ಯೆಸ್
ಬ್ಯಾಂಕ್ ಬಿಕ್ಕಟ್ಟು: ಮೋದಿ ಹೊಣೆ
ರಾಹುಲ್
ಗಾಂಧಿ ಟೀಕೆ, ಬಿಜೆಪಿ ಎದಿರೇಟು
ನವದೆಹಲಿ:
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಣೆ ಎಂಬುದಾಗಿ ಕಾಂಗ್ರೆಸ್
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೂರಿದ ಬೆನ್ನಲ್ಲೇ ಅವರಿಗೆ ಎದಿರೇಟು ನೀಡಿದ ಬಿಜೆಪಿ ನಾಯಕ, ಪಕ್ಷದ ಐಟಿ ಉಸ್ತುವಾರಿ
ನೋಡಿಕೊಳ್ಳುತ್ತಿರುವ ಅಮಿತ್ ಮಾಳವೀಯ ಅವರು ’ಹಾಲಿ ಬಿಕ್ಕಟ್ಟಿಗೆ ಕಾಂಗ್ರೆಸ್ ಹೊಣೆ’ ಎಂದು 2020 ಮಾರ್ಚ್ 06ರ ಶುಕ್ರವಾರ ದೂಷಿಸಿದರು.
‘ಭಾರತದ
ಆರ್ಥಿಕತೆಯ ನಾಶಕ್ಕೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂಬುದಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು ಇತ್ತೀಚಿನ ಯೆಸ್ ಬ್ಯಾಂಕ್ ಬಿಕ್ಕಟ್ಟನ್ನು ಉಲ್ಲೇಖಿಸಿದ್ದರು.
‘ನೋ
ಯೆಸ್ ಬ್ಯಾಂಕ್. ಮೋದಿ ಅಂಡ್ ಹೀಸ್ ಐಡಿಯಾಸ್ ಹ್ಯಾವ್ ಡಿಸ್ಟ್ರಾಯ್ಡ್ ಇಂಡಿಯಾ’ಸ್ ಇಕಾನಮಿ ’ (ನೊ
ಯೆಸ್ ಬ್ಯಾಂಕ್. ಮೋದಿಯವರು ತಮ್ಮ ಕಲ್ಪನೆಗಳ ಮೂಲಕ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ.)# ನೋಬ್ಯಾಂಕ್’
ಎಂಬುದಾಗಿ ರಾಹುಲ್ ಟ್ವೀಟ್ ಮಾಡಿದ್ದರು.
ರಾಹುಲ್
ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಮಾಳವೀಯ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಭಾರತೀಯ ಬ್ಯಾಂಕುಗಳ ದುರವಸ್ಥೆ ಮತ್ತು ಈಗಿನ ಆರ್ಥಿಕ ಪರಿಸ್ಥಿತಿಗೆ ದೂಷಿಸಬೇಕಾಗಿದೆ ಎಂದು ಹೇಳಿದರು.
‘ನೋ
ರಾಹುಲ್, ಅದು ಪಿ. ಚಿದಂಬರಂ, ನಿಮ್ಮ ಮಾಜಿ ವಿತ್ತ ಸಚಿವರು ಭಾರತದ ಬ್ಯಾಂಕುಗಳ ಈಗಿನ ದುರವಸ್ಥೆ ಮತ್ತು ಹಾಲಿ ಆರ್ಥಿಕ ಸಮಸ್ಯೆಗೆ ಕಾರಣ’ ಎಂದು ಮಾಳವೀಯ ಟ್ವೀಟ್ ಮಾಡಿದರು.
ತಮ್ಮ
ಆಪಾದನೆಯನ್ನು ಪುಷ್ಟೀಕರಿಸಲು ಮಾಳವೀಯ ಅವರು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರ ವಿಡಿಯೋ ಒಂದನ್ನೂ ಟ್ವೀಟ್ಗೆ ಜೋಡಿಸಿ ಪೋಸ್ಟ್
ಮಾಡಿದರು.
ಕಾಂಗ್ರೆಸ್
ಪಕ್ಷದ ಮಾಜಿ ಮಿತ್ರ ಎಂಬುದಾಗಿ ಮಾಳವೀಯ ಅವರಿಂದ ಪರಿಚಯಿಸಲ್ಪಟಿರುವ ಅಮರ್ ಸಿಂಗ್ ಅವರು ವಿಡಿಯೋದಲ್ಲಿ ’ಬ್ಯಾಂಕುಗಳಲ್ಲಿ ವಸೂಲಾಗದ ಸಾಲಗಳು (ನಾನ್ ಫರ್ ಫಾರ್ಮಿಂಗ್ ಅಸೆಟ್ಸ್ - ಎನ್ಪಿಎ) ರಾಶಿ ಬೀಳಲು ಪಿ. ಚಿದಂಬರಂ ಅವರು ಭಾರತದ ವಿತ್ತ ಸಚಿವರಾಗಿದ್ದಾಗ ಅನುಸರಿಸಿದ ನೀತಿಗಳೇ ಕಾರಣ’ ಎಂದು ಹೇಳಿದ್ದಾರೆ.
ತಮ್ಮ
ಆಪಾದನೆಯನ್ನು ಪುಷ್ಟೀಕರಿಸಲು
ಚಿದಂಬರಂ ಅವರು ಮಾಡಿದ ವಿವಿಧ ತಪ್ಪುಗಳ ಸಾಕ್ಷ್ಯ ತಮ್ಮ ಬಳಿ ಇದೆ ಎಂದೂ ಸಿಂಗ್ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕೆ
ಮುನ್ನ ಪಿ. ಚಿzಂಬರಂ ಅವರು
ಮೋದಿ ಸರ್ಕಾರವನ್ನು ಮತ್ತು
ಆಡಳಿತ ನಡೆಸುವ ಮತ್ತು ಭಾರತದ ಆರ್ಥಿಕ ಸಂಸ್ಥೆಗಳನ್ನು ನಿಯಂತ್ರಿಸುವ
ಅದರ ಸಾಮರ್ಥ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಮತ್ತು ಯೆಸ್ ಬ್ಯಾಂಕ್ ಬಿಕ್ಕಟ್ಟು ಮತ್ತು ಇತ್ತೀಚನ ಪಿಎಂಸಿ ಬ್ಯಾಂಕ್ ವಂಚನೆ ಹಗರಣದಿಂದ ಸರ್ಕಾರದ ಅಸಮರ್ಥತೆ ಬಹಿರಂಗಕ್ಕೆ ಬಂದಿದೆ ಎಂದು ಹೇಳಿ, ವಿತ್ತ ಸಚಿವರು ಇದಕ್ಕೂ ಚಿದಂಬರಂ ಕಾರಣ ಎಂದು ಹೇಳಬಹುದು ಎಂದು ಟೀಕಿಸಿದ್ದರು.
No comments:
Post a Comment