Friday, March 27, 2020

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ಗೂ ಕೊರೋನಾ

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ಗೂ ಕೊರೋನಾ
ಲಂಡನ್: ವಿಶ್ವಾದ್ಯಂತ ೨೧,೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಕೊರೋನಾವೈರಸ್ ಇದೀಗ ಇಂಗ್ಲೆಂಡಿನ ಯುವರಾಜ ಚಾರ್ಲ್ಸ್ ಬಳಿಕ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಆರೋಗ್ಯ ಸಚಿವ  ಮ್ಯಾಟ್ ಹ್ಯಾನ್ ಕಾಕ್ ಅವರನ್ನೂ  2020 ಮಾರ್ಚ್ 27ರ ಶುಕ್ರವಾರ ಬಾಧಿಸಿತು.

ಕಳೆದ ೨೪ ಗಂಟೆಗಳಿಂದ ನನಗೆ ಸಣ್ಣದಾಗಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು. ಪರೀಕ್ಷೆಯಲ್ಲಿ  ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ ನಾನು ಸ್ವಯಂ ಏಕಾಂಗಿ ವಾಸದಲ್ಲಿ (ಐಸೋಲೆನ್) ಇದ್ದೇನೆ. ಆದರೆ, ನನ್ನ ನೇತೃತ್ವದಲ್ಲಿ ಸರ್ಕಾರ ಮುಂದುವರೆಯಲಿದೆ. ಮತ್ತು  ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಿದ್ಧನಾಗಿದ್ದೇನೆ ಎಂದು ಸ್ವತಃ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಟ್ವೀಟ್ ಮಾಡಿದರು.
ಬ್ರಿಟನ್ ಮಹಾರಾಣಿ ಎಲಿಜೆಬೆತ್ ಅವರ ಮೊದಲ ಮಗ, ಬ್ರಿಟನ್ ರಾಜಕುಮಾರ ಹಾಗೂ ಬ್ರಿಟನ್ ಅರಸೋತ್ತಿಗೆಯ ಉತ್ತರಾಧಿಕಾರಿ ಯುವರಾಜ ಚಾರ್ಲ್ಸ್ (೭೧) ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದನ್ನು ಅರಮನೆ ಮೂಲಗಳು ಗುರುವಾರ ದೃಢಪಡಿಸಿದ್ದವು. ಇದೀಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಮಾರಕ ಸೋಂಕು ಕಾಣಿಸಿಕೊಂಡಿತು.
ಜಾನ್ಸನ್ ಅವರು ಡೌನಿಂಗ್ ಸ್ಟ್ರೀಟ್ನಲ್ಲಿರುವ ಪ್ರಧಾನಿ ನಿವಾಸದಲ್ಲೇ ಏಕಾಂಗಿವಾಸದಲ್ಲಿ ಇರುತ್ತಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.
ಕೋವಿಡ್ ೧೯ ಸೋಂಕಿಗೆ ಸಂಬಂಧಿಸಿದ ಕೆಲವೊಂದು ಲಕ್ಷಣಗಳು ಜಾನ್ಸನ್ ಅವರಲ್ಲಿ ಕಂಡುಬಂದ ಕಾರಣ ಅವರು ಇಂಗ್ಲಂಡ್ ವೈದ್ಯಕೀಯ ಮುಖ್ಯಸ್ಥರ ವೈಯಕ್ತಿಕ ಸಲಹೆಯ ಮೇರೆಗೆ ಸೋಂಕು ತಪಾಸಣೆಗೆ ಒಳಗಾದರು ಮತ್ತು ಪರೀಕ್ಷೆಯಲ್ಲಿ ಕೋವಿಡ್ -೧೯ ಸೋಂಕು ಖಚಿತವಾಗಿದೆ ಎಂದು ಪ್ರಧಾನಿ ನಿವಾಸ ಡೌನಿಂಗ್ ಸ್ಟ್ರೀಟ್ ವಕ್ತಾರರು ಮಾಹಿತಿ ನೀಡಿದರು.

ಸಂಸತ್ತಿನ ಹೌಸ್ ಆಫ್ ಕಾಮನ್ಸ್ ಕೊಠಡಿಯಲ್ಲಿ ಪ್ರಧಾನಮಂತ್ರಿಯ ಸಾಪ್ತಾಹಿಕ ಪ್ರಶ್ನೋತ್ತರ ಅಧಿವೇಶನದಲ್ಲಿ ಅವರು ಉತ್ತರಿಸಿದ ಒಂದು ದಿನದ ನಂತರ ೫೫ ವರ್ಷದ ಜಾನ್ಸನ್ ಗುರುವಾರ ಸೌಮ್ಯ ರೋಗಲಕ್ಷಣಗಳನ್ನು ಅನುಭವಿಸಿದರು ಎಂದು ವಕ್ತಾರ ನುಡಿದರು.

