Tuesday, April 14, 2020

ಕೊರೋನಾ ಪರೀಕ್ಷಾ ಕಿಟ್ ಖರೀದಿ ವಿಳಂಬ: ರಾಹುಲ್ ಟೀಕೆ


ಕೊರೋನಾ ಪರೀಕ್ಷಾ ಕಿಟ್ ಖರೀದಿ ವಿಳಂಬ: ರಾಹುಲ್ ಟೀಕೆ
ನವದೆಹಲಿ: ಕೋವಿಡ್ -೧೯ ಪರೀಕ್ಷಾ ಕಿಟ್ ಖರೀದಿಯಲ್ಲಿನ ವಿಳಂಬಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2020 ಏಪ್ರಿಲ್ 14ರ ಮಂಗಳವಾರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಏಪ್ರಿಲ್ ಇಲ್ಲವೇ ಏಪ್ರಿಲ್ ೧೦ ರಂದು ದೇಕ್ಕೆ ತಲುಪಬೇಕಾಗಿದ್ದ ಕ್ಷಿಪ್ರ ಪರೀಕ್ಷಾ ಕಿಟ್‌ಗಳು, ಈಗ ಏಪ್ರಿಲ್ ೧೫ ರೊಳಗೆ ತಲುಪಲಿವೆ ಎಂಬುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಪ್ರಕಟಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಕೇಂದ್ರ ಸರ್ಕಾರವನ್ನು ಜಗ್ಗಾಡಿದರು.
ಕಿಟ್‌ಗಳನ್ನು ಕೊರೋನವೈರಸ್ ರೋಗವನ್ನು ಹಾಟ್‌ಸ್ಪಾಟ್‌ಗಳು ಮತ್ತು ಹತೋಟಿ ವಲಯಗಳಲ್ಲಿ ಮಾತ್ರವಲ್ಲದೆ ವೈರಸ್‌ನಿಂದ ಮುಕ್ತವಾಗಿರುವ ಪ್ರದೇಶಗಳಲ್ಲಿಯೂ ವ್ಯಾಪಕ ಮತ್ತು ತ್ವರಿತ ಪರೀಕ್ಷೆ ನಡೆಸಲು ಸಾಧ್ಯವಾಗುವಂತೆ ಮಾಡುವ ಮುಂದಿನ ಹಂತಕ್ಕಾಗಿ ಅತ್ಯಾಧುನಿಕ ಕೋವಿಡ್-೧೯ ಕ್ಷಿಪ್ರ ಪರೀಕ್ಷಾ ಕಿಟ್‌ಗಳಿಗೆ ಭಾರತ ಆದೇಶ ನೀಡಿದೆ.

ತ್ವರಿತ ಪರೀಕ್ಷೆ ಕಿಟ್‌ಗಳು (ರಾಪಿಡ್ ಟೆಸ್ಟ್ ಕಿಟ್‌ಗಳು) ಅಥವಾ ಆರ್‌ಟಿಕೆಗಳು ರಕ್ತ ಪರೀಕ್ಷಾ ಕಿಟ್‌ಗಳಾಗಿದ್ದು,  ಪರೀಕ್ಷಿಸಿದವರ ಮಾದರಿಗಳಲ್ಲಿ ಪ್ರತಿಕಾಯಗಳನ್ನು ಹುಡುಕುತ್ತವೆ. ಪರೀಕ್ಷೆ ಪಾಸಿಟವ್ ಆದರೆ ಪರೀಕ್ಷೆಗೊಳಗಾದ ವ್ಯಕ್ತಿ ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂದು ಅರ್ಥ.

"ಪ್ರತಿ ೧೦ ಲಕ್ಷ (ಮಿಲಿಯನ್) ಭಾರತೀಯರಿಗೆ ಕೇವಲ ೧೪೯ ಪರೀಕ್ಷೆಗಳೊಂದಿಗೆ, ನಾವು ಈಗ ಲಾವೋಸ್ (೧೫೭), ನೈಜರ್ (೧೮೨) ಮತ್ತು ಹೊಂಡುರಾಸ್ (೧೬೨) ದೇಶಗಳ ಸಾಲಿನಲ್ಲಿ ಇದ್ದೇವೆ. ಸಾಮೂಹಿಕ ಪರೀಕ್ಷೆಯು ವೈರಸ್ ವಿರುದ್ಧ ಹೋರಾಡುವ ಕೀಲಿಯಾಗಿದೆ. ಪ್ರಸ್ತುತ ನಾವು ಆಟದಲ್ಲಿ ಎಲ್ಲಿಯೂ ಇಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ಹರಡದಂತೆ ತಡೆಯಲು ಮಾರ್ಚ್ ೨೫ರಂದು ಹೇರಿದ್ದ ೨೧ ದಿನಗಳ ದಿಗ್ಬಂಧನವನ್ನು ಮೇ ೦೩ರವರೆಗೆ ಇನ್ನೂ ೧೯ ದಿನ ವಿಸ್ತರಿಸಿದ ದಿನವೇ ದೇಶದಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳು ೧೦,೩೬೩ಕ್ಕೆ ಏರಿದ್ದು, ಸಾವಿನ ಸಂಖ್ಯೆ ೩೩೯ಕ್ಕೆ ಏರಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ  ಟ್ವೀಟಾಸ್ತ್ರ ಪ್ರಯೋಗ ಮಾಡಿದ್ದಾರೆ.

