ವಿಶ್ವಾಸಮತ:
ಕಮಲನಾಥ್ಗೆ ಸುಪ್ರೀಂಕೋರ್ಟ್ ನೋಟಿಸ್
ನಡೆಯದ
ಬಲಾಬಲ ಪರೀಕ್ಷೆ, ರಾಜ್ಯಪಾಲರಿಗೆ ಸಿಎಂ ಪತ್ರ
ನವದೆಹಲಿ/
ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಸಲ್ಲಿಸಿದ ಅರ್ಜಿಯನ್ನು 2020 ಮಾರ್ಚ್ 17ರ ಮಂಗಳವಾರ ವಿಚಾರಣೆಗೆ
ಎತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಕಮಲನಾಥ್ ಮತ್ತು ವಿಧಾನಸಭಾ ಕಾರ್ಯದರ್ಶಿಗೆ ನೋಟಿಸುಗಳನ್ನು ಜಾರಿ ಮಾಡಿತು. ಈ ಮಧ್ಯೆ ರಾಜ್ಯಪಾಲರ
ಗಡುವಿನ ಹೊರತಾಗಿಯೂ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಈದಿನ ಸದನ
ಬಲಾಬಲ ಪರೀಕ್ಷೆ ನಡೆಯಲಿಲ್ಲ. ಬದಲಿಗೆ ವಿಶ್ವಾಸಮತ ಯಾಚನೆ ಏಕೆ ಸಾಧ್ಯವಿಲ್ಲ ಎಂದು ವಿವರಿಸಿ ರಾಜ್ಯಪಾಲ ಲಾಲಜಿ ಟಂಡನ್ ಅವರಿಗೆ ಮುಖ್ಯಮಂತ್ರಿ ಕಮಲನಾಥ್ ಪತ್ರ ಬರೆದರು.
ಸದನದಲ್ಲಿ
ಬಲಾಬಲ ಪರೀಕ್ಷೆ ಕೋರಿ ಬಿಜೆಪಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಿ ೧೨ ಗಂಟೆಗಳ ಒಳಗಾಗಿ
ಉತ್ತರ ನೀಡುವಂತೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಮುಖ್ಯಮಂತ್ರಿ ಕಮಲನಾಥ್ ಮತ್ತು ವಿಧಾನಸಭಾ ಕಾರ್ಯದರ್ಶಿಗೆ ಸೂಚಿಸಿತು.
ಕೊರೋನಾವೈರಸ್
ವಿರುದ್ಧ ಮುಂಜಾಗರೂಕತಾ ಕ್ರಮವಾಗಿ ವಿಧಾನಸಭಾ ಅಧಿವೇಶನವನ್ನು ಸೋಮವಾರ ೧೦ ದಿನಗಳ ಕಾಲ
ಮುಂದೂಡಿದ್ದನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.
ಜ್ಯೋತಿರಾದಿತ್ಯ
ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಮಂದಿ ಶಾಸಕರ
ರಾಜೀನಾಮೆಯ ಪರಿಣಾಮವಾಗಿ ಪತನದ ಅಂಚಿಗೆ ಬಂದಿರುವ ಕಮಲನಾಥ್ ಸರ್ಕಾರವು ವಿಶ್ವಾತ ಮತ ಯಾಚನೆಯನ್ನು ವಿಳಂಬಿಸುತ್ತಿದೆ
ಎಂದು ಬಿಜೆಪಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು.
ಈ
ಮಧ್ಯೆ, ಕಳೆದ ೪೮ ಗಂಟೆಗಳ ಅವಧಿಯಲ್ಲಿ
ರಾಜ್ಯಪಾಲ ಲಾಲಜಿ ಟಂಡನ್ ಅವರ ಜೊತೆಗಿನ ಐದನೇ ಸಂಪರ್ಕದಲ್ಲಿ ಮುಖ್ಯಮಂತ್ರಿ ಕಮಲನಾಥ್ ಮಂಗಳವಾರ ಇನ್ನೊಂದು ಪತ್ರವನ್ನು ಬರೆದು ತಾವು ಯಾಕೆ ವಿಶ್ವಾಸ ಮತ ಯಾಚನೆ ಮಾಡಲು
ಸಾಧ್ಯವಿಲ್ಲ ಎಂಬುದಾಗಿ ವಿವರಿಸಿ, ಕೊರೋನಾವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರವೂ ಸೇರಿದಂತೆ ವಿಶ್ವಾದ್ಯಂತ ದೊಡ್ಡ ಪ್ರಮಾಣದಲ್ಲಿ ಜನ ಸೇರುವುದನ್ನು ತಡೆಯಲು
ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಉಲ್ಲೇಖಿಸಿದರು.