ಮಾರ್ಚ್ ೧೧ ರಂದು ಕೊನೆಯ ಬಾರಿಗೆ ಜಾನ್ಸನ್ ಅವರನ್ನು ರಾಣಿ ಎಲಿಜಬೆತ್ ನೋಡಿದ್ದರು.
ಇತ್ತೀಚಿನ ದಿನಗಳು ಮತ್ತು ವಾರಗಳಲ್ಲಿ ಅನೇಕರು ಜಾನ್ಸನ್ ಅವರೊಂದಿಗೆ ಎಷ್ಟು ಮಂದಿ ಸಂಪರ್ಕ ಹೊಂದಿದ್ದರು ಎಂದು ಡೌನಿಂಗ್ ಸ್ಟ್ರೀಟ್ ಸಿಬ್ಬಂದಿ ಮತ್ತು ಹಿರಿಯ ಮಂತ್ರಿಗಳು ಈಗ ಏಕಾಂಗಿವಾಸಕ್ಕೆ ತೆರಳಬೇಕಾಗಿದೆಯೇ ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಅವರ ಹಣಕಾಸು ಸಚಿವ ರಿಷಿ ಸುನಕ್ ಸ್ವಯಂ ಪ್ರತ್ಯೇಕ ವಾಸ ಮಾಡುತ್ತಿಲ್ಲ ಎಂದು ಖಜಾನೆ ಮೂಲಗಳು ತಿಳಿಸಿವೆ.

ಗುರುವಾರ ಸಂಜೆ ಬ್ರಿಟನ್ ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಲು ಚಪ್ಪಾಳೆ ತಟ್ಟುವ ಸಲುವಾಗಿ, ಜಾನ್ಸನ್ ಮತ್ತು ಸುನಕ್ ಡೌನಿಂಗ್ ಸ್ಟ್ರೀಟ್ ಪ್ರತ್ಯೇಕ ಪ್ರವೇಶದ್ವಾರಗಳಿಂದ ಹೊರಬಂದರು ಮತ್ತು ನಿಕಟ ಸಂಪರ್ಕಕ್ಕೆ ಬಂದಿರಲಿಲ್ಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ, ಇಂಗ್ಲೆಂಡಿನಲ್ಲಿ ೫೭೮ ಜನರು ಕೊರೋನಾವೈರಸ್ಸ್ ಸೋಂಕಿಗೆ ಬಲಿಯಾಗಿದ್ದಾರೆ. ೧೧,೬೫೮ ಪ್ರಕರಣಗಳಲ್ಲಿ ಸೋಂಕು ಖಚಿತವಾಗಿದೆ.  ಇಟಲಿ, ಸ್ಪೇನ್, ಚೀನಾ, ಇರಾನ್, ಫ್ರಾನ್ಸ್ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.

ಕೊರೋನಾ ಸೋಂಕಿತ/ ಏಕಾಂಗಿ ವಾಸದಲ್ಲಿರುವ ಗಣ್ಯ ವ್ಯಕ್ತಿಗಳು
        ಬೋರಿಸ್ ಜಾನ್ಸನ್ (ಇಂಗ್ಲೆಂಡ್ ಪ್ರಧಾನಿ)
        ಪ್ರಿನ್ಸ್ ಚಾರ್ಲ್ಸ್ (ಇಂಗ್ಲೆಂಡಿನ ಯುವರಾಜ)
        ಮ್ಯಾಟ್ ಹ್ಯಾನ್ ಕಾಕ್ (ಇಂಗ್ಲೆಂಡಿನ ಆರೋಗ್ಯ ಸಚಿವ)
        ಥನ್ ಬೆರ್ಗ್ (ಸ್ವೀಡಿಷ್ ಪರಿಸರ ಕಾರ್ಯಕರ್ತೆ)
        ಪ್ರಿನ್ಸ್ ಆಲ್ಬರ್ಟ್ (ಮೊನಾಕೊ)
        ಮೈಕೆಲ್ ಬಾರ್ನಿಯರ್ (ಬ್ರೆಕ್ಸಿಟ್ ವಿಚಾರದಲ್ಲಿ ಬ್ರಿಟನ್ ಜೊತೆಗಿನ ಮಾತುಕತೆಯಲ್ಲಿ ಐರೋಪ್ಯ ಒಕ್ಕೂಟದ ನೇತೃತ್ವ ವಹಿಸಿದ್ದ ವ್ಯಕ್ತಿ)
        ಜಸ್ಟಿನ್ ಟ್ರುಡೋ (ಕೆನಡಾ ಪ್ರಧಾನಿ- ಏಕಾಂತವಾಸ - ಪತ್ನಿ ಸೋಫಿ ಗ್ರೆಗೋಯಿರ್ ಟ್ರುಡೋ ಅವರಿಗೆ ಸೋಂಕು ಖಚಿತವಾದ ಬಳಿಕ)
        ಅಂಗೇಲಾ ಮರ್ಕೆಲ್ (ವರದಿ ನೆಗೆಟಿವ್ ಬಂದರೂ, ಪರೀಕ್ಷಿಸಿದ ವೈದ್ಯರಿಗೆ ಸೋಂಕು ತಗುಲಿದ ಕಾರಣಕ್ಕೆ ಏಕಾಂಗಿವಾಸ)
        ಮಾರ್ಟಿ ಅಹ್ತಿಸಾರಿ (೮೨) (ಫಿನ್ಲೆಂಡಿನ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಮಾಜಿ ಫಿನ್ನಿಶ್ ಅಧ್ಯಕ್ಷ).

No comments:

Advertisement