Saturday, May 30, 2020

ಭಾರತದೊಂದಿಗೆ ಗಡಿ ಬಿಕ್ಕಟ್ಟು: ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪಕ್ಕೆ ಚೀನಾ ತಿರಸ್ಕಾರ

ಭಾರತದೊಂದಿಗೆ ಗಡಿ ಬಿಕ್ಕಟ್ಟು: ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪಕ್ಕೆ ಚೀನಾ ತಿರಸ್ಕಾರ

ಬೀಜಿಂಗ್: ಚೀನಾ-ಭಾರತ ಗಡಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಪ್ರಸ್ತಾಪವನ್ನು ಚೀನಾ ನಗರದಲ್ಲಿ 2020 ಮೇ  29ರ ಶುಕ್ರವಾರ ತಿರಸ್ಕರಿಸಿತು. ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳು ಸಂವಹನ ಕಾರ್ಯವಿಧಾನಗಳನ್ನು ಹೊಂದಿವೆ ಎಂದು ಚೀನಾ ಪುನರುಚ್ಚರಿಸಿತು.

"ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇದ ಅಗತ್ಯವಿಲ್ಲ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಪ್ರಸ್ತಾಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಹಿಮಾಲಯದ ನೆರೆಹೊರೆ ದೇಶಗಳಾದ ಭಾರತ ಮತ್ತು ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್ ಎಸಿ) ಬಿಕ್ಕಟ್ಟಿ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ದರಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದರು. ಪೂರ್ವ ಲಡಾಖ್ ಮತ್ತು ಸಿಕ್ಕಿಂ ಗಡಿಯ ಬಳಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ನಡೆಯತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಟ್ರಂಪ್ ಅವರ ಪ್ರಸ್ತಾಪ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಇತ್ತೀಚಿನ ಹೇಳಿಕೆ ಬಂದಿದೆ.

ಅಮೆರಿಕದ ಪ್ರಸ್ತಾವ ಬಗ್ಗೆ ಭಾರತವು ನಯವಾದ ನಿರಾಕರಣೆಯನ್ನು ಗುರುವಾರ ವ್ಯಕ್ತ ಪಡಿಸಿದ ಬಳಿಕ ಚೀನಾದಿಂದ ಟ್ರಂಪ್ ಪ್ರಸ್ತಾಪಕ್ಕೆ ನಿರಾಕರಣೆ ಬಂದಿದೆ.

"ನಾನು ನಿಮಗೆ ಹೇಳಿದಂತೆ, ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಚೀನಾದ ಜೊತೆಗೆ ತೊಡಗಿಸಿಕೊಂಡಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅನುರಾಗ್ ಶ್ರೀವಾಸ್ತವ ಅವರು ನವದೆಹಲಿಯಲ್ಲಿ ಗುರುವಾರ ಟ್ರಂಪ್ ಅವರ ಟ್ವೀಟ್ ಬಗ್ಗೆ ಕೇಳಿದಾಗ ಉತ್ತರಿಸಿದ್ದರು.

"ಚೀನಾ ಮತ್ತು ಭಾರತದ ನಡುವೆ, ನಮ್ಮಲ್ಲಿ ಗಡಿ ಸಂಬಂಧಿತ ಕಾರ್ಯವಿಧಾನ ಮತ್ತು ಸಂವಹನ ಮಾರ್ಗಗಳಿವೆ. ಸಂಭಾಷಣೆ ಮತ್ತು ಸಮಾಲೋಚನೆಯ ಮೂಲಕ ನಮ್ಮ ನಡುವಿನ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇದ ಅಗತ್ಯವಿಲ್ಲ ಎಂದು ಝಾವೋ ಶುಕ್ರವಾರ ಹೇಳಿದರು.

ಝಾವೋ ಮತ್ತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್ ಕರ್ನಲ್ ರೆನ್ ಗುವಾಕಿಯಾಂಗ್ ಅವರು ಗುರುವಾರ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಗಡಿಯಲ್ಲಿನ ಪರಿಸ್ಥಿತಿ "ಸ್ಥಿರ ಮತ್ತು ನಿಯಂತ್ರಣದಲ್ಲಿದೆ ಎಂದು ಹೇಳಿದರು.