ಗುಂಪುಗಳಲ್ಲಿ (ಕ್ಲಸ್ಟರ್) ವೈರಸ್ ಸೋಂಕುಗಳ ವ್ಯಾಪ್ತಿಯನ್ನು ಗುರುತಿಸುವ ಕ್ಷಿಪ್ರ ಮಾರ್ಗವಲ್ಲದೆ, ಕೋವಿಡ್ -೧೯ಕ್ಕೆ ಕಾರಣವಾಗುವ ಸಾರ್ಸ್-ಕೋವಿ - ವೈರಸ್‌ಗೆ ಯಾರು ಪ್ರತಿರಕ್ಷೆಯನ್ನು ಹೊಂದಿದ್ದಾರೆಂದು ನಿರ್ಧರಿಸಲು ವಿಶ್ವಾದ್ಯಂತ ದೇಶಗಳು ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಬಳಸಲು ಯತ್ನಿಸುತ್ತಿವೆ.

ಪ್ರಸ್ತುತ ಬಳಕೆಯಲ್ಲಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗಿಂತ ಭಿನ್ನವಾಗಿ ಆರ್‌ಟಿಕೆಗಳು ೩೦ ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತವೆ, ಆರ್‌ಟಿ -ಪಿಸಿಆರ್ ಪರೀಕ್ಷೆಯಲ್ಲಿ ಫಲಿತಾಂಶ ಪಡೆಯಲು ಐದು ಗಂಟೆ ಬೇಕಾಗುತ್ತದೆ.

ಆದಾಗ್ಯೂ ನೆಗೆಟಿವ್ ಆರ್‌ಟಿಕೆ ಫಲಿತಾಂಶಕ್ಕೆ ಪೂರಕವಾಗಿ ಆರ್‌ಟಿ - ಪಿಸಿಆರ್ ಪರೀಕ್ಷೆಯಿಂದ ಅದು ದೃಢಪಡುವುದು ಅಗತ್ಯ ಎಂದು ಐಸಿಎಂಆರ್‌ನ ಶಿಷ್ಟಾಚಾರ ಹೇಳುತ್ತದೆ.

ಈಗಾಗಲೇ ನೀಡಲಾಗಿರುವ ೫೦೦,೦೦೦ ಕಿಟ್‌ಗಳ  ಆರ್ಡರ್ ಹೊರತುಪಡಿಸಿ, ಕಂತುಗಳಲ್ಲಿ ತಲುಪಿಸಲು . (೪೫ ಲಕ್ಷ) ಮಿಲಿಯನ್ ನಷ್ಟು ಹೆಚ್ಚು ಕ್ಷಿಪ್ರ ಪರೀಕ್ಷಾ ಕಿಟ್‌ಗಳಿಗಾಗಿ ಐಸಿಎಂಆರ್ ಏಪ್ರಿಲ್ ೧೧ ರಂದು ಟೆಂಡರ್ ನೀಡಿದೆ. ಮೊದಲ ಕಂತು ಮೇ ರೊಳಗೆ ಮತ್ತು ಅಂತಿಮ ಕಂತನ್ನು ಮೇ ೩೧ ರೊಳಗೆ ಪಡೆಯುವ ಯೋಜನೆ ಇದೆ.

ಮಾರ್ಚ್ ೩೦ ರಂದು ಭಾರತವು ಚೀನಾದ ಪೂರೈಕೆದಾರರಿಗೆ ೫೦೦,೦೦೦ ಕಿಟ್‌ಗಳನ್ನು ಪೂರೈಸುವಂತೆ ಆದೇಶ ನೀಡಿತ್ತು. ಇದಲ್ಲದೆ, ಭಾರತದ ಹಲವಾರು ರಾಜ್ಯಗಳೂ ಆರ್‌ಟಿಕೆಗಳಿಗೆ ಆರ್ಡರ್ ನೀಡಿವೆ.

No comments:

Advertisement