ಭೀತಿ ಬೇಕಿಲ್ಲ, ಆಹಾರ, ಔಷಧ ಬೇಕಾದಷ್ಟಿದೆ: ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ ೧೯ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಅವಧಿಯಲ್ಲಿ ಆಹಾರ ಮತ್ತು ಔಷಧ ಸೇರಿದಂತೆ ಯಾವುದೇ ಅಗತ್ಯವಸ್ತುಗಳಿಗೆ ತೊಂದರೆ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ 2020 ಏಪ್ರಿಲ್ 14ರ ಮಂಗಳವಾರ ಭರವಸೆ ನೀಡಿದರು.
ಇದೇ ವೇಳೆಯಲ್ಲಿ ಕೊರೋನಾವೈರಸ್ಸನ್ನು ಹತೋಟಿಯಲ್ಲಿ ಇಡಲು ಕೈಗೊಳ್ಳಲಾಗಿರುವ ಕ್ರಮಗಳ ಜಾರಿ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಸಮನ್ವಯನ್ನು ಗೃಹ ಸಚಿವರು ಶ್ಲಾಘಿಸಿದರು.
ದಿಗ್ಬಂಧನದ ವೇಳೆಯಲ್ಲಿ ಎಲ್ಲ ಅಗತ್ಯವಸ್ತುಗಳ ಸುಲಲಿತ ಸರಬರಾಜು ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗೆ ಸಮರ್ಥನೆಯಾಗಿ ಶಾ ಅವರ ಭರವಸೆಯೂ ಬಂದಿತು.
ಪ್ರಧಾನಿ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಂಗಳವಾರ ಬೆಳಗ್ಗೆ ಮಾಡಿದ ಭಾಷಣದಲ್ಲಿ ಅಗತ್ಯವಸ್ತುಗಳ ಸರಬರಾಜಿಗೆ ಉಂಟಾಗುತ್ತಿರುವ ಅಡೆತಡೆಗಳನ್ನು ಕ್ರಮೇಣ ನಿವಾರಿಸಲಾಗುವುದು ಎಂಬುದಾಗಿ ಭರವಸೆ ನೀಡಿದ್ದರು.
ಆಹಾರ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ ಎಂದೂ ಪ್ರಧಾನಿ ಮೋದಿ ಹೇಳಿದ್ದರು. ಈ ಅಂಶವನ್ನು ಪುನರುಚ್ಚರಿಸಿದ ಶಾ ಭಯಭೀತರಾಗಬೇಡಿ ಎಂದು ನಿವಾಸಿಗಳಿಗೆ ಸಲಹೆ ಮಾಡಿದರು.
’ಆಹಾರ, ಔಷಧ ಮತ್ತು ದೈನಂದಿನ ಅಗತ್ಯವಸ್ತುಗಳ ದಾಸ್ತಾನು ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ, ಯಾರೇ ನಾಗರಿಕರೂ ಭಯಗ್ರಸ್ತರಾಗಬೇಕಾದ ಅಗತ್ಯವಿಲ್ಲ’ ಎಂಬುದಾಗಿ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಬಿಡುಗಡೆ ಮಾಡಿರುವ ಶಾ ಅವರ ಹೇಳಿಕೆ ತಿಳಿಸಿತು.
ಶಾ ಅವರ ಸಚಿವಾಲಯವು ಕೋವಿಡ್-೧೯ರ ಸ್ಪಂದನೆಯನ್ನು ಜಾಗತಿಕ ಮಟ್ಟದ ಈ ಸಾಂಕ್ರಾಮಿಕದ ಜೊತೆ ವ್ಯವಹರಿಸುವಲ್ಲಿ ವಿಪತ್ತು ನಿರ್ವಹಣಾ ಕ್ರಮದ ಮೂಲಕ ಸಮನ್ವಯಗೊಳಿಸುತ್ತಿದೆ. ರಾಜ್ಯಗಳು ಮತ್ತು ಕೇಂದ್ರದ ನಡುವಣ ಸಮನ್ವಯ ಶ್ಲಾಘನೀಯ ಎಂದು ಶಾ ನುಡಿದರು.