ಸದನ ಬಲಾಬಲ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡುವಂತೆ ಸೂಚಿಸಿ ವಿಧಾನಸಭಾಧ್ಯಕ್ಷರಿಗೆ ರಾಜ್ಯಪಾಲರು ಬರೆದ ಪತ್ರ ಸಂಸದೀಯ ವ್ಯವಸ್ಥೆಗೆ ಭೂಷಣವಲ್ಲ ಎಂದು ಅವರು ಟೀಕಿಸಿದರು.
ಸದನ ಬಲಾಬಲ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡುವಂತೆ ಸೂಚಿಸಿ ವಿಧಾನಸಭಾಧ್ಯಕ್ಷರಿಗೆ ರಾಜ್ಯಪಾಲರು ಬರೆದ ಪತ್ರ ಸಂಸದೀಯ ವ್ಯವಸ್ಥೆಗೆ ಭೂಷಣವಲ್ಲ ಎಂದು ಅವರು ಟೀಕಿಸಿದರು.
ಏತನ್ಮಧ್ಯೆ
ಮಧ್ಯಪ್ರದೇಶ ಕಾಂಗೆಸ್ ಶಾಸಕಾಂಗ ಪಕ್ಷ ಕೂಡಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಬಿಜೆಪಿಯು ತನ್ನ ೧೬ ಮಂದಿ ಶಾಸಕರನ್ನು
ಅಪಹರಿಸಿ ದಿಗ್ಬಂಧನದಲ್ಲಿ ಇರಿಸಿದೆ ಎಂದು ಆಪಾದಿಸಿದೆ.
ಏನೇನಾಯ್ತು?
·
ಮುಖ್ಯಮಂತ್ರಿ
ಮತ್ತು ವಿಧಾನಸಭಾ ಕಾರ್ಯದರ್ಶಿಯವರ ಅಭಿಪ್ರಾಯಗಳನ್ನು ತಾನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದ ಸುಪ್ರೀಂಕೋರ್ಟ್ ಪೀಠವು ಅವರಿಗೆ ನೋಟಿಸ್ಗಳನ್ನು ಜಾರಿ ಮಾಡಿ, ಪ್ರಕರಣವನ್ನು ಬುಧವಾರಕ್ಕೆ ಮುಂದೂಡಿತು.
·
ಪ್ರಕರಣದಲ್ಲಿ
ಕಕ್ಷಿದಾರರಾಗಲು ೧೬ ಮಂದಿ ಬಂಡಾಯ
ಶಾಸಕರಿಗೆ ಸುಪ್ರೀಮಕೋರ್ಟ್ ಒಪ್ಪಿಗೆ ನೀಡಿತು. ಸದರಿ ಶಾಸಕರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ರೆಸಾರ್ಟ್ ಒಂದರಲ್ಲಿ ಇದ್ದಾರೆ. ಸಿಂಧಿಯಾ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿದ್ದಂತೆಯೇ ಅವರ ನಿಷ್ಠಾವಂತ ಶಾಸಕರು ರೆಸಾರ್ಟ್ನಿಂದಲೇ ತಮ್ಮ ರಾಜೀನಾಮೆ ಪತ್ರಗಳನ್ನು ಕಳುಹಿಸಿದ್ದರು.
·
’ನಾನು
ಸದನ ಬಲಾಬಲ ಪರೀಕ್ಷೆಯಿಂದ ಓಡಿ ಹೋಗುತ್ತಿಲ್ಲ. ಕಳೆದ ೧೫ ತಿಂಗಳಲ್ಲಿ ಹಲವಾರು
ಬಾರಿ ನಾನು ಸದನದಲ್ಲಿ ಬಹುಮತ ಸಾಬೀತು ಪಡಿಸಿದ್ದೇನೆ’ ಎಂದು
ಕಮಲನಾಥ್ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದರು.
·
ಕಮಲನಾಥ್
ಅವರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ’ಮಾರ್ಚ್ ೧೭ರ ಒಳಗಾಗಿ ನೀವು ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸದೇ ಇದ್ದಲ್ಲಿ, ನೀವು ಬಹುಮತ ಕಳೆದುಕೊಂಡಿದ್ದೀರಿ ಎಂಬುದಾಗಿ ನಾನು ಪರಿಗಣಿಸಬೇಕಾಗುತ್ತದೆ’ ಎಂದು
ತಿಳಿಸಿದ್ದರು.
·
ವಿಶ್ವಾಸಮತ
ಯಾಚನೆಗೆ ವ್ಯವಸ್ಥೆ ಮಾಡುವಂತೆ ತಾನು
ವಿಧಾನಸಭಾಧ್ಯಕ್ಷರಿಗೆ ಸೂಚಿಸಿದ್ದನ್ನು ಮುಖ್ಯಮಂತ್ರಿಯವರು ತಮ್ಮ ಪತ್ರದಲ್ಲಿ ಟೀಕಿಸಿದ್ದನ್ನು ’ಅರ್ಥಹೀನ, ಬುಡ ರಹಿತ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧ’ ಎಂದು ರಾಜ್ಯಪಾಲರು ಬಣ್ಣಿಸಿದರು.
