ನಿರ್ಭಯಾ
ಪ್ರಕರಣ: ಮುಕೇಶ್ ಸಿಂಗ್ ಹೊಸ ನಾಟಕ, ಮಾನವ ಹಕ್ಕು ಆಯೋಗಕ್ಕೂ ಅರ್ಜಿ
ನವದೆಹಲಿ:
ನೇಣುಗಂಬ ಏರಲು ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ ಎನ್ನುವ ಹೊತ್ತಿನಲ್ಲಿ ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬ ಅಪರಾಧ ಸಂಭವಿಸಿದ ದಿನ ತಾನು ರಾಜಧಾನಿ ದೆಹಲಿಯಲ್ಲಿ ಇರಲೇ ಇಲ್ಲ ಎಂಬ ಹೊಸ ತಕರಾರನ್ನು 2020 ಮಾರ್ಚ್ 17ರ ಮಂಗಳವಾರ ತೆಗೆದಿದ್ದಾನೆ..!
ಇದೇ
ವೇಳೆಗೆ ಪ್ರಕರಣದಲ್ಲಿ ನ್ಯಾಯದ ಹತ್ಯೆಯಾಗಿದೆ ಎಂಬುದಾಗಿ ಆಪಾದಿಸಿ ಇದೀಗ ಅಪರಾಧಿಗಳು ಮಾನವ ಹಕ್ಕುಗಳ ಆಯೋಗದ ಕದವನ್ನೂ ತಟ್ಟಿದ್ದಾರೆ. ಗಲ್ಲು ಜಾರಿಗೆ ತಡೆ ನೀಡಬೇಕು ಎಂದು ಅವರು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದರು.
ಮುಕೇಶ್
ಸಿಂಗ್ ಪರ ವಕೀಲ ಎಂಎಲ್
ಶರ್ಮ ಅವರು ಮಾರ್ಚ್ ೨೦ರ ಬೆಳಗ್ಗೆ ೫.೩೦ ಗಂಟೆಗೆ
ನಿಗದಿಯಾಗಿರುವ ಗಲ್ಲು ಜಾರಿ ಪ್ರಕ್ರಿಯೆಗೆ ತಡೆಯಾಜ್ಞೆ ಕೋರಿ ಅರ್ಜಿಯೊಂದನ್ನು ದೆಹಲಿ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದರು.
ಅರ್ಜಿ
ಮೇಲಿನ ತನ್ನ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಪ್ರಕರಣದ
ಅಪರಾಧಿಗಳಾದ ಅಕ್ಷಯ್ ಠಾಕೂರ್, ಪವನ್ ಗುಪ್ತ ಮತ್ತು ವಿನಯ್ ಶರ್ಮ ಈ ಮೂವರು ತಮ್ಮ
ಮರಣದಂಡನೆಗೆ ತಡೆಯಾಜ್ಞೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಅರ್ಜಿ ಸಲ್ಲಿಸಿದ ಒಂದು ದಿನದ ಬಳಿಕ ಮುಕೇಶ್ ಪರ ಅರ್ಜಿಯನ್ನು ನ್ಯಾಯಾಲಯಕ್ಕೆ
ಸಲ್ಲಿಸಲಾಯಿತು.
ಹಿಂದಿನ
ವಕೀಲರು ತನ್ನನ್ನು ದಾರಿ ತಪ್ಪಿಸಿದರು ಎಂದು ಆಪಾದಿಸಿ ತನ್ನ ಕಾನೂನುಬದ್ಧ ಪರಿಹಾರ ಪಡೆಯುವ ಅವಕಾಶಗಳನ್ನು ಪುನಃಸ್ಥಾಪಿಸಬೇಕು ಎಂಬುದಾಗಿ ಕೋರಿ ಮುಕೇಶ್ ಸಿಂಗ್ ಈ ಹಿಂದೆ ಸಲ್ಲಿಸಿದ್ದ
ಅರ್ಜಿಯನ್ನು ಸುಪ್ರೀಂಕೋರ್ಟ್ 2020 ಮಾರ್ಚ್
15ರ ಸೋಮವಾರ ತಿರಸ್ಕರಿಸಿತ್ತು.
