹಾರಗಳಿಗೆ (ಶೇಕಡಾ ೯೪ರಷ್ಟು) ಐರೋಪ್ಯ ಒಕ್ಕೂಟದ ಜೊತೆಗೆ ಯಾವುದೇ ಸಂಬಂಧವೂ ಇಲ್ಲವಾದರೂ ಅವುಗಳು ಐರೋಪ್ಯ ಒಕ್ಕೂಟದ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟಿದ್ದವು ಎಂಬುದು ಅವರ ವಾದ.

ನನ್ನ ಅಮ್ಮನ ಪುಟ್ಟ ಕೆಮಿಸ್ಟ್ ಶಾಪ್ನಲ್ಲಿನ ಕೆಲಸದಿಂದ ನನಗೆ ದೊಡ್ಡ ವ್ಯವಹಾರಗಳನ್ನು ನಡೆಸುವ ಅನುಭವ ಪ್ರಾಪ್ತವಾಗಿದೆ. ನಾವು ಹೇಗೆ ಮುಕ್ತ ವ್ಯವಹಾರ ಮತ್ತು ನವೋದ್ಯಮಶೀಲತೆಗೆ ಬೆಂಬಲ ನೀಡುವ ಮೂಲಕ ಬ್ರಿಟನ್ನಿನ ಭವಿಷ್ಯವನ್ನು ಭದ್ರ ಪಡಿಸಬಹುದು ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಎಂದು ಸುನಕ್ ಅವರು ಬ್ರೆಕ್ಸಿಟ್ ಜನಮತಗಣನೆಯ ವೇಳೆ ಹೇಳಿದ್ದರು.

ಸುನಕ್ ಪತ್ನಿ ಅಕ್ಷಿತಾ ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿಯಾಗಿದ್ದಾರೆ. ದಂಪತಿ ಜೋಡಿ ಕೃಷ್ಣಾ ಮತ್ತು ಅನುಷ್ಕಾ ಎಂಬ ಪುತ್ರಿಯರಿಬ್ಬರನ್ನು ಹೊಂದಿದೆ.

No comments:

Advertisement