Friday, April 3, 2020

ಕೊರೋನಾ ಕತ್ತಲು ಓಡಿಸಲು ‘ಬೆಳಕಿನ ಸಂಕಲ್ಪ’: ಪ್ರಧಾನಿ ಮೋದಿ ಕರೆ

ಕೊರೋನಾ ಕತ್ತಲು ಓಡಿಸಲು  ಬೆಳಕಿನ ಸಂಕಲ್ಪ
ಏಪ್ರಿಲ್ 5ರ  ರಾತ್ರಿ  9 ಗಂಟೆಗೆ ‘ಬೆಳಕು’ ಹರಿಸಲು ಪ್ರಧಾನಿ ಕರೆ
ನವದೆಹಲಿ:  2020 ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಗೆ ಸರಿಯಾಗಿ ನಿಮಿಷಗಳ ಕಾಲ ದೇಶಾದ್ಯಂತ ಮನೆಗಳಲ್ಲಿ ಲೈಟುಗಳನ್ನು ಆರಿಸಿ, ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫ್ಲಾಷ್ ಲೈಟುಗಳನ್ನು ಬೆಳಗುವ ಮೂಲಕ ಕೊರೋನಾವೈರಸ್ ಅಂಧಕಾರವನ್ನು ಕೊನೆಗೊಳಿಸಲುಬೆಳಕಿನ ಸಂಕಲ್ಪಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು  2020 ಏಪ್ರಿಲ್ 03ರ ಶುಕ್ರವಾರ ದೇಶದ ಜನತೆಗೆ ಕರೆ ನೀಡಿದರು.

ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಯ ವೇಳೆಗೆ ತಾವು ಇರುವ ಜಾಗಗಳಲ್ಲಿಯೇ ಮನೆಬಾಗಿಲು ಇಲ್ಲವೇ ತಾರಸಿಗೆ ಬಂದು ಜ್ಯೋತಿ ಬೆಳಗುವ ಮೂಲಕ ಕೊರೋನಾವೈರಸ್ ಅಂಧಕಾರ ವಿರುದ್ಧದ ಹೋರಾಟದಲ್ಲಿ ದೇಶದ ೧೩೦ ಕೋಟಿ ಭಾರತೀಯರು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಬೇಕು ಎಂದು ಪ್ರಧಾನಿ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದರು.

ಜ್ಯೋತಿ ಬೆಳಗುವ ವೇಳೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಮತ್ತು ಗುಂಪುಗೂಡಬಾರದು ಎಂದು ಪ್ರಧಾನಿ ಪುರುಚ್ಚರಿಸಿದರು. ಜನರು ಮನೆಗಳ ಒಳಗೇ ವಾಸ್ತವ್ಯ ಹೂಡಬೇಕು. ಹೊರಬರುವುದಾಗಲೀ, ಮೆರವಣಿಗೆ ನಡೆಸುವುದಾಗಲೀ ಮಾಡಬಾರದು ಎಂದು ಅವರು ನುಡಿದರು.

ಮಾರ್ಚ್ ೨೪ರಂದು ಆರಂಭವಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ವೇಳೆಯಲ್ಲಿ ಜನತೆ ಅಭೂತಪೂರ್ವ ಶಿಸ್ತು ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು.

ಕೊರೋನಾ ಬಿಕ್ಕಟ್ಟಿನ ವೇಳೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವವರೆಗೆ ಕೃತಜ್ಞತೆ ಸಲ್ಲಿಸಲು ದೇಶದ ಹಲವಡೆಗಳಲ್ಲಿ ಮಾರ್ಚ್ ೨೨ರ ಸಂಜೆ ಚಪ್ಪಾಳೆ ತಟ್ಟಿದ ಹಾಗೂ ಜಯಗಂಟೆ ಮೊಳಗಿಸಿದ ವೇಳೆಯಲ್ಲಿ ಜನರು ಗುಂಪುಗೂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರದ ತಮ್ಮ ಸಂದೇಶದಲ್ಲಿ ಪ್ರಧಾನಿಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆಗೆ ಭಂಗ ಬರಬಾರದು ಎಂದು ಪುನರಪಿ ಮನವಿ ಮಾಡಿದರು.

