ಕೊರೋನಾ ಸಾವು: ವಿಶ್ವ-25,234, ಭಾರತ 724
ಇಟಲಿಯಲ್ಲಿ ಒಂದೇ ದಿನ 1000 ಬಲಿ
ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ ಶುಕ್ರವಾರ ೨೫,೨೩೪ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ೫,೫೩,೨೪೪ನ್ನ್ನು ದಾಟಿದೆ. ಹೆಚ್ಚು ಸೋಂಕಿತರು ಇರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನ ಪಡೆದಿದ್ದು ಚೀನಾ ಮತ್ತು ಇಟಲಿಯನ್ನು ಹಿಂದಕ್ಕೆ ತಳ್ಳಿದೆ. ಇರಾನಿನಲ್ಲಿ ೧೪೪ ಹೊಸ ಸಾವುಗಳು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ ೨,೩೭೮ಕ್ಕೆ ಏರಿದೆ ಎಂದು 2020 ಮಾರ್ಚ್ 27ರ ಶುಕ್ರವಾರ ವರದಿಗಳು ತಿಳಿಸಿದವು. ಇಟಲಿಯಲ್ಲಿ ಒಂದೇ ದಿನ 1000 ಸಾವುಗಳು ಸಂಭವಿಸಿದವು.
ಯುರೋಪಿನಲ್ಲಿ ಅತ್ಯಧಿಕ ಸಾವು (೧೭,೩೧೪) ಸಂಭವಿಸಿದೆ. ಇಟಲಿಯಲ್ಲಿ ೮,೧೬೫, ಸ್ಪೇನಿನಲ್ಲಿ ೪,೮೫೮ ಮತ್ತು ಚೀನಾದಲ್ಲಿ ೩೨೯೨ ಸಾವುಗಳು ಸಂಭವಿಸಿವೆ.
ಭಾರತದಲ್ಲಿ ಕೊರೋನಾಸೋಂಕಿತರ ಸಂಖ್ಯೆ ೭೨೪ಕ್ಕೆ ಏರಿದ್ದು, ಸಾವನ್ನಪ್ಪಿದವರ ಸಂಖ್ಯೆ ೧೭ಕ್ಕೆ ಏರಿದೆ. ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಯಲು ೨೧ ದಿನಗಳ ದಿಗ್ಬಂಧನ (ಲಾಕ್ ಡೌನ್) ಘೋಷಿಸಲಗಿರುವ ಭಾರತದಲ್ಲಿ ಜನರು ಕ್ರಮೇಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಳ್ಳಲು ಆರಂಭಿಸಿದ್ದು ಹಲವಡೆಗಳಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಕನಿಷ್ಟ ೧ ಮೀಟರ್ (೩ ಅಡಿ) ಅಂತರ ಕಾಯ್ದುಕೊಂಡು ಸರತಿ ಸಾಲುಗಳಲ್ಲಿ ಸಾಗುವುದನ್ನು ಅಭ್ಯಾಸ ಮಾಡಿಕೊಂಡಿರುವ ವರದಿಗಳು ಬಂದಿವೆ.
ಈಮಧ್ಯೆ ಮಹಾರಾಷ್ಟ್ರದಲ್ಲಿ ೨೩ ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೫೩ಕ್ಕೇ ಏರಿದರೆ, ಕೇರಳದಲ್ಲಿ ೩೯ ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೬೪ಕ್ಕೆ ಏರಿದೆ. ತಮಿಳುನಾಡಿನಲ್ಲಿ ಹೊಸದಾಗಿ ೬ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಏತನ್ಮಧ್ಯೆ, ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲಿನ ನಿಗಾದಲ್ಲಿ ಕಂಡು ಬಂದಿರುವ ವ್ಯತ್ಯಾಸವು ಕೊರೋನಾವೈರಸ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟವನ್ನು ಅಸ್ತವ್ಯಸ್ತಗೊಳಿಸಬಹುದು ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದರು.
ಪ್ರತಿರಕ್ಷಣಾ ಔಷಧ
ಇದೇ ವೇಳೆಯಲ್ಲಿ ಬೆಂಗಳೂರಿನ ಗ್ರಂಥಿಶಾಸ್ತ್ರ ತಜ್ಞ (ಆಂಕೋಲಜಿಸ್ಟ್) ಡಾ. ವಿಶಾಲರಾವ್ ಅವರು ಕೋವಿಡ್-೧೯ ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವಂತಹ ಸೈಟೋಕಿನ್ಗಳ ಮಿಶ್ರಣವನ್ನು ತಾವು ಅಭಿವೃದ್ಧಿ ಪಡಿಸಿದ್ದು ಅವುಗಳನ್ನು ಕೊರೋನಾವೈರಸ್ ರೋಗಿಗಳಿಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ನೀಡಬಹುದು ಎಂದು ಹೇಳಿದ್ದಾರೆ.
ಈ ಸೈಟೋಕಿನ್ ಮಿಶ್ರಣವನ್ನು ರೋಗಿಗಳಿಗೆ ಚುಚ್ಚುಮದ್ದು ಮೂಲಕ ನೀಡಬಹುದು.. ನಮ್ಮ ಸಂಶೋಧನೆ ಆರಂಬಿಕ ಹಂತದಲ್ಲಿದ್ದು ಈ ವಾರಾಂತ್ಯದೊಳಗಾಗಿ ಔಷಧ ಸಿದ್ಧವಾಗುತ್ತದೆ ಎಂಬ ವಿಶ್ವಾಸವಿದೆ. ಔಷಧ ಪರಿಶೀಲನೆಯನ್ನು ತ್ವರಿತಗೊಳಿಸುಂತೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ನುಡಿದರು.
No comments:
Post a Comment