"ಸ್ಥಾಪಿತ ಗಡಿ-ಸಂಬಂಧಿತ ಕಾರ್ಯವಿಧಾನಗಳು ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಬಂಧಿತ ಸಮಸ್ಯೆಗಳನ್ನು ಸಂವಹನ ಮಾಡುವ ಮತ್ತು ಪರಿಹರಿಸುವ ಸಾಮರ್ಥ್ಯವನ್ನು ಎರಡೂ ಕಡೆಯವರು ಹೊಂದಿದ್ದಾರೆ" ಎಂದು ರೆನ್ ಗುರುವಾರ ಪತ್ರಕರ್ತರೊಂದಿಗೆ ಆನ್ಲೈನ್ ಸಂವಾದದಲ್ಲಿ ಹೇಳಿದ್ದರು.

"ನಾವು ಉಭಯ ದೇಶಗಳ ನಾಯಕರು ಒಪ್ಪಿದ ಪ್ರಮುಖ ಒಮ್ಮv ತೀರ್ಮಾನವನ್ನು ಜಾರಿಗೆ ತರುತ್ತಿದ್ದೇವೆ, ದ್ವಿಪಕ್ಷೀಯ ಒಪ್ಪಂದಗಳನ್ನು ಗಮನಿಸುತ್ತಿದ್ದೇವೆ ಮತ್ತು ಗಡಿ ಪ್ರದೇಶದಲ್ಲಿ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಭದ್ರತೆ, ಸ್ಥಿರತೆ ಮತ್ತು ಶಾಂತಿಯನ್ನು ಕಾಪಾಡಲು ಬದ್ಧರಾಗಿದ್ದೇವೆ" ಎಂದು ಝಾವೋ ತಮ್ಮ ನಿಯಮಿತ ಗೋಷ್ಠಿಯಲ್ಲಿ ನುಡಿದರು.

ನವದೆಹಲಿಯ ಜೊತೆಗೆ ವಾಗ್ಬಾಣಗಳ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಕೊಳ್ಳಲು ಚೀನಾ ಸರ್ಕಾರ ಸಧ್ಯಕ್ಕಂತೂ ಸಿದ್ಧವಿಲ್ಲ ಎಂಬ ಸಂಕೇತವನ್ನು ಹೇಳಿಕೆಗಳು ನೀಡಿವೆ.

ನೈಜ ನಿಯಂತ್ರಣ ರೇಖೆಯಾದ್ಯಂತ ತನ್ನ ಸೇನೆಯು ಅಕ್ರಮ ನಿರ್ಮಾಣಗಳನ್ನು ಮಾಡಿದೆ ಎಂಬ ಚೀನಾದ ಆರೋಪವನ್ನು ಭಾರತ ವಸ್ತುಶಃ ತಿರಸ್ಕರಿಸಿದೆ.

"ಚೀನಾದ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕೆ ಭಾರತ ಬದ್ಧವಾಗಿದೆ ಮತ್ತು ನಮ್ಮ ನಾಯಕರು ಒಪ್ಪಿದ ಒಮ್ಮತದ ನಿರ್ಧಾರ ಮತ್ತು ಒದಗಿಸಿದ ಮಾರ್ಗದರ್ಶನವನ್ನು ನಮ್ಮ ಸಶಸ್ತ್ರ ಪಡೆಗಳು ಸೂಕ್ಷ್ಮವಾಗಿ ಅನುಸರಿಸುತ್ತವೆ. ಅದೇ ಸಮಯದಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಮ್ಮ ಸಂಕಲ್ಪದಲ್ಲಿ ನಾವು ದೃಢವಾಗಿರುತ್ತೇವೆ ಎಂದು  ಶ್ರೀವಾಸ್ತವ ವಾರದ ಆರಂಭದಲ್ಲಿ ಹೇಳಿದ್ದರು.

ಇದೇ ವೇಳೆಗೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮವು ಅಮೆರಿಕ ಅಧ್ಯಕ್ಷರ ಪ್ರಸ್ತಾಪವನ್ನು ತಳ್ಳಿಹಾಕಿ ಟ್ವೀಟ್ ಮಾಡಿದೆ.

