ಲಕ್ನೋ
ಕೋರ್ಟ್ ಸಮುಚ್ಚಯದಲ್ಲಿಬಾಂಬ್
ಸ್ಫೋಟ:
೩ ವಕೀಲರಿಗೆ ಗಾಯ
೩ ವಕೀಲರಿಗೆ ಗಾಯ
ಲಕ್ನೋ:
ಲಕ್ನೋದ ಜಿಲ್ಲಾ ನ್ಯಾಯಾಲಯ ಸಮುಚ್ಚಯದಲ್ಲಿ 2020 ಫೆಬ್ರುವರಿ 13ರ ಗುರುವಾರ ಬಾಂಬ್ ಒಂದು ಸ್ಫೋಟಗೊಂಡಿದ್ದು, ಕನಿಷ್ಠ ಮೂವರು ವಕೀಲರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಜೀರ್
ಗಂಜ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಲಯ ಸಮುಚ್ಚಯದಲ್ಲಿ ಇತರ ಮೂರು ಸಜೀವ ಕಚ್ಚಾ ಬಾಂಬ್ಗಳೂ ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.
ವಕೀಲರ
ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ ವೇಳೆಯಲ್ಲಿ ಸ್ಫೋಟ ಸಂಭವಿಸಿತು. ತನ್ನನ್ನು ಗುರಿಯಾಗಿಸಿ ದಾಳಿ ನಡೆಯಿತು ಎಮದು ವಕೀಲರೊಬ್ಬರು ವರದಿಗಾರರ ಜೊತೆ ಮಾತನಾಡುತ್ತಾ ಪ್ರತಿಪಾದಿಸಿದರು ಎಂದು ವರದಿಗಳು ಹೇಳಿದವು.
ಸ್ಫೋಟದ
ಬಳಿಕ ನ್ಯಾಯಾಲಯ ಸಮುಚ್ಚಯದಲ್ಲಿ ಭಾರೀ ಗೊಂದಲ ಉಂಟಾಯಿತು. ವಕೀಲರು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಚ್ಚಾ
ಬಾಂಬ್ ಒಂದು ಸ್ಫೋಟಗೊಂಡರೆ, ಇತರ ಎರಡು ಸಜೀವ ಬಾಂಬ್ಗಳನ್ನು ನ್ಯಾಯಾಲಯದ ಆವರಣದಲ್ಲಿ ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದರು.
ಘಟನೆಯಲ್ಲಿ
ಮೂವರು ವಕೀಲರು ಗಾಯಗೊಂಡಿದ್ದಾರೆ. ಎರಡು ಗುಂಪುಗಳ ನಡುವಣ ಪೈಪೋಟಿಯ ಪರಿಣಾಮವಾಗಿ ಈ ಘರ್ಷಣೆ ಸಂಭವಿಸಿತು
ಎಂದು ಪೊಲೀಸರು ಹೇಳಿದರು.
ಭಾರೀ
ಸಂಖ್ಯೆಯ ಭದ್ರತಾ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಲಕ್ನೋ
ಬಾರ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಸಂಜೀವ ಕುಮಾರ್ ಲೋಧಿ ಅವರು ತಾವು ದಾಳಿಯ ಗುರಿಯಾಗಿದ್ದುದಾಗಿ ಹೇಳಿದರು. ತಾನು ಕೆಲವು ನ್ಯಾಯಾಂಗ ಅಧಿಕಾರಿಗಳ ಬಗ್ಗೆ ದೂರು ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಸುಮಾರು ೧೦ ಮಂದಿ ತಮ್ಮ
ಕೊಠಡಿಯ ಹೊರಗೆ ಬೆಳಗ್ಗೆ ೧೧.೩೦ರ ಸುಮಾರಿಗೆ
ಬಾಂಬ್ಗಳನ್ನು ಎಸೆದರು ಎಂದು ಲೋಧಿ ಹೇಳಿದರು.
ದಾಳಿಯಲ್ಲಿ
ನಾನು ಮತ್ತು ಇತರ ಇಬ್ಬರು ವಕೀಲರು ಗಾಯಗೊಂಡಿದ್ದಾರೆ. ಒಂದು ಬಾಂಬ್ ಸ್ಫೋಟಗೊಂಡರೆ, ಇನ್ನೆರಡು ಸ್ಫೋಟಗೊಳ್ಳದೆ ಬಿದ್ದಿವೆ ಎಂದು ಅವರು ನುಡಿದರು.
ಜಿಲ್ಲಾ
ನ್ಯಾಯಾಲಯಗಳು ಇರುವ ಕಲೆಕ್ಟೋರೇಟ್ ಆವರಣದ ಭದ್ರತಾ ವ್ಯವಸ್ಥೆಯನ್ನು ಲೋಧಿ ಪ್ರಶ್ನಿಸಿದರು. ತಮಗೂ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಲೋಧಿ
ಅವರು ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಜಿತು ಯಾದವ್ ಮತ್ತು ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಉನ್ನತ ಭದ್ರತಾ ಅಧಿಕಾರಿ ಸ್ಥಳದಲ್ಲಿ ಎರಡು ಸಜೀವ ಬಾಂಬ್ಗಳು ಪತ್ತೆಯಾಗಿರುವುದಾಗಿ ದೃಢ ಪಡಿಸಿದ್ದಾರೆ ಎಂದು ಜಂಟಿ ಪೊಲೀಸ್ ಕಮೀಷನರ್ ನವೀನ್ ಅರೋರಾ ಹೇಳಿದರು.
ಯಾರಿಗೂ
ಬಾಂಬ್ ಸ್ಫೋಟದ ಸದ್ದು ಕೇಳಿಲ್ಲ ಮತ್ತು ಸಂಜೀವ ಕುಮಾರ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೇಲ್ನೋಟಕ್ಕೆ ಇದು ವಕೀಲರ ಎರಡು ಗುಂಪುಗಳ ನಡುವಣ ಪೈಪೋಟಿಯ ಪ್ರಕರಣದಂತೆ ಕಂಡು ಬರುತ್ತಿದೆ ಎಂದು ಅರೋರಾ ಹೇಳಿದರು.
No comments:
Post a Comment