Friday, March 27, 2020

ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ

ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ
ನವದೆಹಲಿ: ದೇಶವ್ಯಾಪಿ ದಿಗ್ಬಂಧನ ಘೋಷಿಸಿರುವ ಹಿನ್ನೆಲೆಯಲ್ಲಿ  ಜೆ ಇಇ ಮತ್ತು ನೀಟ್ (ಎನ್ ಇಇಟಿ) ಪ್ರವೇಶ ಪರೀಕ್ಷೆಗಳನ್ನು ಮೇ ಕೊನೆಯ ವಾರಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರವು 2020 ಮಾರ್ಚ್ 27ರ ಶುಕ್ರವಾರ  ಪ್ರಕಟಿಸಿತು.

ವಿದ್ಯಾರ್ಥಿಗಳು ಮತ್ತು ಪೋಷಕರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣ ಮಾಡಬೇಕಾಗಿರುವುದರಿಂದ ಅವರಿಗೆ ಆಗುವ ಅನಾನುಕೂಲ ತಪ್ಪಿಸಲು ನೀಟ್ (ಎನ್ಇಇಟಿ -ಯುಜಿ) ೨೦೨೦ ಮತ್ತು ಜೆಇಇ (ಮೆಯಿನ್) ಪರೀಕ್ಷೆಗಳನ್ನು ಮೇ ಕೊನೆಯ ವಾರದವರೆಗೆ ಮುಂದೂಡುವಂತೆ ನಾನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿದ್ದೇನೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದರು.

ಹಿಂದೆ ಜೆಇಇ ಪರೀಕ್ಷೆ ಏಪ್ರಿಲ್ ತಿಂಗಳಿಗೆ ಮತ್ತು ನೀಟ್ ಪರೀಕ್ಷೆ ಮೇ ೩ಕ್ಕೆ ನಿಗದಿಯಾಗಿತ್ತು.

No comments:

Advertisement