ಕೇಂದ್ರ
ಸರ್ಕಾರ, ದೆಹಲಿ ಸರ್ಕಾರ ಮತ್ತು ಪ್ರಕರಣದ ಕೋರ್ಟ್ ಸಹಾಯಕಿ (ಅಮಿಕಸ್ ಕ್ಯೂರಿ) ವಕೀಲೆ ವೃಂದಾ ಗ್ರೋವರ್ ಅವರು ಹೆಣೆದೆ ಕ್ರಿಮಿನಲ್ ಸಂಚು ಮತ್ತು ವಂಚನೆ ಆಪಾದನೆ ಬಗ್ಗೆ ಸಿಬಿಐ ತನಿಖೆಯನ್ನು ಕೋರಿ ಮುಕೇಶ್ ಪರ ವಕೀಲ ಎಂಎಲ್
ಶರ್ಮ ಮನವಿ ಸಲ್ಲಿಸಿದ್ದರು.
ಈ
ಮಧ್ಯೆ, ಪ್ರಕರಣದಲ್ಲಿ ಗಲ್ಲುಶಿಕ್ಷೆಯಿಂದ ಪಾರಾಗಲು ಶತಪ್ರಯತ್ನ ನಡೆಸುತ್ತಿರುವ ಅಪರಾಧಿಗಳು ಈಗ ರಾಷ್ಟ್ರೀಯ ಮಾನವ
ಹಕ್ಕುಗಳ ಆಯೋಗದ ಮೊರೆ ಹೋದರು. ಮರಣ ದಂಡನೆ ಶಿಕ್ಷೆಗೆ ತಡೆ ಕೋರಿ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದ್ದೇವೆ ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳಿದರು.
ಮಾರ್ಚ್
೨೦ರ ಡೆತ್ ವಾರಂಟ್ಗೆ ತಡೆ ಕೋರಿ
ನಾವು ಎನ್ಎಚ್ಆರ್ಸಿಗೆ ಮನವಿ ಸಲ್ಲಿಸಿದ್ದೇವೆ. ಈ ಪ್ರಕರಣದಲ್ಲಿ ನ್ಯಾಯವನ್ನು
ಕೊಲ್ಲಲಾಗಿದೆ. ತಿಹಾರ್ ಜೈಲಿನಲ್ಲಿ ಪ್ರಕರಣದ ಅಪರಾಧಿ ರಾಮ್ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ನಂಬಿಸಲಾಗಿದೆ. ಇದೇ ಕಾರಣದಿಂದ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. ರಾಮಸಿಂಗ್ ೭೦ ವರ್ಷದ ತಾಯಿ
ಹಾಗೂ ೧೦ ವರ್ಷದ ಮಗನನ್ನು
ಹೊಂದಿದ್ದ ಎಂದು ಸುದ್ದಿಗಾರರಿಗೆ ವಕೀಲ ಎ.ಪಿ.ಸಿಂಗ್
ತಿಳಿಸಿದರು.
ಸೆರೆಮನೆಯಲ್ಲಿ
ಆರೋಪಿ ರಾಮ್ಸಿಂಗ್ನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿದ ವಕೀಲ, ಆ ಕೊಲೆಗೆ ಅವರ
ಸಹೋದರ ಮುಖೇಶ್ ಸಿಂಗ್ ಏಕೈಕ ಸಾಕ್ಷಿ. ಆದ್ದರಿಂದ ಮುಖೇಶ್ ಸಿಂಗ್ನನ್ನು ಗಲ್ಲಿಗೇರಿಸಬಾರದು. ಆ ಸಮಯದಲ್ಲಿ, ರಾಮ್ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ, ಈಗ ’ಬ್ಲ್ಯಾಕ್ ವಾರಂಟ್’ ಪುಸ್ತಕ ಹೊರಬಂದಿದ್ದು, ರಾಮ್ಸಿಂಗ್ನನ್ನು ಹತ್ಯೆ ಮಾಡಲಾಗಿದೆ, ಇದರಲ್ಲಿ ಸೆರೆಮನೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ವಕೀಲ ಎ.ಪಿ.ಸಿಂಗ್
ಹೇಳಿದರು.
ರಾಮ್ಸಿಂಗ್ ಆತ್ಮಹತ್ಯೆಯ ತನಿಖೆ ಪಕ್ಷಪಾತದಿಂದ ಕೂಡಿತ್ತು. ಆದರೂ, ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಈ ಘಟನೆಗೆ ಮುಖೇಶ್
ಮಾತ್ರ ಸಾಕ್ಷಿಯಾಗಿದ್ದಾನೆ. ಅವಸರದಲ್ಲಿ ಆತನನ್ನು ಗಲ್ಲಿಗೇರಿಸಿದರೆ ನ್ಯಾಯವನ್ನು ಕೊಂದಂತೆ ಆಗುತ್ತದೆ. ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಕೀಲ ಸಿಂಗ್ ಪ್ರತಿಪಾದಿಸಿದರು.