·
ಸುಪ್ರೀಂಕೋರ್ಟಿಗೆ
ಸಲ್ಲಿಸಿದ ತನ್ನ ಅರ್ಜಿಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ’ದಿಗ್ಬಂಧನದಲ್ಲಿ’ ಇರುವ
ಪಕ್ಷದ ಶಾಸಕರನ್ನು ಬಿಡುಗಡೆಗೊಳಿಸಲು ಮಧ್ಯಪ್ರವೇಶ ಮಾಡುವಂತೆ ಕೋರಿತು. ಈ ಶಾಸಕರ ಗೈರುಹಾಜರಿಯಲ್ಲಿ
ವಿಶ್ವಾಸಮತ ಯಾಚನೆ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನ್ಯಾಯಾಲಯಕ್ಕೆ ತಿಳಿಸಿತು.
·
ಕಳೆದ
ವಾರಾಂತ್ಯದಲ್ಲಿ ರಾಜ್ಯಪಾಲ ಲಾಲಜಿ ಟಂಡನ್ ಅವರು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರಿಗೆ
ಸೋಮವಾರ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಇದನ್ನು ವಿರೋಧಿಸಿದ ಕಾಂಗ್ರೆಸ್ ರಾಜ್ಯಪಾಲರು ಇಂತಹ ಆದೇಶಗಳನ್ನು ವಿಧಾನಸಭೆಗೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು.
·
೨೨
ಮಂದಿ ಶಾಸಕರ ನಿರ್ಗಮನದ ಬಳಿಕ ಸರ್ಕಾರ ರಚಿಸುವ ಬಗ್ಗೆ ವಿಶ್ವಾಸ ಹೊಂದಿರುವ ಬಿಜೆಪಿ, ತತ್ ಕ್ಷಣವೇ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಆಗ್ರಹಿಸಿದೆ.
·
ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ’ಕೊರೋನಾ ಕೂಡಾ ಕಮಲನಾಥ್ ಸರ್ಕಾರವನ್ನು ರಕ್ಷಿಸಲು ಸಾಧ್ಯವಿಲ್ಲ. ಅವರು ಬಹುಮತವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ, ಅದ್ದರಿಂದ ವಿಶ್ವಾಸಮತ ಯಾಚನೆಯನ್ನು ನಿವಾರಿಸಿಕೊಂಡಿದ್ದಾರೆ’ ಎಂದು
ಸೋಮವಾರ ವಿಧಾನಸಭಾ ಕಲಾಪ ಮುಂದೂಡಿಕೆಯ ಬಳಿP ಆಪಾದಿಸಿದ್ದರು.
·
ಇದಕ್ಕೆ
ಮುನ್ನ ಸೋಮವಾರ ತಮ್ಮ ಭಾಷಣ ಮುಗಿದ ತತ್ ಕ್ಷಣವೇ ವಿಶ್ವಾಸಮತ ಕೋರುವಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಸೂಚಿಸಿದ್ದರು.
·
೨೨
ಬಂಡಾಯ ಶಾಸಕರ ಪೈಕಿ ಆರು ಮಂದಿ ಸಚಿವರ ರಾಜೀನಾಮೆಗಳನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಿದ್ದರಿಂದ ಕಾಂಗ್ರೆಸ್ ಸದಸ್ಯ ಬಲ ೧೦೮ಕ್ಕೆ ಕುಸಿದಿದೆ.
ಪಕ್ಷವು ೭ ಮಂದಿ ಮಿತ್ರ
ಪಕ್ಷಗಳ ಶಾಸಕರ ಬೆಂಬಲವನ್ನು ಹೊಂದಿದೆ.
·
ಎಲ್ಲ
ಶಾಸಕರ ರಾಜೀನಾಮೆಗಳು ಅಂಗೀಕಾರವಾದರೆ ಕಾಂಗೆಸ್ಸಿನ ಬಲವು ಬಹುಮತದ ನೂತನ ಮಾನದಂಡವಾದ ೧೦೪ಕ್ಕಿಂತ ಕೆಳಕ್ಕೆ ಇಳಿಯುತ್ತದೆ ಮತ್ತು ೧೦೭ ಸದಸ್ಯರನ್ನು ಹೊಂದಿರುವ ಬಿಜೆಪಿ ಸರ್ಕಾರವನ್ನು ರಚಿಸಲು ಸಾಧ್ಯವಾಗುತ್ತದೆ. ಮಧ್ಯಪ್ರದೇಶ ವಿಧಾನಸಭೆಯು ಪ್ರಸ್ತುತ ೨೩೦ ಸದಸ್ಯರ ಪೈಕಿ ೨೨೨ ಸದಸ್ಯರನ್ನು ಹೊಂದಿದೆ. ಪ್ರಸ್ತುತ ವಿಧಾನಸಭೆಯ ಬಹುಮತದ ಮಾನದಂಡ ಸಂಖ್ಯೆ ೧೧೨ ಆಗಿದೆ.
No comments:
Post a Comment