ಪ್ರಸ್ತುತ ದಿಗ್ಬಂಧನ ವೇಳೆಯಲ್ಲಿ ಹಲವರಿಗೆ ಮನೆಯಲ್ಲಿ ಏಕಾಂಗಿ ಮನೋಭಾವ ಕಾಡಿರಬಹುದು, ಆದರೆ ೧೩೦ ಕೋಟಿ ಭಾರತೀಯರ ಒಗ್ಗಟ್ಟಿನ ಬಲ ಪ್ರತಿಯೊಬ್ಬನ ಜೊತೆಗೂ ಇದೆ ಎಂಬುದನ್ನು ಅವರು ಮರೆಯಬಾರದು ಎಂದು ಮೋದಿ ನುಡಿದರು.

ಕಾಲ ಕಾಲಕ್ಕೆ ವ್ಯಕ್ತವಾಗಿರುವ ಪರಸ್ಪರ ಹಂಚಿಕೊಳ್ಳಲಾಗಿರುವ ಶಕ್ತಿಯ ಮಹಾನತೆ, ಮಹಿಮೆ ಮತ್ತು ದೈವತ್ತದ ಅನುಭವನ್ನು ರಾಷ್ಟ್ರದ ಜನತೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

ಎಲ್ಲ ದೀಪಗಳನ್ನು ಆರಿಸಿ, ತಮ್ಮ ಬಾಗಿಲುಗಳಲ್ಲಿ ಅಥವಾ ಬಾಲ್ಕನಿಗಳಲ್ಲಿ ಹಣತೆ, ದೀಪ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫೋನುಗಳ ಫ್ಲ್ಯಾಷ್ಲೈಟುಗಳನ್ನು ಬೆಳಗಿದಾಗ  "ನಾವೆಲ್ಲರೂ ಸಾಮೂಹಿಕ ಸಂಕಲ್ಪದೊಂದಿಗೆ ಹೋರಾಡುತ್ತಿದ್ದೇವೆ" ಎಂಬ ಭಾವವು ಪ್ರಕಾಶಮಾನತೆಯ "ಸೂಪರ್ ಪವರ್"ನಲ್ಲಿ ಹೊರಹೊಮ್ಮುತ್ತದೆ ಎಂದು ಪ್ರಧಾನಿ ಹೇಳಿದರು.

ಜ್ವಾಜ್ಯಲ್ಯಮಾನ ಪ್ರಕಾಶದಲ್ಲಿ ನಾವು ಏಕಾಂಗಿಗಳಲ್ಲ. ಯಾರೂ ಏಕಾಂಗಿಗಳಲ್ಲ ಎಂಬ ಸಂಕಲ್ಪವನ್ನು ನಾವು ಮಾಡಿಕೊಳ್ಳಬೇಕುಎಂದು  ಮೋದಿ  ನುಡಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದ ಪ್ರಧಾನಿ, ’ಸಾಂಕ್ರಾಮಿಕ ಪಿಡುಗನ್ನು ತಡೆಯಲು ಇರುವ ಖಚಿತವಾದ ಮಾರ್ಗ ಇದುಎಂದು ಹೇಳಿದರು. 
ದಿಗ್ಬಂಧನದಿಂದಾಗಿ ತೊಂದರೆಗೆ ಒಳಗಾಗಿರುವ ಭಾರೀ ಸಂಖ್ಯೆಯ ಬಡವರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವಂತೆ ಜನತೆಗೆ ಮನವಿ ಮಾಡಿದ ಪ್ರಧಾನಿ, ’ಅವರಿಗೆ ನೆರವಾಗಿ. ಕೊರೋನಾವೈರಸ್ ಹರಡಿದ ಕತ್ತಲಿನಿಂದ ಬೆಳಕು ಮತ್ತು ಭರವಸೆಯತ್ತ ಹೆಜ್ಜೆಹಾಕಿಎಂದು ಹೇಳಿದರು. 
ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ಹರಡಿರುವ ಕತ್ತಲಿನಲ್ಲಿ ನಾವು ನಿರಂತರವಾಗಿ ಬೆಳಕು ಮತ್ತು ಭರವಸೆಯತ್ತ ಚಲಿಸುತ್ತಿರಬೇಕು. ಅತ್ಯಂತ ತೊಂದರೆಗೆ ಒಳಗಾದ ನಮ್ಮ ಬಡ ಸಹೋದರರು ಮತ್ತು ಸಹೋದರಿಯರನ್ನು ನಮ್ಮ ಜೊತೆಗೇ ಭ್ರಮನಿರಸನದಿಂದ ಭರವಸೆಯತ್ತ ಒಯ್ಯಬೇಕು. ಬಿಕ್ಕಟ್ಟಿನಿಂದ ಉಂಟಾಗಿರುವ ಅಸ್ಥಿರತೆಯ ಕತ್ತಲನ್ನು ಬೆಳಕು ಮತ್ತು ಸ್ಥಿರತೆಯತ್ತ ಚಲಿಸುವ ಮೂಲಕ ನಾವು ಕೊನೆಗೊಳಿಸಬೇಕುಎಂದು ಪ್ರಧಾನಿ ಹೇಳಿದರು. 
ಮಾತೆ ಭಾರತಿ ಮತ್ತು ಆಕೆಯ ೧೩೦ ಕೋಟಿ ಮಕ್ಕಳ ಸಾಮೂಹಿಕ ಸಂಕಲ್ಪದ ಬಗ್ಗೆ ಚಿಂತಿಸಬೇಕು. ಇದು ಬಿಕ್ಕಟ್ಟಿನ ಘಳಿಗೆಯಲ್ಲಿ ನಮಗೆ ಹೋರಾಡಲು ಶಕ್ತಿಯನ್ನೂ ಆತ್ಮವಿಶ್ವಾಸವನ್ನು ನೀಡುತ್ತದೆಎಂದು ಮೋದಿ ನುಡಿದರು.