ಮರಣದಂಡನೆ
ತಡೆಯಲು, ಹಾಗೂ ಈ ವಿಷಯದಲ್ಲಿ ದಾಖಲೆಗಳನ್ನು
ಹುಡುಕಲು ಮತ್ತು ರಾಮ್ಸಿಂಗ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾನವ ಹಕ್ಕುಗಳ ಆಯೋಗವನ್ನು ಸಿಂಗ್ ಆಗ್ರಹಿಸಿದರು.
೨೦೧೨ರ
ನಿರ್ಭಯಾ ಸಾಮೂಹಿಕ ಅತ್ಯಾಚಾg, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿಗಳಾದ ಮುಕೇಶ್ ಸಿಂಗ್, ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ, ಮತ್ತು ವಿನಯ್ ಶರ್ಮಾರನ್ನು ಮಾರ್ಚ್ ೨೦, ಬೆಳಗ್ಗೆ ೫.೩೦ಕ್ಕೆ ಗಲ್ಲಿಗೇರಿಸಲು
ಹೊಸ ಡೆತ್ ವಾರಂಟನ್ನು ಮಾರ್ಚ್ ೫ರಂದು ಹೊರಡಿಸಲಾಗಿದೆ. ಮೂರು ಬಾರಿ ಹೊರಡಿಸಿ ಮುಂದೂಡಲ್ಪಟ್ಟಿದ್ದ ಡೆತ್ ವಾರಂಟ್ನ್ನು ಈ ಸಲವೂ ಮುಂದೂಡಬೇಕೆಂದು
ಅಪರಾಧಿಗಳು ಭಾರೀ ಹೋರಾಟ
ನಡೆಸುತ್ತಿದ್ದಾರೆ.
ರಾಷ್ಟ್ರಪತಿಗಳು
ಎಲ್ಲರ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದಾರೆ, ಕ್ಯುರೇಟಿವ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮುಗಿದಿದ್ದು, ಹೊಸದಾಗಿ ವಿಚಾರಣೆ ನಡೆಸಬೇಕೆಂಬ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸೋಮವಾರ ಅಂತರಾಷ್ಟ್ರೀಯ ನ್ಯಾಯಾಲಯಕ್ಕೂ ಅಪರಾಧಿಗಳು ಗಲ್ಲುಶಿಕ್ಷೆಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದರು.
೨೦೧೨ರ
ಡಿಸೆಂಬರ್ ೧೬ರಂದು ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನುಷ ಕ್ರೌರ್ಯ ಸಹಿತವಾದ ಹಲ್ಲೆ
ನಡೆಸಿದ್ದಕ್ಕಾಗಿ ಈ ಅಪರಾಧಿಗಳಿಗೆ ಗಲ್ಲು
ಶಿಕ್ಷೆ ವಿಧಿಸಲಾಗಿದೆ.
ಮಾರಣಾಂತಿಕ
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ ವಿದ್ಯಾರ್ಥಿನಿ ೧೪ ದಿನಗಳ ಜೀವನ್ಮರಣ
ಹೋರಾಟದ ಬಳಿಕ ಡಿಸೆಂಬರ್ ೨೯ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಆರು
ಮಂದಿ ಆರೋಪಿಗಳ ಪೈಕಿ ಒಬ್ಬನಾದ ರಾಮ್ ಸಿಂಗ್ ತಿಹಾರ್ ಸೆರೆಮನೆಯಲ್ಲಿ ವಿಚಾರಣಾ ವೇಳೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಆರೋಪಿಯಾದ ಬಾಲಾಪರಾಧಿಗೆ ಸುಧಾರಣಾ ವಾಸದ ಶಿಕ್ಷೆ ವಿಧಿಸಲಾಗಿತ್ತು. ಮೂರು ದಿನಗಳ ಸುಧಾರಣಾವಾಸ ಪೂರೈಸಿದ ಬಳಿಕ ಆತನನ್ನು ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.
No comments:
Post a Comment