ಕೋವಿಡ್-೧೯ರ ವಿರುದ್ದದ ಸಮರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಶ್ಲಾಘನೀಯ ಸಮನ್ವಯ ಕಂಡು ಬರುತ್ತಿದೆ. ಎಲ್ಲ ನಾಗರಿಕರೂ ಲಾಕ್‌ಡೌನ್ ನಿಯಮಗಳನ್ನು ಸಮರ್ಪಕವಾಗಿ ಅನುಸರಿಲು ಸಾಧ್ಯವಾಗುವಂತೆ ಮತ್ತು ಯಾರೋಬ್ಬರೂ ತಮ್ಮ ದೈನಂದಿನ ಅಗತ್ಯಗಳನ್ನು ಪಡೆಯುವಲ್ಲಿ ಯಾವುದೇ ತೊಂದರೆ ಎದುರಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಈ ಸಮನ್ವಯವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ ಎಂದು ಶಾ ಹೇಳಿದರು.
ಇದಕ್ಕೆ ಮುನ್ನ ಮಾತನಾಡಿದ್ದ ಪ್ರಧಾನಿಯವರು ದಿಗ್ಬಂಧನ ವಿಸ್ತರಣೆಗೆ ಸಂಬಂಧಿಸಿದಂತೆ ಬಹುತೇಕ ರಾಜ್ಯಗಳಲ್ಲಿ ಏಕತೆ ಇದೆ, ಸುಮಾರು ೮ ರಾಜ್ಯಗಳು ಸ್ವತಃ ಏಪ್ರಿಲ್ ೩೦ರವರೆಗೆ ನಿರ್ಬಂಧಗಳನ್ನು
ಕೇಂದ್ರವು ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ವಿಸ್ತರಿಸಿವೆ ಎಂದು ಪ್ರಧಾನಿ ಹೇಳಿದರು.
ಕೊರೋನಾವೈರಸ್ ಸಾಂಕ್ರಾಮಿಕದ ಹರಡುವಿಕೆಯಿಂದಾಗಿ ಅಪಾಯಕ್ಕೆ ಒಳಗಾಗಿರುವ ಜನರ ಪ್ರಾಣಗಳನ್ನು ರಕ್ಷಿಸಲು ಮೇ ೩ರವರೆಗೆ ರಾಷ್ಟ್ರವಾಪಿ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾ ಹೇಳಿದರು.
ಮಾರ್ಚ್ ೨೩ರಂದು ಮೊದಲ ಬಾರಿಗೆ ಲಾಕ್‌ಡೌನ್ ಘೋಷಣೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಜನರ ಜೀವಗಳನ್ನು ರಕ್ಷಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದರು.
ದಿಗ್ಬಂಧನದ ಪರಿಣಾಮವಾಗಿ ವ್ಯವಹಾರೋದ್ಯಮಗಳು ಅಸ್ತವ್ಯಸ್ತಗೊಂಡದ್ದರಿಂದಾಗಿ ರಾಷ್ಟ್ರವು ಭಾರೀ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದೆ. ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಅಥವಾ ನಿರ್ಮಾಣ ಕ್ಷೇತ್ರ ಮತ್ತು ಉತ್ಪಾದನಾ ವಲಯದ ದಿನಗೂಲಿ ನೌಕರರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಪ್ರಧಾನಿಯವರು ಇದಕ್ಕೆ ಮುನ್ನ ಬೆಳಗ್ಗೆ ಮಾಡಿದ ಭಾಷಣದಲ್ಲಿ ಬಡವರು, ಕಾರ್ಮಿಕರು ಮತ್ತು ರೈತರ ಸಂಕಷ್ಟ ನಿವಾರಣೆಗೆ ಸರ್ಕಾg ಅಗ್ರ ಪ್ರಾಶಸ್ತ್ಯ ನೀಡಿದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಬುಧವಾರ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದರು.
ಇದಕ್ಕೆ ಮುನ್ನ ಸರ್ಕಾರವು ಕೈಗಾರಿಕೆಗಳು, ವ್ಯವಹಾರ ಮತ್ತು ವೇತನ ವರ್ಗ ಹಾಗೂ ದಿನಗೂಲಿ ಕಾರ್ಮಿಕರು ಸೇರಿದಂತೆ ಬಡ ಜನರಿಗಾಗಿ ೨.೭೧ ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಿತ್ತು.
ದಿಗ್ಬಂಧನ ಜಾರಿ ನಿಟ್ಟಿನಲ್ಲಿ ಸರ್ಕಾgಕ್ಕೆ ನೀಡುತ್ತಿರುವ ಸಹಕಾರಕ್ಕಾಗಿ ಜನರನ್ನು ಪ್ರಶಂಸೆ ಮಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಏಕತೆ ಪ್ರದರ್ಶನದಲ್ಲಿ ಭಾರತವು ವಿಶ್ವಕ್ಕೇ ಮಾದರಿಯಾಗಿದೆ ಎಂದೂ ಹೇಳಿದರು.
No comments:
Post a Comment