ಸಂಸ್ಕೃತ ಶ್ಲೋಕ ಒಂದನ್ನು ಉಲ್ಲೇಖಿಸಿದ ಪ್ರಧಾನಿನಮ್ಮ ಉತ್ಸಾಹ ಮತ್ತು ಸ್ಫೂರ್ತಿಗೆ ಮಿಗಿಲಾದ ಯಾವುದೇ ದೊಡ್ಡ ಶಕ್ತಿ ಜಗತ್ತಿನಲ್ಲಿ ಇಲ್ಲಎಂದು ಹೇಳಿದರು.

೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧದ ೯ನೇ ದಿನ ಇದು ಎಂದು ನೆನಪಿಸಿದ ಪ್ರಧಾನಿ ಅವಧಿಯಲ್ಲಿ ಜನರು ಪ್ರದರ್ಶಿಸಿದ ಶಿಸ್ತು ಮತ್ತು ಸೇವಾ ಸ್ಫೂರ್ತಿ ಅಭೂತಪೂರ್ವಎಂದು ಶ್ಲಾಘಿಸಿದರು.

ಮಾರ್ಚ್ ೨೨ರಂದು ಕೊರೋನಾವೈರಸ್ ವಿರುದ್ಧದ ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಜನತೆ ಧನ್ಯವಾದ ಅರ್ಪಿಸಿದ ರೀತಿ ಹಲವಾರು ರಾಷ್ಟ್ರಗಳಿಗೆ ಅನುಸರಿಸಲು ಮಾದರಿಯನ್ನು ಹಾಕಿಕೊಟ್ಟಿತು ಎಂದು ಮೋದಿ ಹೇಳಿದರು. ಇದು vನ್ನ ಸಾಮೂಹಿಕ ಬಲವನ್ನು ಅರಿತುಕೊಳ್ಳಲು ಮತ್ತು ಕೊರೋನಾವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾqಲು ಸಾಧ್ಯ ಎಂಬದನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರಕ್ಕೆ ನೆರವಾಯಿತು ಎಂದು ಪ್ರಧಾನಿ ನುಡಿದರು.

ಕಳೆದ ತಿಂಗಳು ಪ್ರಧಾನಿಯವರು ಮಾರ್ಚ್ ೧೯ ಮತ್ತು ಮಾರ್ಚ್ ೨೪ರಂದು ಎರಡು ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ಮಾರ್ಚ್ ೧೯ರಂದು ಕೊರೋನಾವೈರಸ್ ವಿರುದ್ಧ ಹೋರಾಡುವ ಸಂಕಲ್ಪ ತೊಡುವಂತೆ ಮತ್ತು ಸಂಯಮ ವಹಿಸುವಂತೆ ಕರೆ ಕೊಟ್ಟಿದ್ದರು. ಮಾರ್ಚ್ ೨೨ರ ಭಾನುವಾರ ಜನತಾ ಕರ್ಫ್ಯೂ ಆಚರಿಸಲು ಅವರು ಕರೆ ನೀಡಿದ್ದರು.

ಮಾರ್ಚ್ ೨೪ರಂದು ಪ್ರಧಾನಿಯವರು ಮಾರಕ ವೈರಸ್ ಹರಡದಂತೆ ತಡೆಯುವ ಸಲುವಾಗಿ ಮತ್ತು ಅದರ  ಪ್ರಸಾರ ಸರಪಣಿಯನ್ನು ತುಂಡರಿಸುವ ಸಲುವಾಗಿ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ್ದರು.

No comments:

Advertisement