Tuesday, March 17, 2020

ವಿಧವೆಯ ಬಾಳು ಇಷ್ಟವಿಲ್ಲ: ’ನಿರ್ಭಯಾ’ ಹಂತಕನ ಪತ್ನಿಯಿಂದ ವಿಚ್ಛೇದನ ಅರ್ಜಿ

ವಿಧವೆಯ ಬಾಳು ಇಷ್ಟವಿಲ್ಲ: ’ನಿರ್ಭಯಾಹಂತಕನ ಪತ್ನಿಯಿಂದ ವಿಚ್ಛೇದನ ಅರ್ಜಿ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನ ಪತ್ನಿ ತನ್ನ ಪತಿಯನ್ನು ಗಲ್ಲಿಗೇರಿಸಬಹುದೆಂಬ ನಿರೀಕ್ಷೆಯಲ್ಲಿ, ಗಲ್ಲಿಗೇರಿಸಲು ನಿಗದಿಯಾಗಿರುವ ದಿನಾಂಕಕ್ಕೆ ಮುನ್ನವೇ ಆತನಿಂದ ವಿಚ್ಛೇದನ ಕೋರಿ 2020 ಮಾರ್ಚ್ 17ರ ಮಂಗಳವಾರ  ಅರ್ಜಿ ಸಲ್ಲಿಸಿದಳು.

ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಸಿಂಗ್ ಠಾಕೂರನ ಪತ್ನಿ ಪುನೀತಾ ಔರಂಗಾಬಾದಿನ ಕುಟುಂಬ ನ್ಯಾಯಾಲಯಗಳ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ವಿಚ್ಛೇದನ ಕೋರಿಕೆ ಅರ್ಜಿಯನ್ನು ಸಲ್ಲಿಸಿದಳು.

೨೦೧೨ರ ಡಿಸೆಂಬರ್ ೧೬ರ ಮಾರಣಾಂತಿಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ತನ್ನ ಪತಿ ನಿರಪರಾಧಿ ಎಂಬುದು ತನಗೆ ಮನವರಿಕೆಯಾಗಿದ್ದರೂ, ಬಾಳಿನ ಮುಂದಿನ ದಿನಗಳನ್ನು ಅಕ್ಷಯ್ ಸಿಂಗ್ ವಿಧವೆಯಾಗಿ ಸವೆಸುವುದು ತನಗೆ ಇಷ್ಟವಿಲ್ಲ ಎಂದು ಪುನೀತಾ ತನ್ನ ವಿಚ್ಛೇದನ ಕೋರಿಕೆ ಅರ್ಜಿಯಲ್ಲಿ ತಿಳಿಸಿದಳು.

ಹಿಂದೂ ವಿವಾಹ ಕಾಯ್ದೆಯ ೧೩(() ಸೆಕ್ಷನ್ ಅಡಿಯಲ್ಲಿ ಪತಿ ಅತ್ಯಾಚಾರ ಸೇರಿದಂತೆ ಹೀನ ಕೃತ್ಯಕ್ಕಾಗಿ ಶಿಕ್ಷಿತನಾದರೆ ವಿಚ್ಛೇದನ ಪಡೆಯುವ ಅವಕಾಶ ಆತನ ಪತ್ನಿಗೆ ಇದೆ ಎಂದು ಪುನೀತಾಳ ವಕೀಲ ಎಂಕೆ ಸಿಂಗ್ ಹೇಳಿದರು.

ಅಕ್ಷಯ್ ಸಿಂಗ್ ಠಾಕೂರ್ ಬಿಹಾರಿನ ಔರಂಗಾಬಾದ ಜಿಲ್ಲೆಯ ಲಹಂಗ್-ಕರ್ಮಾ ಗ್ರಾಮದ ನಿವಾಸಿಯಾಗಿದ್ದಾನೆ. ನಿರ್ಭಯಾ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಾದ ಅಕ್ಷಯ್ ಸಿಂಗ್ ಠಾಕೂರ್, ವಿನಯ್ ಶರ್ಮ, ಪವನ್ ಗುಪ್ತ ಮತ್ತ ಮುಕೇಶ್ ಸಿಂಗ್ ಅವರನ್ನು ಮಾರ್ಚ್ ೨೦ರಂದು ಬೆಳಗ್ಗೆ .೩೦ ಗಂಟೆಗೆ ಗಲ್ಲಿಗೇರಿಸಲು ಡೆತ್ ವಾರಂಟ್ ಹೊರಡಿಸಲಾಗಿದೆ.

ಕೆಲ ದಿನಗಳ ಹಿಂದೆ ಶಿಕ್ಷಿತ ಅಪರಾಧಿಗಳ ಕೆಲವು ಕುಟುಂಬ ಸದಸ್ಯರು ತಮಗೆ ದಯಾಮರಣ ಪಡೆಯಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು.

No comments:

Advertisement