"ಇತ್ತೀಚಿನ ವಿವಾದವನ್ನು ಚೀನಾ ಮತ್ತು ಭಾರತ ದ್ವಿಪಕ್ಷೀಯವಾಗಿ ಪರಿಹರಿಸಬಹುದು. ಪ್ರಾದೇಶಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಅಲೆಗಳನ್ನು ಸೃಷ್ಟಿಸುವ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುವ ಅಮೆರಿಕದ ಬಗ್ಗೆ ಉಭಯ ದೇಶಗಳು ಎಚ್ಚರವಾಗಿರಬೇಕು ಎಂದು ರಾಷ್ಟ್ರೀಯತಾವಾದಿ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಹೇಳಿದೆ.

ಚೀನಾ ಮತ್ತು ಭಾರತಕ್ಕೆ ತಮ್ಮ ಘರ್ಷಣೆಗಳ ಪರಿಹಾರಕ್ಕೆ ಅಮೆರಿಕದ ಸಹಾಯದ ಅಗತ್ಯವಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿತವಾದ ಲೇಖನದಲ್ಲಿ ಅದು ಏಷ್ಯಾದ ಎರಡು ದೊಡ್ಡ ಶಕ್ತಿಗಳಾದ ಚೀನಾ ಮತ್ತು ಭಾರತ ಗಡಿಗಳನ್ನು ಹಂಚಿಕೊಳ್ಳುತ್ತವೆ ಎಂದು ಟ್ರಂಪ್ ಅಂತಿಮವಾಗಿ ತಿಳಿದಿದ್ದಾರೆಂದು ತೋರುತ್ತದೆ. ವರ್ಷದ ಆರಂಭದಲ್ಲಿ, ಇಬ್ಬರು ವಾಷಿಂಗ್ಟನ್ ಪೋಸ್ಟ್ ಪತ್ರಕರ್ತರು ಬರೆದ ವೆರಿ ಸ್ಟೇಬಲ್ ಜೀನಿಯಸ್ ಎಂಬ ಪುಸ್ತಕವು ಭಾರತ ಮತ್ತು ಚೀನಾ ಗಡಿಯನ್ನು ಹಂಚಿಕೊಂಡಿಲ್ಲ ಎಂಬುದಾಗಿ ಟ್ರಂಪ್ ಹೇಳಿದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಘಾತಕ್ಕೊಳಗಾಗಿದ್ದರು ಮತ್ತು ಕಳವಳಗೊಂಡಿದ್ದರು ಎಂಬುದನ್ನು  ಬಹಿರಂಗಪಡಿಸಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

ಕಳೆದ ವರ್ಷ, ಕಾಶ್ಮೀರದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಹಾಯಮತ್ತು ಮಧ್ಯಸ್ಥಿಕೆ ಮಾಡುವ  ಟ್ರಂಪ್ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿತು, ಭಾರತವು ಒತ್ತಿಹೇಳಿದ ವಿಷಯವನ್ನು ದ್ವಿಪಕ್ಷೀಯವಾಗಿ ಮಾತ್ರ ಚರ್ಚಿಸಬಹುದು. ಅಮೆರಿಕದ ಮಧ್ಯಸ್ಥಿಕೆಯ ಕೆಟ್ಟ ಇತಿಹಾಸದ ಬಗ್ಗೆ ಬಹುಶಃ ಭಾರತಕ್ಕೆ ಅರ್ಥವಾಗಿರಬಹುದು, ಇದರಲ್ಲಿ ಅಮೆರಿಕವು ಸಮಸ್ಯೆಗಳನ್ನು ಪರಿಹರಿಸುವ ಬದಲು ತೊಂದರೆಗಳನ್ನು ಮಾಡಿತು ಮತ್ತು ದ್ವಿಪಕ್ಷೀಯ ವಿವಾದಗಳನ್ನು ಬಹುಪಕ್ಷೀಯವಾಗಿ ಪರಿವರ್ತಿಸಿತು ಎಂಬುದು ಅದಕ್ಕೆ ಗೊತ್ತಾಗಿರಬಹುದು ಎಂದು ಚೀನೀ ಪತ್ರಿಕೆ ಹೇಳಿದೆ.

No comments:

Advertisement